ಹಾವೇರಿ: ಗ್ರಾಮ ಒನ್ ಹಾಗೂ ಸಿಎಸ್‌ಸಿ ಆನ್‌ಲೈನ್ ಸೆಂಟರ್‌ಗಳಲ್ಲಿ ಪಾಸ್‌ಪೋರ್ಟ್ ಅಳತೆಯ ಫೋಟೊ ತೆಗೆಯುವುದನ್ನು ನಿಷೇಧಿಸುವಂತೆ ಒತ್ತಾಯಿಸಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಮಾತನಾಡಿ, ತಾಲೂಕಿನಾದ್ಯಂತ ಗ್ರಾಮ ಒನ್ ಹಾಗೂ ಸಿಎಸ್‌ಸಿ ಆನ್‌ಲೈನ್ ಸೆಂಟರ್‌ಗಳಲ್ಲಿ ಪಾಸ್‌ಪೋರ್ಟ್ ಸೈಜ್ ಪೋಟೋ ತೆಗೆಯುತ್ತಿರುವುದು ಕಂಡುಬಂದಿದೆ.
ಇದು ವೃತ್ತಿನಿರತ ಛಾಯಾಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಲಕ್ಷಾಂತರ ರು. ಬಂಡವಾಳ ಹೂಡಿ ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ತೆರಿಗೆ ಕಟ್ಟುತ್ತಾ ಛಾಯಾಗ್ರಹಣ ವೃತ್ತಿಯನ್ನು ಮಾಡುತ್ತಿದ್ದೇವೆ. ಗ್ರಾಮ ಒನ್, ಸಿಎಸ್‌ಸಿ ಕೇಂದ್ರಗಳಲ್ಲಿ ಪೋಟೊ ತೆಗೆಯುವುದರಿಂದ ವೃತ್ತಿನಿರತ ಛಾಯಾಗ್ರಾಹಕರ ಹೊಟ್ಟೆ ಮೇಲೆ ಬರೆ ಎಳೆದಂತಾಗುತ್ತದೆ. ತಾಲೂಕಿನಾದ್ಯಂತ ಗ್ರಾಮ ಒನ್ ಹಾಗೂ ಸಿಎಸ್‌ಸಿ ಕೇಂದ್ರಗಳಲ್ಲಿ ಪೋಟೊ ತೆಗೆಯುವುದನ್ನು ನಿಷೇಧಿಸಲು ಕಟ್ಟು ನಿಟ್ಟಾಗಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ತಾಲೂಕಾಧ್ಯಕ್ಷ ಶಂಭನಗೌಡ ಅಂದಾನಿಗೌಡ್ರ, ತಾಲೂಕು ಕಾರ್ಯದರ್ಶಿ ಮಾಲತೇಶ ಇಚ್ಚಂಗಿ, ತಾಲೂಕು ಉಪಾಧ್ಯಕ್ಷ ಬಸವರಾಜ ಚಾವಡಿ, ಸಂಘದ ಸದಸ್ಯರಾದ ಅಶೋಕ ಬ್ಯಾಡಗಿ, ನಾಗರಾಜ ಹೊಸಮನಿ, ಶಿವಯೋಗಿ ಇತರರು ಇದ್ದರು. ಸತ್ಯಧರ್ಮ ತೀರ್ಥರ ಆರಾಧನಾ ಮಹೋತ್ಸವಸವಣೂರು: ನಗರದ ಸತ್ಯಬೋಧ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಿಯಲ್ಲಿ ಸತ್ಯಧರ್ಮ ತೀರ್ಥರ ಆರಾಧನಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಶ್ರೀಮಠದಲ್ಲಿ ಇರುವ ಸತ್ಯಧರ್ಮ ತೀರ್ಥರ ಸನ್ನಿಧಿಗೆ ವಿಶೇಷ ಪೂಜೆ, ಪಂಚಾಮೃತ, ರಜತ ರಥೋತ್ಸವ, ಅಲಂಕಾರ, ಹಸ್ತೋದಕ, ತೀರ್ಥ ಪ್ರಸಾದ ವಿತರಣೆ, ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವಾ, ಭಜನೆ ಹರಿನಾಮ ಸಂಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಯಿತು.ಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶ್ ಆಚಾರ್ಯ ಹಾಗೂ ಅಭಿಷೇಕ್ ಆಚಾರ್ಯ ನೇತೃತ್ವ ವಹಿಸಿದ್ದರು.
ಅರ್ಚಕರಾದ ರಂಗಾಚಾರ ರಾಯಚೂರು, ಪ್ರಮೋದಚಾರ್ಯ ರಾಯಚೂರು, ವಾಸುದೇವಚಾರ್ಯ ಹತ್ತಿಮತ್ತೂರ, ಪ್ರವೀಣ್ ಆಚಾರ್ಯ ಆಯಿ, ಸತ್ಯಪ್ರಮೋದ ರಾಯಚೂರ, ಮನೋಜ ಕುಲಕರ್ಣಿ, ಮೈಲಾರಿ ಕುಲಕರ್ಣಿ, ನಾರಾಯಣ ನಾಮಾವಳಿ, ಸತ್ಯಬೋಧ ಖಾರದ, ಸಂಕೇತ ಕುಲಕರ್ಣಿ, ಮನೋಜ ಕುಲಕರ್ಣಿ, ಸರ್ವಜ್ಞ ಖಾರದ, ವಾದಿರಾಜ ಗಲಗಲಿ ಮುಂತಾದವರು ಪಾಲ್ಗೊಂಡಿದ್ದರು. ರವಿ ಖಾರದ ಆರಾಧನಾ ಮಹೋತ್ಸವವನ್ನು ನಿರ್ವಹಿಸಿದರು.