ಕೊಪ್ಪಳ:
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ವಿಕಸಿತ ಭಾರತ ಅಮೃತ್ ಕಾಲ ಸೇವೆ, ಸುಶಾಸನ, ಮೋದಿ ಸರ್ಕಾರ 11 ವರ್ಷ ಪೂರೈಸಿದಕ್ಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ, ವೈಜ್ಞಾನಿಕ, ಶೈಕ್ಷಣಿಕ, ಆರ್ಥಿಕವಾಗಿ ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದೆ. ಇದರ ಜತೆಗೆ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವಲ್ಲಿ, ಸಾಂಸ್ಕೃತಿಕ ವೈವಿಧ್ಯತೆ, ರಾಷ್ಟ್ರೀಯ ಸಮಗ್ರತೆ, ಏಕತೆ ಹಾಗೂ ಭ್ರಾತೃತ್ವದ ಸಲುವಾಗಿ ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ಪ್ರಾದೇಶಿಕತೆ ಮತ್ತು ಸಾರ್ವಜನಿಕ ಸ್ವತ್ತು ರಕ್ಷಿಸುವಲ್ಲಿ, ಸ್ವಾಸ್ಥ್ಯ ಭಾರತ ನಿರ್ಮಿಸುವಲ್ಲಿ ನರೇಂದ್ರ ಮೋದಿಯವರ ಸಾಧನೆ ಅಗಾಧವಾಗಿದೆ ಎಂದರು.ವಿಕಸಿತ ಭಾರತ 2047ರ ಕನಸನ್ನು ನನಸಾಗಿಸಲು ನಾನು ಶಾರೀರಿಕ, ಮಾನಸಿಕವಾಗಿ ನನ್ನ ದೇಹ, ಮನಸ್ಸು, ಸಂಪತ್ತು ಮತ್ತು ಕಾರ್ಯಗಳಿಂದ ಹೃದಯಪೂರ್ವಕವಾಗಿ ತೊಡಗಿಸಿಕೊಳ್ಳುತ್ತೇನೆ ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವುದಕ್ಕೆ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಧಾನಿ ಅವರು ಹೇಳಿದ್ದಾರೆ ಎಂದರು.
ಕಳೆದ 11 ವರ್ಷದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಹಾಗಾಗಿ ಪ್ರತಿಯೊಬ್ಬ ಮತದಾರನ ಋಣ ತೀರಿಸುವಂತಹ ಕೆಲಸ ಪ್ರಧಾನ ಮಂತ್ರಿಗಳು ಮಾಡಿದ್ದಾರೆ ಎಂದು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮೋದಿ ಸರ್ಕಾರಕ್ಕೆ 11 ವರ್ಷ ಕಾರ್ಯಕ್ರಮಕ್ಕೆ ಕೆಲವೇ ಕೆಲವರು ಭಾಗವಹಿಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಧಡೇಸ್ಗೂರು ಸೇರಿದಂತೆ ಪ್ರಮುಖ ನಾಯಕರು ಆಗಮಿಸಿರಲಿಲ್ಲ. ಅಷ್ಟೇ ಅಲ್ಲದೇ ಎರಡನೇ ಹಂತದ ನಾಯಕರು, ಕಾರ್ಯಕರ್ತರು ಸಹ ಅಷ್ಟಾಗಿ ಬಂದಿರಲಿಲ್ಲ ಎನ್ನುವುದು ಕಾರ್ಯಕ್ರಮದಲ್ಲಿಯೇ ಬಹಿರಂಗವಾಗಿ ಚರ್ಚೆಯಾಯಿತು. ಪಕ್ಷ ಸಂಘಟನೆ ದಿಕ್ಕು ತಪ್ಪಿಸುತ್ತಿದೆ ಎನ್ನುವಂತಾಗಿದ್ದು, ಅನೇಕರು ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿರುವುದು ಕಂಡು ಬಂತು.ಲವರು.