ನಾಡ ಕಚೇರಿ ಶಿಥಿಲ, ಆತಂಕದಲ್ಲಿ ಸಿಬ್ಬಂದಿಗಳು

KannadaprabhaNewsNetwork |  
Published : Nov 05, 2025, 12:45 AM IST
ನವಲಿ ಗ್ರಾಮದ ನಾಡ ಕಚೇರಿಯು ಶಿಥಿಲಾವಸ್ಥೆ ತಲುಪಿದೆ. ಇಲ್ಲಿಗೆ ನಾನಾ ಕೆಲಸ ಕಾರ್ಯಗಳಿಗೆ ಬರುವ ಜನರು ಹಾಗೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ- ನೌಕರರು ಆತಂಕದಲ್ಲೇ ಕಾರ್ಯನಿರ್ವಹಿಸುವಂತಾಗಿದೆ. | Kannada Prabha

ಸಾರಾಂಶ

ನವಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಡಕಚೇರಿ ಕಟ್ಟಡ ಕಳೆದ 4 ವರ್ಷಗಳ ಹಿಂದೆ ಶಿಥಿಲಗೊಂಡಿದ್ದು, ಸಂಜೆ ಸಮಯದಲ್ಲಿ ಬಹಿರ್ದೆಸೆ ಸೇರಿದಂತೆ ಇಲ್ಲಿ ಅಕ್ರಮ ಚಟುವಟಿಕೆ

ಅಮರಪ್ಪ ಕುರಿ ನವಲಿ

ಇಲ್ಲಿನ ನಾಡ ಕಚೇರಿ ಶಿಥಿಲಗೊಂಡಿದ್ದು, ಮೂಲಭೂತ ಸೌಕರ್ಯವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿತಪ್ಪಿಸುವಂತಾಗಿದೆ. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ಜಾಗದ ವ್ಯವಸ್ಥೆ, ಕುಡಿಯುವ ನೀರಿನ ಸೌಕರ್ಯ, ಶೌಚಾಲಯವಿಲ್ಲದೇ ಪರದಾಡುತ್ತಿದ್ದಾರೆ.

ಈ ನಾಡ ಕಚೇರಿ ವ್ಯಾಪ್ತಿಗೆ ಸುಮಾರು 20 ಗ್ರಾಮಗಳು ಬರುತ್ತಿದ್ದು, ದಾಖಲಾತಿ, ಜನನ-ಮರಣ ದೃಢೀಕರಣ ಪತ್ರ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಕಂದಾಯ ನಿಗದಿ, ಆರ್‌ಟಿಸಿ ತಿದ್ದುಪಡಿ, ವಿಶೇಷಚೇತನ ವೇತನ, ಜಾತಿ, ಆದಾಯ ಪ್ರಮಾಣ ಪತ್ರ ಮುಂತಾದ ಕೆಲಸಗಳಿಗೆ ನಿತ್ಯ ನೂರಾರು ಜನರು ಆಗಮಿಸುತ್ತಾರೆ.

ಇಲ್ಲಿ ಕಂದಾಯ ಪರಿವೀಕ್ಷರು, ಉಪ ತಹಸೀಲ್ದಾರ್‌ ಹಾಗೂ 4 ಗ್ರಾಮ ಲೆಕ್ಕಿಗರು, 5 ಗ್ರಾಮ ಸೇವಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲ ನಾಡ ಕಚೇರಿಗೆ ಮೂಲ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತೆ ಕೇವಲ ಕನಸಾಗಿದೆ.

ನವಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಡಕಚೇರಿ ಕಟ್ಟಡ ಕಳೆದ 4 ವರ್ಷಗಳ ಹಿಂದೆ ಶಿಥಿಲಗೊಂಡಿದ್ದು, ಸಂಜೆ ಸಮಯದಲ್ಲಿ ಬಹಿರ್ದೆಸೆ ಸೇರಿದಂತೆ ಇಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ.

ಜಾಗವಿದ್ದರೂ ವ್ಯವಸ್ಥೆ ಇಲ್ಲ, ಕಂದಾಯ ಇಲಾಖೆಗೆ ಸೇರಿದ 30*40 ಸೈಜು ಜಾಗವಿದ್ದರೂ ಇಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಕಟ್ಟಡದಲ್ಲಿ ಶೌಚಾಲಯವಿಲ್ಲ. ಕುಳಿತುಕೊಳ್ಳಲು ಕುರ್ಚಿ, ಮೇಜು ಇಲ್ಲ, ಕಳಚಿ ಬೀಳುವಂತಹ ಕಿಟಕಿ, ಭದ್ರತೆ ಇಲ್ಲದ ಬಾಗಿಲು, ಕುಡಿವ ನೀರಿನ ವ್ಯವಸ್ಥೆ ಇಲ್ಲದೆ ಹೊರಗಡೆ ತೆರಳುವಂತಾಗಿದೆ. ದಾಖಲೆ, ಕಡತ ಇಡಲು ಸರಿಯಾದ ಕಪಾಟು ಇಲ್ಲ. ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿದ್ದು ಮಹತ್ವದ ದಾಖಲೆಗಳು ನಾಶವಾಗುತ್ತಲಿದೆ ಎಂದು ಸ್ಥಳೀಯ ನಿವಾಸಿ ಓಂಕಾರಪ್ಪ ವಡ್ರಕಲ್ ತಿಳಿಸಿದ್ದಾರೆ.ನವಲಿ ಸರ್ಕಾರಿ ನಾಡ ಕಾರ್ಯಾಲಯದ ಕಟ್ಟಗಳು ಶಿಥಿಲಗೊಂಡಿರುವ ಕಾರಣ ವಾರದೊಳಗೆ ನಮ್ಮ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆದು ಬಾಡಿಗೆ ಕಟ್ಟಡಕ್ಕೆ ನಾಡ ಕಚೇರಿ ಸ್ಥಳಾಂತರ ಮಾಡಲಾಗುವುದು ಎಂದು ನಾಡ ಕಾರ್ಯಾಲಯದ ಉಪತಹಸೀಲ್ದಾರ್‌ ಪ್ರಕಾಶ ಸವಡಿ ತಿಳಿಸಿದ್ದಾರೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ