ಸಮಾವೇಶ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ. ದಾಸಶ್ರೇಷ್ಠ ಕನಕದಾಸರ ಜಯಂತಿ ಹಾಗೂ ರಾಣಿ ಚೆನ್ನಮ್ಮ ಇಬ್ಬರು ಮಹನೀಯರ ಜಯಂತಿ ಆಚರಣೆ ಹಿನ್ನೆಲೆ ಬೃಹತ್ ಹಿಂದೂ ಸಮಾವೇಶ ನಡೆಸಲಾಗುತ್ತಿದೆ.
ಶಿರಹಟ್ಟಿ: ನ. ೮ರಂದು ಸಾಯಂಕಾಲ ೫ ಗಂಟೆಗೆ ಪಟ್ಟಣದಲ್ಲಿ ದಾಸಶ್ರೇಷ್ಠ ಕನಕದಾಸರ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಬೃಹತ್ ಹಿಂದೂ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಬಿ.ಡಿ. ಪಲ್ಲೇದ ಮನವಿ ಮಾಡಿದರು.ಪಟ್ಟಣದಲ್ಲಿ ಕುರುಬ ಸಮಾಜ ಹಾಗೂ ಪಂಚಮಸಾಲಿ ಸಮಾಜ ಮತ್ತು ಎಲ್ಲ ಹಿಂದೂಪರ ಸಂಘಟನೆಗಳ ಹಿರಿಯರ ಸಭೆಯಲ್ಲಿ ಮಾತನಾಡಿದರು.
ಸಮಾವೇಶ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ. ದಾಸಶ್ರೇಷ್ಠ ಕನಕದಾಸರ ಜಯಂತಿ ಹಾಗೂ ರಾಣಿ ಚೆನ್ನಮ್ಮ ಇಬ್ಬರು ಮಹನೀಯರ ಜಯಂತಿ ಆಚರಣೆ ಹಿನ್ನೆಲೆ ಬೃಹತ್ ಹಿಂದೂ ಸಮಾವೇಶ ನಡೆಸುತ್ತಿದ್ದು, ಜಿಲ್ಲೆ ಮತ್ತು ತಾಲೂಕಿನ ಎಲ್ಲ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮಹನೀಯರ ತತ್ವಾದರ್ಶ ಪಾಲನೆ ಜತೆಗೆ ಸಮಾವೇಶ ಯಶಸ್ಸಿಗೆ ಸಹಕರಿಸಬೇಕು ಎಂದರು.ಹಿಂದೂ ಸಮಾವೇಶ ಯಾರನ್ನೋ ತೇಜೋವಧೆ ಮಾಡುವುದಾಗಲಿ, ಮತ್ತಾರನ್ನೋ ಗುರಿಯಾಗಿಸಿಕೊಂಡು ನಡೆಸುತ್ತಿರುವ ಸಮಾವೇಶವಲ್ಲ. ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಸಮಾವೇಶವಾಗಿದೆ. ಸಮಾವೇಶಕ್ಕೆ ಕೂಡಲಸಂಗಮ ಪೀಠದ ಬಸವಜಯ ಮೃತ್ತುಂಜಯ ಸ್ವಾಮಿಗಳು ಆಗಮಿಸುವರು. ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶ್ರೀರಾಮಸೇನೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಆಗಮಿಸಲಿದ್ದಾರೆ ಎಂದರು.ಕುರುಬ ಸಮಾಜದ ಮುಖಂಡ ರಾಮಣ್ಣ ಕಂಬಳಿ ಮಾತನಾಡಿ, ಹಾಲುಮತ ಸಮಾಜ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಎಲ್ಲ ಹಿಂದೂಪರ ಸಂಘಟನೆ ವತಿಯಿಂದ ನಡೆಯಲಿರುವ ಬೃಹತ್ ಹಿಂದೂ ಸಮಾವೇಶ ಎಲ್ಲರಲ್ಲೂ ಜಾಗೃತಿ ಮೂಡಿಸಲಿದೆ. ಜಯಂತ್ಯುತ್ಸವದ ಹಿನ್ನೆಲೆ ಜರುಗಲಿರುವ ಬೃಹತ್ ಹಿಂದೂ ಸಮಾವೇಶ ಯಶಸ್ವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು. ಬೃಹತ್ ಬೈಕ್ ರ್ಯಾಲಿಯು ಚೆನ್ನಮ್ಮನ ವನದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ಕಾರ‍್ಯಕ್ರಮ ನಡೆಯಲಿದೆ ಎಂದರು. ಶಂಕರ ಭಾವಿ, ಬಸವರಾಜ ಕಲ್ಯಾಣಿ, ಫಕ್ಕೀರೇಶ ಕರಿಗಾರ, ಅಶೋಕ ವರವಿ, ಮಾದೇವಪ್ಪ ಅಣ್ಣಿಗೇರಿ, ಅಶೋಕ ಬಳ್ಳಾರಿ, ಮಲ್ಲು ವರವಿ, ಮಂಜುನಾಥ ಉಳ್ಳಾಗಡ್ಡಿ, ಚನ್ನವೀರಗೌಡ ಪಾಟೀಲ, ಪರಶುರಾಮ ಡೊಂಕಬಳ್ಳಿ, ಸಂತೋಷ ತೋಡೆಕಾರ, ವಿಶ್ವನಾಥ ದಲಾಲಿ, ಬಸವರಾಜ ನಾಯ್ಕರ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.