ದುರಾಸೆ ಬದಿಗಿಟ್ಟು ಪರಿಸರ ರಕ್ಷಿಸೋಣ: ರಘುಪತಿಗೌಡ

KannadaprabhaNewsNetwork |  
Published : Jun 19, 2025, 12:35 AM IST
ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಘುಪತಿಗೌಡ ಚಾಲನೆ ನೀಡಿದರು. | Kannada Prabha

ಸಾರಾಂಶ

ಪರಿಸರದ ಮರುಸೃಷ್ಟಿ ಕಷ್ಟಸಾಧ್ಯ. ಮನುಷ್ಯರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನೈಸರ್ಗಿಕ ಸಂಪನ್ಮೂಲಗಳನ್ನು ಖಾಲಿ ಮಾಡುವ ಮುನ್ನವೇ ಅದರ ಎರಡರಷ್ಟು ಬೆಳವಣಿಗೆ ಮಾಡದ್ದೇವೆಯೋ? ಇಲ್ಲವೋ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಬ್ಯಾಡಗಿ: ನೈಸರ್ಗಿಕ ಆವಾಸ ಸ್ಥಾನಗಳು ನಮಗೆಲ್ಲರಿಗೂ ಜೀವನಾಡಿಗಳು. ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿರಬಹುದು. ಆದರೆ ಭೂಮಿ ಹಾಗೂ ಇಲ್ಲಿನ ಪರಿಸರಕ್ಕೆ ಪರ‍್ಯಾಯ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ. ನಮ್ಮ ಪರಿಸರವು ದೇವರ ಸೃಷ್ಟಿಸಿದ್ದು. ಇದನ್ನು ಉಳಿಸಲು ನಾವೆಲ್ಲರೂ ಮುಂದಾಗಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಘುಪತಿಗೌಡ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕದರಮಂಡಲಗಿ ಗ್ರಾಮದ ಕಾಂತೇಶ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಕಾರದೊಂದಿಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅರಣ್ಯ ನಾಶದಿಂದ ಜಾಗತಿಕವಾಗಿ ತಾಪಮಾನ ಹೆಚ್ಚಾಗಲು ಕಾರಣವಾಗುತ್ತಿದೆ. ಕೇವಲ ಅರಣ್ಯ ಮಾತ್ರವಲ್ಲದೇ ಹಲವು ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲಗಳು ಅಳಿವಿನಂಚಿಗೆ ಬಂದಿವೆ. ಪರಿಸರ ನಾಶದಂತಹ ಅಟ್ಟಹಾಸಕ್ಕೆ ಮನುಷ್ಯನಲ್ಲಿರುವ ದುರಾಸೆ ಒಂದೆಡೆಯಾದರೆ ಇನ್ನೊಂದೆಡೆ ಅದರ ಬಗ್ಗೆ ನಿಷ್ಕಾಳಜಿ ಹಾಗೂ ಉಳಿಸಿಕೊಳ್ಳುವಲ್ಲಿ ತೋರುತ್ತಿರುವ ಆಲಸ್ಯತನ ಕಾರಣವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಬರುವ ದಿನಗಳಲ್ಲಿ ಎಲ್ಲೆಡೆ ಹಸಿರು ಮಾಯವಾಗಲಿದೆ. ಪೂರ್ವಜರು ಉಳಿಸಿಟ್ಟುರುವ ಅರಣ್ಯವನ್ನು ನಾಶಪಡಿಸುವ ಮೂಲಕ ಪರಿಸರದ ನೇರವಾದ ಅವನತಿ ಕಾರಣವಾಗುತ್ತಿರುವ ನಮ್ಮ ತಪ್ಪುಗಳನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.ಪರಿಸರದ ಮರುಸೃಷ್ಟಿ ಕಷ್ಟಸಾಧ್ಯ. ಮನುಷ್ಯರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನೈಸರ್ಗಿಕ ಸಂಪನ್ಮೂಲಗಳನ್ನು ಖಾಲಿ ಮಾಡುವ ಮುನ್ನವೇ ಅದರ ಎರಡರಷ್ಟು ಬೆಳವಣಿಗೆ ಮಾಡದ್ದೇವೆಯೋ? ಇಲ್ಲವೋ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಜೀವ ಸಂಕುಲಗಳ ಸರ್ವನಾಶಕ್ಕೆ ಮುಂದಡಿ ಇಡುತ್ತಿದ್ದೇವೆ ಎಂದೇ ಭಾವಿಸಬೇಕು ಎಂದರು.

ಈ ವೇಳೆ ಅರಣ್ಯ ರಕ್ಷಣ ಎಂ.ಎ. ಇಟಗಿ, ಮುಖ್ಯಶಿಕ್ಷಕ ಶಿವ ನಾಯಕ್, ಕೃಷಿ ಮೇಲ್ವಿಚಾರಕ ಜಿ. ಪ್ರಕಾಶ, ಶಾಲೆಯ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಪಘಾತ: ಮಹಿಳೆ ಸಾವು

ರಾಣಿಬೆನ್ನೂರು: ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಸ್ಕೂಟಿಯ ಹಿಂಭಾಗದಲ್ಲಿ ಕುಳಿತಿದ್ದ ಮಹಿಳೆ ಸಾವಿಗೀಡಾದ ಘಟನೆ ನಗರದ ಹಳೇ ಪಿಬಿ ರಸ್ತೆ ಸಿದ್ಧಾರೂಢ ಮಠ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ.ತಾಲೂಕಿನ ಕೋಡಿಯಾಲ ಗ್ರಾಮದ ಲೀಲಾವತಿ ಡಿ. ಕೊಟ್ರಬಸಪ್ಪ ಮೃತ ದುರ್ದೈವಿ. ಸ್ಕೂಟಿ ಚಲಾಯಿಸುತ್ತಿದ್ದ ಚೇತನಾ ಮುಂಡಾಸದ ಯಾವುದೇ ಮುನ್ಸೂಚನೆ ನೀಡದೆ ಬಲಕ್ಕೆ ವಾಹನ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಲೀಲಾವತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ