ರೈತರ ಹಿತದೃಷ್ಟಿಯಿಂದ ವಿದ್ಯುತ್ ಖಾಸಗೀಕರಣ ಕೈಬಿಡಲು ಮನವಿ

KannadaprabhaNewsNetwork |  
Published : Jun 19, 2026, 02:30 AM IST
ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. | Kannada Prabha

ಸಾರಾಂಶ

. ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಕಾರ್ಯ ಪ್ರಾರಂಭವಾದರೆ ರಾಜ್ಯದ ಪ್ರಜೆಗಳಿಗೆ ವಿದ್ಯುತ್ ಇಲಾಖೆ ನೌಕರರಿಗೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದಂತಾಗುತ್ತದೆ.

ಶಿರಹಟ್ಟಿ: ರಾಜ್ಯದಲ್ಲಿ ಕೆಇಆರ್‌ಸಿ ವತಿಯಿಂದ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಯವರಿಗೆ ನೀಡಿದರೆ ರೈತರಿಗೆ, ವಿದ್ಯುತ್ ಬಳಕೆದಾರರಿಗೆ ಹಾಗೂ ನೌಕರರಿಗೆ ಮಾರಕವಾಗಲಿದೆ. ಸರ್ಕಾರ ಎಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಖಾಸಗೀಕರಣದಿಂದ ಹಿಂದೆ ಸರಿಯಬೇಕು ಎಂದು ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಅಭಿಯಂತರರು, ಕಾರ್ಯ ಮತ್ತು ಪಾಲನಾ ಅಧಿಕಾರಿ ನಜ್ಮುನ್ನಿಸ ಕೆ ತಿಳಿಸಿದರು.ಗುರುವಾರ ಪಟ್ಟಣದ ಕೆಇಬಿ ಕಚೇರಿ ಆವರಣದಲ್ಲಿ ವಿದ್ಯುತ್ ಖಾಸಗೀಕರಣದ ಕುರಿತು ಆಯೋಜಿಸಿದ್ದ ರೈತರು ಹಾಗೂ ವಿದ್ಯುತ್ ಬಳಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಕಾರ್ಯ ಪ್ರಾರಂಭವಾದರೆ ರಾಜ್ಯದ ಪ್ರಜೆಗಳಿಗೆ ವಿದ್ಯುತ್ ಇಲಾಖೆ ನೌಕರರಿಗೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದಂತಗುತ್ತದೆ ಎಂದರು.ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳು ಈಗಾಗಲೆ ಗ್ರಾಮೀಣ ಕೃಷಿ ಆರ್ಥಿಕವಾಗಿ ಹಿಂದುಳಿದವರಿಗೂ ವಿದ್ಯುತ್ ಸೇವೆ ಒದಗಿಸುತ್ತಿದ್ದು, ಸರ್ಕಾರದ ವಿವಿಧ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಆದರೆ, ಇಲಾಖೆಯನ್ನು ಖಸಗಿ ಸಂಸ್ಥೆಗಳಿಗೆ ಸಮನಾಂತರ ವಿತರಣಾ ಪರವಾನಗಿ ನೀಡುವುದರಿಂದ ಸಾರ್ವಜನಿಕ ವಲಯದ ಸಂಸ್ಥೆಗಳ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರಿಗೂ ಆರ್ಥಿಕವಾದ ಭಾರವಾಗಲಿದೆ ಎಂದರು.ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ನೀಡುತ್ತಿರುವ ಉಚಿತ ಸೌಲಭ್ಯ ರದ್ದಾಗುವ ಸಾಧ್ಯತೆ ಇದೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಬಹುದು. ಸಣ್ಣ ಕೈಗಾರಿಕೆಗಳಿಗೆ ರಿಯಾಯತಿ ದರದಲ್ಲಿ ನೀಡುತ್ತಿರುವ ವಿದ್ಯುತ್, ಕೈಮಗ್ಗ, ನೇಕಾರರಿಗೆ ಹಾಗೂ ಕಾಫಿ ಬೆಳೆಗಾರರಿಗೆ ನೀಡುವ ಸಬ್ಸಿಡಿ ಬಂದ್ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ. ಆದ್ದರಿಂದ ರೈತರು, ವಿದ್ಯುತ್ ಬಳಕೆದಾರರು ಆಕ್ಷೇಪಣಾ ಅರ್ಜಿ ಸಲ್ಲಿಸಬೇಕು ಎಂದರು. ವಿದ್ಯುತ್ ಸೇವೆ ಸಾರ್ವಜನಿಕರ ಮೂಲಭೂತ ಹಾಗೂ ಅವಶ್ಯಕವಾಗಿದ್ದು, ಅದನ್ನು ತಮ್ಮ ವೈಯಕ್ತಿಕ ಲಾಭದ ಉದ್ದೇಶದಿಂದ ಖಾಸಗಿ ಕಂಪನಿಗಳಿಗೆ ಒಪ್ಪಿಸುವುದು ಸರಿಯಲ್ಲ. ಖಾಸಗೀಕರಣದಿಂದ ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ವಿವಿಧ ಸೌಲಭ್ಯಗಳಿಗೆ ಧಕ್ಕೆ ಉಂಟಾಗಬಹುದು. ರೈತರಿಗೆ ಹಾಗೂ ವಿದ್ಯುತ್ ಬಳಕೆದಾರರಿಗೆ ಸಲಹೆ ನೀಡಿದರು. ಈ ಜನ ಜಾಗೃತಿ ಕಾರ್ಯಕ್ರಮಕ್ಕೆ ಸೇರಿದ ನೂರಾರು ರೈತರು ಹಾಗೂ ವಿದ್ಯುತ್ ಬಳಕೆದಾರರು ಸರ್ಕಾರದ ಧೋರಣೆಯ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿ.ವಿ. ಕಪ್ಪತ್ತನವರ, ಜಾನು ಲಮಾಣಿ, ಚಾಂದಸಾಬ ಮುಳಗುಂದ, ಸಂದೀಪ ಕಪ್ಪತ್ತನವರ, ಎಇಇ ಅಂಜನಪ್ಪ, ರಾಮಣ್ಣ ಕಂಬಳಿ, ಅಕ್ಬರ್ ಯಾದಗಿರಿ, ಶ್ರೀನಿವಾಸ ಬಾರಬಾರ್, ಹಮೀದ್ ಸನದಿ, ನಜೀರ್ ಡಂಬಳ, ಅಪ್ಪಣ್ಣ ಕುಬೇರ, ಮುತ್ತಣ್ಣ ಕಪ್ಪತ್ತನವರ, ಫಕ್ಕೀರೇಶ ಕರಿಗಾರ, ಸುರೇಶ ಹವಳದ, ಶ್ರೀನಿವಾಸ ಬಾರಬರ, ವೀರಣ್ಣ ಅಂಗಡಿ ಹಾಗೂ ಕೆಇಬಿ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣದಲ್ಲಿ ಶೇ. 40 ಜನರಿಗೆ ಬಯಲು ಶೌಚವೇ ಗತಿ!
ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧ: ನಿಸಾರ್ ಅಹಮದ್