ಚನ್ನಗಿರಿ: ಮರಗಳ ಸವರಿ ವಿದ್ಯುತ್‌ ಅವಘಡಗಳ ತಪ್ಪಿಸಲು ಮನವಿ

KannadaprabhaNewsNetwork |  
Published : Jun 14, 2025, 12:45 AM IST
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 13ರ ಬದಿಯಲ್ಲಿ ಬೆಳೆದಿರುವ ಗಿಡಗಳು ವಿದ್ಯುತ್ ತಂತಿಗೆ ತಾಗುತ್ತೀರುವುದು | Kannada Prabha

ಸಾರಾಂಶ

ಪಟ್ಟಣದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ- 13ರಲ್ಲಿ ಎಸ್.ಬಿ.ಐ. ಬ್ಯಾಂಕ್, ಪ್ರವಾಸಿ ಮಂದಿರದ ರಸ್ತೆ ಬದಿ ಮತ್ತು ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದ ಪುಟ್ಪಾತ್‌ ಪ್ರದೇಶದ ಪಕ್ಕದಲ್ಲಿ ಗಿಡಗಳು ಬಹು ಎತ್ತರಕ್ಕೆ ಬೆಳೆಯುತ್ತಿವೆ. ರೆಂಬೆಗಳು ವಿದ್ಯುತ್ ತಂತಿಗಳಿಗೆ ತಾಗುತ್ತಿವೆ. ವಿದ್ಯುತ್‌ ಅವಘಡಗಳು ಸಂಭವಿಸುವ ಮುನ್ನ ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

ಚನ್ನಗಿರಿ: ಪಟ್ಟಣದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ- 13ರಲ್ಲಿ ಎಸ್.ಬಿ.ಐ. ಬ್ಯಾಂಕ್, ಪ್ರವಾಸಿ ಮಂದಿರದ ರಸ್ತೆ ಬದಿ ಮತ್ತು ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದ ಪುಟ್ಪಾತ್‌ ಪ್ರದೇಶದ ಪಕ್ಕದಲ್ಲಿ ಗಿಡಗಳು ಬಹು ಎತ್ತರಕ್ಕೆ ಬೆಳೆಯುತ್ತಿವೆ. ರೆಂಬೆಗಳು ವಿದ್ಯುತ್ ತಂತಿಗಳಿಗೆ ತಾಗುತ್ತಿವೆ. ವಿದ್ಯುತ್‌ ಅವಘಡಗಳು ಸಂಭವಿಸುವ ಮುನ್ನ ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

ಸರ್ಕಾರಿ ಕಾಲೇಜಿನ ಮುಂಭಾಗದ ಪುಟ್ಪಾತ್‌ ರಸ್ತೆಯಲ್ಲಂತೂ ಮರಗಳು ಪದೇಪದೇ ವಿದ್ಯುತ್ ತಂತಿಗೆ ತಾಗುತ್ತಿವೆ. ಮುಂಗಾರು ಗಾಳಿ-ಮಳೆಗಾಲ ಕಾಲವಿದು. ವಿದ್ಯುತ್ ತಂತಿಗಳ ಮೇಲೆ ಮರಗಳು, ರೆಂಬೆಗಳು ಬೀಳುವ, ಮಳೆನೀರು ಹಸಿರು ಗಿಡಗಳ ರೆಂಬೆಗಳಿಗೆ ತಗುಲಿ ಪಾದಚಾರಿಗಳಿಗೆ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇವೆ. ಆದರೆ, ಗಿಡ-ಮರಗಳ ರೆಂಬೆ ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು, ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ ಎಂದು ನಾಗರೀಕರಾದ ಶಿವಣ್ಣ, ಪ್ರಸನ್ನ, ಮಹೇಶ್ವರಪ್ಪ, ಶ್ರೀನಿವಾಸ್, ಎಂ.ಅಣ್ಣೋಜಿರಾವ್ ದೂರಿದ್ದಾರೆ. 3 ತಿಂಗಳ ಹಿಂದೆ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಸರ್ಕಾರಿ ಕಾಲೇಜಿನ ಮುಂಭಾಗದ ಟಿ.ಸಿ.ಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿ ಧಗಧಗನೆ ಉರಿಯುತ್ತ ಬೆಂಕಿಯ ಕೆಂಡಗಳನ್ನು ಸಿಡಿಸಿತ್ತು. ಈ ಘಟನೆ ದಾರಿಹೋಕರು, ವಾಹನಗಳ ಸವಾರರು, ಚಾಲಕರಲ್ಲಿ ಇನ್ನಿಲ್ಲದ ಭಯ ತಂದಿತ್ತು. ವಾಯು ವಿಹಾರಿಗಳು ಬೆಸ್ಕಾಂ ಅಭಿಯಂತರರಿಗೆ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು, ಬೆಸ್ಕಾಂ ಕಚೇರಿಗೆ ಹೋಗಿ ವಿಷಯ ತಿಳಿಸಿದ ಬಳಿಕ ವಿದ್ಯುತ್ ಕಡಿತಗೊಳಿಸಿದ್ದರು ಎಂದಿದ್ದಾರೆ.

ಈ ಹಿನ್ನೆಲೆ ವಿದ್ಯುತ್‌ನಿಂದ ಸಾವು- ನೋವುಗಳಾಗುವ ಮೊದಲೇ ತಂತಿಗಳಿಗೆ ತಗಲುತ್ತಿರುವ ಮರದ ರೆಂಬೆಗಳನ್ನು ಸವರಬೇಕು. ಅ ಎಂದು ವಿದ್ಯುತ್‌ ಅಪಘಾತಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

- - -

-13ಕೆಸಿಎನ್ಜಿ1, 2:

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...