ಕನ್ನಡಪ್ರಭ ವಾರ್ತೆ ಬೀಳಗಿ
ವಿದ್ಯುತ್ ಸಮಸ್ಯೆ ಮುಂತಾದ ರೈತರ ವಿವಿಧ ಸಮಸ್ಯೆಗಳನ್ನು ಪರಿಹಾರಿಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ರರ ಪ್ರಾಂತ ಬಾಗಲಕೋಟೆ ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ರೈತರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಸವಳು ಜವಳು ನಿರ್ಮೋಲನೆ, ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸಬೇಕು, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ, ವಿಮಾ ಕಂತು ಕಟ್ಟಿದವರಿಗೆ ವಿಮಾ ಕ್ಲೇಮ್ ನೀಡಬೇಕು. ಬೆಳೆ ಪರಿಹಾರ ಸರಿಯಾಗಿ ವಿತರಿಸಬೇಕು ಎಂದರು.
ರಾಜ್ಯದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಿದರೆ ಬೊರವೆಲ್ ಮರು ಪೂರಣಗೊಸಬೇಕು. ಯುಕೆಪಿ ಯೋಜನೆ ನೀರು ನಿಂತ ಪರಿಣಾಮ ಭೂಮಿ ಸವಳು ಜವಳು ಆಗಿ ರೈತರ ಬಿತ್ತನೆಗೆ ತೊಂದರೆಯಾಗಿವೆ. ಕಂದಾಯ ಕೃಷಿ, ತೋಟಗಾರಿಕೆ, ರೇಷ್ಮೆ, ಸರ್ವೇ, ವಿದ್ಯುತ್ ಇಲಾಖೆಯಲ್ಲಿ ರೈತರು ಯಾವುದೇ ಸೇವೆ ಪಡೆಯಲು ಆಪಾರ ಪ್ರಮಾಣ ಹಣ ವ್ಯಯ ಮಾಡುವಂತಾಗಿದ್ದು ತಕ್ಷಣ ಸರಕಾರ ಮರು ಪರಿಶೀಲನೆ ಮಾಡಬೇಕು ಈ ಎಲ್ಲ ಬೇಡಿಕೆಗಳನ್ನು ಈಡೆರಿಸದಿದ್ದಲ್ಲಿ ಜ. 21ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಜಿಲ್ಲಾ ಕೋಶಾಧ್ಯಕ್ಷಮುದಕಪ್ಪ ವಡವಾಣಿ ಮಾತನಾಡಿ, ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗೆ ಹಾಕಿರುವುದರಿಂದ ರೈತರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಹಿನ್ನೆಡೆಯಾಗುತ್ತಿದ್ದು, ರೈತರು ಸಂಕಷ್ಟ ಪರಸ್ಥಿತಿ ಎದುರಿಸುತ್ತಿದ್ದು, ಸರಕಾರ ತಕ್ಷಣ ವಿಮಾ ಕ್ಲೇಮ ಮಾಡಬೇಕು ಕೆಲವು ರೈತರಿಗೆ ಪರಿಹಾರ ದೊರೆತಿರುವುದಿಲ್ಲ ತಕ್ಷಣ ಒದಗಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕಾರ್ಯದಶಿ೯ ಗುರು ಅನಗವಾಡಿ, ಜಿಲ್ಲಾ ಕಾರ್ಯದಶಿ೯ ರೈತ ಮುಖಂಡರಾದ ಎಂ.ವಾಯ್ ವಡವಾಣಿ ,ಮುತ್ತು ಮಮದಾಪೂರ, ಟಿ ಎಚ್ ಸನಗಿನ್ ,ಮಂಜು ಭಾವಿ, ಲಕ್ಷ್ಮಣ್ಣ ಸವನಾಳ ಅಶೋಕ ಮಂತ್ರಿ, ಶೇಖರ ಕಾಖಂಡಕಿ,ಉಮೇಶ ಚನ್ನಿ ಗುರು ಕಾಖಂಡಕಿ, ಗುರು ಅಂಗಡಿ, ಸಿದ್ದಪ್ಪ ಕೂಗಟಿ ರಮೇಶ ಮೇಟಿ, ಹಣಮಂತ ದೊರೆಗೋಳ,ಸಂಗಪ್ಪ ಅಂಟಿನ ಇದ್ದರು.