ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ಮಲೆನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಹಡಪದ ಅಪ್ಪಣ್ಣನವರು ಕೂಡ ಒಬ್ಬರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಹಡಪದ ಅಪ್ಪಣ್ಣನವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಅವರಿಗೆ ಯಾವುದೇ ರೀತಿಯ ಮುಜುಗರವಾಗದಂತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಬಸವಣ್ಣನವರು ಅನುಭವ ಮಂಟಪಕ್ಕೆ ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ. ಹಡಪದ ಅಪ್ಪಣ್ಣನವರು ಒಂದು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಇವುಗಳಲ್ಲಿ 250 ವಚನಗಳು ದೊರೆತಿವೆ. ಕಾಯಕ ಹಾಗೂ ದಾಸೋಹ ನಿಷ್ಠೆಯಿಂದ ವಚನಗಳನ್ನು ರಚಿಸಿ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅವರು ವಚನಗಳ ಮೂಲಕ ಸಮಾಜದ ಕುಂದು ಕೊರತೆಗಳನ್ನು ವಿಡಂಬನಾತ್ಮಕವಾಗಿ ತಿದ್ದುವ ಕೆಲಸ ಮಾಡಿದ್ದರು. ಅವರ ಧರ್ಮಪತ್ನಿ ಲಿಂಗಮ್ಮನವರು ಸಹ ಮಹಾನ್ ವಚನಕಾರ್ತಿಯಾಗಿದ್ದು, 114 ವಚನಗಳನ್ನು ರಚಿಸಿದ್ದಾರೆಂದು ತಿಳಿಸಿದರು.ಹೋರಾಟ ಅಗತ್ಯ:
12ನೇ ಶತಮಾನದಲ್ಲಿದ್ದ ವರ್ಗ, ವರ್ಣ ಹಾಗೂ ಜಾತಿ ಸಂಘರ್ಷಗಳು ಇಂದಿನ ಆಧುನಿಕ ಯುಗದಲ್ಲೂ ಇನ್ನೂ ಹೆಚ್ಚಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಇಂತಹ ತಾರತಮ್ಯ ಮತ್ತು ಜಾತಿ ಪದ್ಧತಿಯ ವ್ಯವಸ್ಥೆಯನ್ನು ಸಮಾಜದಿಂದ ಕಿತ್ತೊಗೆಯಬೇಕಿದೆ. ಬಸವಣ್ಣನವರು ಹಾಗೂ ಹಡಪದ ಅಪ್ಪಣ್ಣನವರು ಕನಸು ಕಂಡಿದ್ದ ಶೋಷಣೆ ರಹಿತ, ಸಮಾನತೆಯ ಸಮಾಜ ಕಟ್ಟಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಿದೆ. ಅದೇ ನಾವು ಆ ಮಹಾಶರಣರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟರು.
ಸಣ್ಣ ಉಪಕಾರ ಮರೆಯಬಾರದು: ಸಿ.ಟಿ.ರವಿ
೧೨ನೇ ಶತಮಾನದ ವಚನ ಚಳವಳಿಯ ಸಂದರ್ಭವನ್ನು ಸ್ಮರಿಸಿದ ಅವರು, ಆ ಕಾಲದಲ್ಲಿ ಕಾಸಿ ಕಮ್ಮಾರನಾದ, ಬಿಸಿ ಮಡಿವಾಳನಾದ, ಹಾಸಿ ನೇಕಾರನಾದ ಹಾಗೂ ವೇದ ಓದಿ ಹಾರುವನಾದ ಎಂದು ವೃತ್ತಿಗಳ ಆಧಾರದ ಮೇಲೆ ಗುರುತಿಸಲಾಗುತ್ತಿತ್ತು. ವೃತ್ತಿಗಳಿಂದ ಜಾತಿಗಳು ನಿರ್ಮಾಣವಾದವೇ ಹೊರತು ಹುಟ್ಟಿನಿಂದ ಅಲ್ಲ. ಬಸವಣ್ಣನವರು ಕೂಡ ತಮ್ಮ ವಚನಗಳಲ್ಲಿ ಇದನ್ನೇ ಸ್ಪಷ್ಟಪಡಿಸಿದ್ದಾರೆ.
ಎಚ್.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು