ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಲಯನ್ಸ್ ಸಂಸ್ಥೆ ಕಚೇರಿ ಆವರಣದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಕ್ಲಬ್, ಗುಬ್ಬಿ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಗುಬ್ಬಿ ಲಯನ್ಸ್ ಕ್ಲಬ್ ಸರ್ವೀಸ್ ಟ್ರಸ್ಟ್ ನೂತನ ಕಚೇರಿ ಉದ್ಘಾಟನೆ, ಸಾರ್ವಜನಿಕರ ಉಪಯೋಗಕ್ಕಾಗಿ ನೂತನ ಉಚಿತ ಮುಕ್ತಿವಾಹನ ಲೋಕಾರ್ಪಣೆ ಮತ್ತು ಲಯನ್ಸ್ ಕ್ಲಬ್ ಪಕ್ಕದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದ್ದು ಮುಂದಿನ ಹತ್ತು ವರ್ಷದಲ್ಲಿ ಗುಬ್ಬಿ - ತುಮಕೂರು ಎರಡು ಒಂದಾಗಬಹುದು. ಗುಬ್ಬಿ ಸುತ್ತಮುತ್ತ ರೈತರು ಜಮೀನು ಮಾರಾಟ ಮಾಡಬೇಡಿ. ಮುಂದೊಂದು ದಿನ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅನುದಾನದಿಂದ ಗುಬ್ಬಿಗೆ 35 ಕೋಟಿ, ಕೆ.ಬಿ.ಕ್ರಾಸ್ ಗೆ 45 ಕೋಟಿ ಹಾಗೂ ತುಮಕೂರು ನಗರಕ್ಕೆ 85 ಕೋಟಿ ರು. ಒಟ್ಟು 165 ಕೋಟಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.ಲಯನ್ಸ್ ಸಂಸ್ಥೆಯ ಜಿಲ್ಲೆಯ 2ನೇ ಉಪರಾಜ್ಯಪಾಲರಾದ ಡಾ.ಜಿ.ಶಶಿಧರ್ ಗಂಜಿಗಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಮುಕ್ತಿ ವಾಹನವನ್ನು ಸಮಾಜಕ್ಕೆ ಲೋಕಾರ್ಪಣೆ ಮಾಡುವ ಮೂಲಕ ಪವಿತ್ರ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಲಯನ್ಸ್ ಮಹಿಳಾ ಎಂಪವರ್ ಮೆಂಟ್ ಛೇರ್ಮನ್ ಗಾಯತ್ರಿ ಗಿರೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್. ಕುಮಾರಸ್ವಾಮಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾಶಿಪತಿ ರಾಮಚಂದ್ರ ಕುಟುಂಬದವರ ವತಿಯಿಂದ ಲಯನ್ಸ್ ಸಂಸ್ಥೆಗೆ ಉಚಿತ ಮುಕ್ತಿ ವಾಹನ ದಾನ ನೀಡಿದರು.
ಶಾಸಕ ಎಸ್. ಆರ್. ಶ್ರೀನಿವಾಸ್, ಲಯನ್ಸ್ ಕ್ಲಬ್ ಛೇರ್ಮನ್ ಕೆ.ಆರ್. ಅಶೋಕ್ ಕುಮಾರ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಎಲ್.ವಿ.ಸಾವಂತ್, ಜಿ.ಆರ್. ಶಿವಕುಮಾರ್, ರಮೇಶ್ ಬಾಬು, ವಿವೇಕಾನಂದಸ್ವಾಮಿ ಎಲ್., ಬಸವರಾಜು ವಿ., ನಿವೃತ್ತ ಪ್ರಾಂಶುಪಾಲ ಜಿ.ಬಿ. ಮಲ್ಲಪ್ಪ, ಪಿ.ಎಸ್. ಸುರೇಶ್‌ಬಾಬು, ಹೊಸಹಳ್ಳಿ ಗಿರೀಶ್, ಉಂಡೆ ರಾಮಣ್ಣ, ಸಿದ್ದರಾಜು ಬಿ ಗಜ್ಜರಿ, ಡಿ.ಆರ್. ಕೀರ್ತಿರಾಜ್, ಎಸ್.ಎಸ್. ರೇಣುಕಪ್ಪ, ಪ್ರೇಮಲೀಲಾ, ರಜನಿ ಸುರೇಶ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಚನ್ನಬಸವಯ್ಯ, ಪ್ರಸಾದ್ ನರಸಿಂಹರಾಜು ರಮೇಶ್, ಪದ್ಮಕುಮಾರದಸ್ವಾಮಿ, ಎಲ್. ಕರೇಗೌಡ, ಲಕ್ಷ್ಮೀನಾರಾಯಣ್, ಜಯದೇವ್ ಕುಮಾರ್, ರಂಗಪ್ರಸಾದ್ ಮತ್ತಿತರರು ಇದ್ದರು.