ದಲಿತ ವ್ಯಕ್ತಿಯ ಮೇಲೆ ನ್ಯಾಯವಾದಿ ಹಲ್ಲೆ ಖಂಡಿಸಿ ಮನವಿ

KannadaprabhaNewsNetwork |  
Published : Jun 19, 2025, 12:35 AM IST
ಚರಂಡಿ ಕಾಮಗಾರಿ ಮಾಡುತಿದ್ದ ದಲಿತ ವ್ಯಕ್ತಿಯ ಮೇಲೆ ನ್ಯಾಯವಾದಿ ಹಲ್ಲೆ ಮಾಡಿದ್ದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಯ ಮುಖಂಡರು ಗೋಕಾಕ ಡಿಎಸ್ಪಿ ಪೊಲೀಸ್‌ ಠಾಣೆಯ ಆವರಣದಲ್ಲಿ ಪ್ರತಿಭಟನೆ ಮಾಡಿ ತಕ್ಷಣ ತಪ್ಪಿಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು. | Kannada Prabha

ಸಾರಾಂಶ

ಚರಂಡಿ ಕಾಮಗಾರಿ ಮಾಡುತಿದ್ದ ದಲಿತ ವ್ಯಕ್ತಿಯ ಮೇಲೆ ನ್ಯಾಯವಾದಿ ಹಲ್ಲೆ ಮಾಡಿದ್ದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಯ ಮುಖಂಡರು ಗೋಕಾಕ ಡಿಎಸ್ಪಿ ಪೊಲೀಸ್‌ ಠಾಣೆಯ ಆವರಣದಲ್ಲಿ ಪ್ರತಿಭಟನೆ ಮಾಡಿ ತಕ್ಷಣ ತಪ್ಪಿಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಚರಂಡಿ ಕಾಮಗಾರಿ ಮಾಡುತಿದ್ದ ದಲಿತ ವ್ಯಕ್ತಿಯ ಮೇಲೆ ನ್ಯಾಯವಾದಿ ಹಲ್ಲೆ ಮಾಡಿದ್ದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಯ ಮುಖಂಡರು ಗೋಕಾಕ ಡಿಎಸ್ಪಿ ಪೊಲೀಸ್‌ ಠಾಣೆಯ ಆವರಣದಲ್ಲಿ ಪ್ರತಿಭಟನೆ ಮಾಡಿ ತಕ್ಷಣ ತಪ್ಪಿಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು.

ನಗರದಲ್ಲಿ ಶಾಸಕ ರಮೇಶ ಜಾರಕಿಹೊಳಿ ಕಚೇರಿಗೆ ಹಾಗೂ ಕಾಂಗ್ರೆಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ದಲಿತ ಯುವಕನ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮನವಿ ಪತ್ರ ಸಲ್ಲಿಸಿ ನಂತರ ಡಿಎಸ್ಪಿ ಕಚೇರಿಯತ್ತ ತೆರಳಿದ ದಲಿತ ಸಂಘಟನೆಗಳ ಪದಾಧಿಕಾರಿಗಳು ಗೋಕಾಕ ಡಿಎಸ್ಪಿ ಅವರಿಗೆ ಮನವಿ ಪತ್ರ ನೀಡಿದರು.ದಲಿತ ಮುಖಂಡ ಈಶ್ವರ ಗುಡಜ ಮಾತನಾಡಿ, ಕೂಲಿ ಕೆಲಸ ಮಾಡುವ ದಲಿತ ವ್ಯಕ್ತಿ ಶೆಟ್ಟೆಪ್ಪ ಮೇಸ್ತ್ರಿ ಇತನಿಗೆ ನಮ್ಮ ಜಾಗದ ವಿಷಯ ಕೆಳಲಿಕ್ಕೆ ನಿನ್ಯಾರು ಎಂದು ಮಂಜುಳಾ ಗಿಡ್ನವರ್ ಮತ್ತು ಚಂದನ ಗಿಡ್ನವರ್ ಇತ ಶೆಟ್ಟೆಪ್ಪನಿಗೆ ಸ್ಥಳದಲ್ಲಿದ್ದ ಕಬ್ಬಿನ ರಾಡದಿಂದ ಮನಸೊ ಇಚ್ಚೆ ಹಲ್ಲೆ ಮಾಡಿದ್ದ ಪರಿಣಾಮ ಗಂಭೀರ ಗಾಯಗೊಂಡ ಶೆಟ್ಟೆಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಾಲಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯಾಗಿ 3 ದಿನಗಳಾದರೂ ಸಹ ಪೊಲೀಸ್‌ ಇಲಾಖೆಯವರು ಬಂಧಿಸಿಲ್ಲ. ತಕ್ಷಣ ಅರೋಪಿಗಳನ್ನು ಬಂಧಿಸದಿದ್ದರೇ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.ದಲಿತ ಮುಖಂಡ ಸತೀಶ ಹರಿಜನ ಮಾತನಾಡಿ, ಗೋಕಾಕ ಗ್ರಾಮ ದೇವತೆಯರ ಜಾತ್ರಾಮಹೋತ್ಸವದ ನಿಮಿತ್ತ ಶಾಸಕ ರಮೇಶ ಜಾರಕಿಹೊಳಿ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳ ಕೆಲಸಕ್ಕೆ ಅಡ್ಡಿಪಡಿಸುವ ಹುನ್ನಾರದಿಂದ ದಲಿತರನ್ನು ಗುರಿಯಾಗಿಸಿಕೊಂಡು ನ್ಯಾಯವಾದಿ ಚಂದನ ಗಿಡ್ನವರ್‌ ಗೋಕಾಕದಲ್ಲಿ ಜಾತಿ ದ್ವೇಷ ಬೀಜ ಬಿತ್ತುವ ಕಾರ್ಯವನ್ನು ಮಾಡುತಿದ್ದಾರೆ. ಶಾಸಕ ರಮೇಶ ಜಾರಕಿಹೊಳಿಯವರು 30 ವರ್ಷಗಳು ಕಳೆದರು ಈ ವರೆಗೆ ಯಾವುದೇ ರೀತಿಯ ಜಾತಿ ಭೇದ ಮಾಡಿಲ್ಲ. ನಿಮಗೇನಾದರೂ ಕೇಳುವುದಿದ್ದರೇ ಶಾಸಕರ ಕಚೇರಿಗೆ ಹೋಗಿ ಕೇಳಿ ಅದನ್ನು ಬಿಟ್ಟು ದಲಿತರ ಮೇಲೆ ಹಲ್ಲೆ ಮಾಡೋದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಚಂದನ ಗಿಡ್ಡನವರ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣ ಇದೆ. ಅಷ್ಟಿದ್ದರೂ ಸಹಿತ ಮತ್ತೆ ದಲಿತನ ಮೇಲೆ ಹಲ್ಲೆ ಮಾಡಿದ್ದನ್ನು ನೋಡಿದರೇ ಇವರು ದಲಿತರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆಂಬುವುದು ಸ್ಪಷ್ಟವಾಗಿದೆ. ದಲಿತರಿಗೆ ನ್ಯಾಯ ಸೀಗಬೇಕು. ಅದಕ್ಕಾಗಿ ಪೊಲೀಸ್‌ ಇಲಾಖೆ ತಕ್ಷಣ ಇವರನ್ನು ಬಂಧಿಸಬೇಕು. ಚಂದನ ಗಿಡ್ನವರ್‌ ಅವರ ಸನ್ನದ್ದು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಮೇಶ ಮಾದರ, ಬಬಲೆಪ್ಪ ಮಾದರ, ಲಕ್ಷ್ಮಣ ತಳಗಡೆ, ಆನಂದ ತಾಯವ್ವಗೋಳ, ವೀರಭದ್ರ ಮೈಲನ್ನವರ, ವಿಠ್ಠಲ ಸಣ್ಣಕ್ಕಿ, ರವಿ ಕಡಕೋಳ, ಕಮಲಾ ಕರೆಮ್ಮನವರ, ಸುಂದರವ್ವ ಕಟ್ಟಿಮನಿ, ದೊಡ್ಡವ್ವ ತಳಗೇರಿ, ಉದಯ ಮಾದರ, ಗೋವಿಂದ ಕಳ್ಳಿಮನಿ, ಬಾಳೇಶ ಸಂತವ್ವಗೋಳ, ಅರ್ಜುನ ಗಂಡವ್ವಗೋಳ, ಪಿಎಸ್‌ಐ ಕೆ ಬಿ ವಾಲಿಕಾರ ಸೇರಿದಂತೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ದಲಿತ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ