ಅತಿವೇಗವಾಗಿ ಸಂಚರಿಸುವ ಟಿಪ್ಪರ್, ಟ್ರ್ಯಾಕ್ಟರ್ ವಿರುದ್ಧ ಕ್ರಮಕ್ಕೆ ಮನವಿ

KannadaprabhaNewsNetwork |  
Published : Jun 08, 2025, 02:29 AM IST
ಕಟ್ಟಡ ನಿರ್ಮಾಣದ ಸಾಮಾಗ್ರಿ ಸಾಗಿಸುವಾಗ ಟಿಪ್ಪರ್ ಲಾರಿಗಳು ಮ ತ್ತು ಟ್ರ್ಯಾಕ್ಟರ್‌ಗಳ ಅತಿವೇಗದಿಂದಾಗಿ ಅಪಘಾತಗಳು ಸಂಭವಿಸಿದ್ದು ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಾಲ್ಲೂಕು ಬಹುಜನ ಸಮಾಜ ಪಕ್ಷ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು: ಕಟ್ಟಡ ನಿರ್ಮಾಣದ ಸಾಮಾಗ್ರಿ ಸಾಗಿಸುವಾಗ ಟಿಪ್ಪರ್ ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಅತಿವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸಿದ್ದು ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ತಾಲೂಕು ಬಹುಜನ ಸಮಾಜ ಪಕ್ಷ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಅವರಿಗೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು: ಕಟ್ಟಡ ನಿರ್ಮಾಣದ ಸಾಮಾಗ್ರಿ ಸಾಗಿಸುವಾಗ ಟಿಪ್ಪರ್ ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಅತಿವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸಿದ್ದು ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ತಾಲೂಕು ಬಹುಜನ ಸಮಾಜ ಪಕ್ಷ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಅವರಿಗೆ ಮನವಿ ಸಲ್ಲಿಸಿದರು.ಈ ಕುರಿತು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಇಟ್ಟಿಗೆ, ಜಲ್ಲಿ, ಮರಳು, ಮಣ್ಣು ಸೇರಿದಂತೆ ಇನ್ನಿತರೆ ಕಟ್ಟಡ ಸಾಮಾಗ್ರಿಗಳನ್ನು ನಗರಕ್ಕೆ ಮತ್ತು ನಗರದಿಂದ ಹೊರವಲಯಕ್ಕೆ ಸಾಗಿಸುತ್ತಿರುವಾಗ ಮುನ್ನೆಚ್ಚರಿಕಾ ಕ್ರಮ ಪಾಲಿಸದೇ ಏಕಾಏಕಿ ಸಂಚರಿಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳ ಸುತ್ತಮುತ್ತಲು ಟಿಪ್ಪರ್ ಲಾರಿಗಳು ಮರಳು, ಜಲ್ಲಿಯನ್ನು ತುಂಬಿಸಿ ಟಾರ್ಪಲ್ ಹಾಕದೇ ಅತಿವೇಗದಿಂದ ಸಂಚರಿಸುತ್ತಿವೆ. ಇದರಿಂದ ತಿರುವುಗಳಲ್ಲಿ ಬ್ರೇಕ್ ಹಾಕುವ ವೇಳೆಯಲ್ಲಿ ತುಂಬಿರುವ ಸಾಮಾಗ್ರಿಗಳು ಪಾದಚಾರಿಗಳು, ವಾಹನಗಳ ಮೇಲೆ ಬೀಳುತ್ತಿರುತ್ತಿವೆ ಎಂದು ತಿಳಿಸಿದರು.ಮುಖ್ಯವಾಗಿ ನಗರ ಭಾಗದ ಅರಣ್ಯ ಇಲಾಖೆ, ಹೊಸಮನೆ ಬಡಾವಣೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಮುಂಭಾಗ ಹಾಗೂ ಆಜಾದ್‌ಪಾರ್ಕ್ ವೃತ್ತದಲ್ಲಿ ಕಟ್ಟಡ ಸಾಮಾ ಗ್ರಿಗಳು ರಸ್ತೆಗೆ ಬೀಳುತ್ತಿರುವ ಪರಿಣಾಮ ಪ್ರತಿನಿತ್ಯವು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದರು.ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಮಾತನಾಡಿ ಟಿಪ್ಪರ್ ಲಾರಿ ಮತ್ತು ಟ್ರ್ಯಾಕ್ಟರ್‌ಗಳ ವಾಹನಗಳ ಮಾ ಲೀಕರು ನಿಗದಿ ಗೊಳಿಸಿದ ಸರ್ಕಾರಿ ಆದೇಶ ಪಾಲಿಸುತ್ತಿಲ್ಲ. ಈ ವಿರುದ್ಧವಾಗಿ ಸಾಗಣೆ ಮಾಡುತ್ತಿರುವ ವಾಹನಗಳ ಮೇಲೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಉಪಾದ್ಯಕ್ಷ ಕೆ.ಎಸ್.ಮಂಜುಳಾ, ಅಸ್ಲೆಂಬಿ ಉಪಾಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ವಸಂತ್, ನಗರಾಧ್ಯಕ್ಷ ಡಿ.ಎಚ್.ವಿಜಯ್ ಕುಮಾರ್ ಮತ್ತಿತರರು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ