ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಗುರುವಾರ ಬೋರಗಾಂವನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕಿ ಶಶಿಕಲಾ ಜೊಲ್ಲೆ ಅವರ ಕಾರಣದಿಂದಾಗಿ ಪಟ್ಟಣವು ಸಮಗ್ರ ಅಭಿವೃದ್ಧಿ ಕಾಣುತ್ತಿದೆ. ವೃತ್ತವನ್ನು ಅಗಲೀಕರಣಗೊಳಿಸುವಂತೆ ಆಚಾರ್ಯ ಕುಲರತ್ನ ಭೂಷಣಮುನಿ ಮಹಾರಾಜ್ ಕಾಲಕಾಲಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಅವರನ್ನು ವಿನಂತಿಸಿದರು. ಈ ಹಿನ್ನಲೆಯಲ್ಲಿ ₹ 2 ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೇ, ವೃತ್ತದಿಂದ ಮದರಸಾವರೆಗಿನ ಎರಡೂ ಬದಿಯ ಒಳಚರಂಡಿಗೆ ₹ 60 ಲಕ್ಷ ಅನುದಾನ ಮಂಜೂರಾಗಿದೆ. ₹ 50ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪದವಿ ಪೂರ್ವ ಕಾಲೇಜಿನ ಉದ್ಘಾಟನಾ ಸಮಾರಂಭ, ಭುರ್ಕೆ ತೋಟದ ರಸ್ತೆಗೆ ₹15 ಲಕ್ಷ ಮತ್ತು ₹ 32 ಲಕ್ಷದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಚಿಕಿತ್ಸಾಲಯದ ಉದ್ಘಾಟನೆ ಕೂಡ ಆಗಲಿದೆ. ಅಲ್ಲದೇ, ರೈತರ ಬೇಡಿಕೆಗೆ ಸ್ಪಂದಿಸಿ ತೋಟದ ರಸ್ತೆಗಳಿಗೆ ಅನುದಾನ ಮಂಜೂರಾಗಿದೆ. ಖೋತ ವಸಾಹತ್ ರಸ್ತೆಗೆ ₹ 25 ಲಕ್ಷ, ಶಾಂತಿನಗರದ ರಸ್ತೆಗೆ ₹ 25 ಲಕ್ಷ, ಗೋಸಾವಿ ಮನೆಯಿಂದ ಕಮತವರೆಗಿನ ರಸ್ತೆಗೆ ₹ 45 ಲಕ್ಷ ಮತ್ತು ಭುರ್ಕೆ ತೋಟದ ರಸ್ತೆಗೆ ₹ 15 ಲಕ್ಷ ಅನುದಾನ ಮಂಜೂರಾಗಿದೆ ಎಂದು ಶರದ್ ಜಂಗಟೆ ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೆ.ಮಹಾಜನ ಮಾತನಾಡಿ, ಜೊಲ್ಲೆ ದಂಪತಿ ಪಟ್ಟಣದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದಾರೆ. ವಿರೋಧ ಪಕ್ಷದವರು ರಾಜಕೀಯ ಮಾಡದೆ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಈ ವೃತ್ತದ ಅಗಲಿಕರಣ ನಮ್ಮ ಪ್ರಯತ್ನ ಎಂದು ವಿರೋಧಪಕ್ಷದವರು ಹೇಳುವುದು ತಪ್ಪು ಎಂದರು.ಪತ್ರಿಕಾಗೋಷ್ಠಿಯಲ್ಲಿ ರಾಜಶೇಖರ ಹಿರೇಮಠ, ಬೀರೇಶ್ವರ ಶಾಖೆಯ ಅಧ್ಯಕ್ಷ ಅಜಿತ ತೇರದಾಳೆ, ಜಿತೇಂದ್ರ ಪಾಟೀಲ, ಅಜಿತ ಕಾಂಬಳೆ, ಬಂಡು ಮಾಳಿ, ಸಂಜಯ ಮಹಾಜನ, ಭರತ ಕಾಂಬಳೆ, ಶ್ರೀಪಾಲ ಗೋಸಾವಿ, ಶಂಕರ ಗುರವ, ಭರತ ಚೋಕವೆ, ಬಾಹುಬಲಿ ಚೋಕವೆ, ಕಿಸನ್ ಗೋಸಾವಿ, ಮಹಾದೇವ ಐದಮಾಳೆ, ಮಧುಮತಿ ಪಾಟೀಲ, ಸಚಿನ ಕೋಳಿ, ಋಷಿಕೇಶ್ ಗುರವ ಇದ್ದರು.