ಅಪ್ಪಣ್ಣರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿ ದೀಪ: ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್

KannadaprabhaNewsNetwork | Published : Jul 22, 2024 1:20 AM

ಸಾರಾಂಶ

ಹಡಪದ ಅಪ್ಪಣ್ಣ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ

ಕನ್ನಡಪ್ರಭ ವಾರ್ತೆ ಹುಮನಾಬಾದ್

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ನಡೆದ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿ, ಹಡಪದ ಅಪ್ಪಣ್ಣ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ ಎಂದರು.

ತಹಸೀಲ್ದಾರ್ ಅಂಜುಮ್ ತಬಸುಮ್ ಮಾತನಾಡಿ, ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು, ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣರ ಆಶಯವಾಗಿತ್ತು ಎಂದರು.

ಸಮಾಜದ ಅಧ್ಯಕ್ಷ ಶಿವಶಂಕರ ಹಡಪದ ಮಾತನಾಡಿ. ಬಸವಕಲ್ಯಾಣದ ಹಡಪದ ಅಪ್ಪಣ್ಣರ ಅರವಿನ ಮನೆ ಹತ್ತಿರದ ನಾಮಫಲಕ ತೆರವು ಮಾಡಿರುವದನ್ನು ಖಂಡನಿಯ ಅದನ್ನು ಮರಳಿ ಅಳವಡಿಸಬೇಕು ಎಂದು ಕೇಳಿಕೊಂಡರು.

ಗ್ರೇಡ-2 ತಹಸೀಲ್ದಾರ್‌ ಮಂಜುನಾಥ ಪಂಚಾಳ, ಕಂದಾಯ ನೀರಿಕ್ಷಕ ರಾಹುಲ ಪ್ರಸಾದ, ಆನಂದ ಜಮಾಲೆ, ಆಕಾಶ ಹಡಪದ್, ಸಿದ್ದಪ್ಪಾ ಹಡಪದ, ರವಿಕುಮಾರ ಹೊಸಳ್ಳಿ, ರಮೇಶ ಕಲ್ಲೂರ, ನಾಗಭೂಷನ ಸಂಗಮಕರ್, ಸುಭಾಷ ಆರ್ಯ, ಲಕ್ಷ್ಮೀಪುತ್ರ ಮಾಳಗೆ, ಕಲ್ಲಪ್ಪಾ ಹಡಪದ್, ಭೀಮರಾವ ಹಡಪದ್, ನಿಲಕಂಠರಾವ ಮಾಸ್ಟರ್, ನಾಗೇಶ ಸಿಂಧನಕೇರಾ, ಪ್ರಶಾಂತ ಧೂಮನಸೂರ, ಮಾರುತಿ ಹಡಪದ ಅನೇಕರಿದ್ದರು.

Share this article