ಕಾಡುಹಂದಿಗಳ ಹಾವಳಿ ತಡೆಗೆ ಮನವಿ

KannadaprabhaNewsNetwork |  
Published : Aug 20, 2025, 02:00 AM IST
ರಾಣಿಬೆನ್ನೂರಿನಲ್ಲಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಾಡುಹಂದಿಗಳು ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗಿ ರೈತರು ಬೆಳೆದಿರುವ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ.

ರಾಣಿಬೆನ್ನೂರು: ರಾಣಿಬೆನ್ನೂರು ಹೋಬಳಿ ಬಸಲಿಕಟ್ಟಿ ತಾಂಡಾ ಮತ್ತು ಸುತ್ತಮುತ್ತಲಿನ ಹೊಲಗಳಿಗೆ ದಾಳಿ ಮಾಡುತ್ತಿರುವ ಕಾಡುಹಂದಿಗಳ ಹಾವಳಿ ತಡೆಗಟ್ಟಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಲಾಯಿತು. ಕಾಡುಹಂದಿಗಳು ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗಿ ರೈತರು ಬೆಳೆದಿರುವ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ. ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಮಂಜುನಾಥ ಸಂಭೋಜಿ, ರಾಜೇಶ ಅಂಗಡಿ, ಬಸವರಾಜ ಮೇಗಳಮನಿ, ಲಲಿತವ್ವ ಲಮಾಣಿ, ಗಣೇಶಪ್ಪ ಲಮಾಣಿ, ಹಾಲೇಶಪ್ಪ ಲಮಾಣಿ, ಸಂದೀಪ ಲಮಾಣಿ, ರಮೀಜಾ ಹಲಗೇರಿ, ಶೈಲಾ ಹರನಗಿರಿ, ಹಮೀದಾ ಶಿಡೇನೂರ, ಮುನ್ನಿ ಹರಿಹರ, ನಸೀಮಾ, ಮರ್ದಾನಸಾಬ ಶಿಡೇನೂರ, ಆಯೀಶಾ ಹಲಗೇರಿ, ರೇಷ್ಮಾ ಬಿದರಿ, ಖೈರುನ್ನಿಸಾ ರಟ್ಟೀಹಳ್ಳಿ ಇದ್ದರು.ರಸ್ತೆ, ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ರಾಣಿಬೆನ್ನೂರು: ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಬರಲು ಸುಸಜ್ಜಿತವಾದ ರಸ್ತೆ ಹಾಗೂ ಅದರ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ಉಪ ತಹಸೀಲ್ದಾರ್ ಶಾಮ ಗೊರವರ ಅವರಿಗೆ ಮನವಿ ಸಲ್ಲಿಸಿದರು.ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಬರಲು ಈಗಿರುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಸದಾಗಿ ರಸ್ತೆ ನಿರ್ಮಿಸಿ ಅದರ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಬೇಕು. ರಸ್ತೆ ಸರಿಯಾಗಿಲ್ಲದ ಕಾರಣ ಜನರು ಗ್ರಾಪಂ ಕಚೇರಿಗೆ ಹೋಗಿ ಬರಲು ಹರಸಾಹಸ ಪಡುವಂತಾಗಿದೆ. ಇದೇ ರಸ್ತೆಯಲ್ಲಿ ಸರ್ಕಾರಿ ಶಾಲೆಯಿದ್ದು, ಮಕ್ಕಳು ಕೂಡ ಪ್ರಯಾಸದಿಂದ ಶಾಲೆಗೆ ಹೋಗಿ ಬರುವಂತಾಗಿದೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.ಕರವೇ ತಾಲೂಕು ಅಧ್ಯಕ್ಷ ಕೊಟ್ರೇಶ ಗುತ್ತೂರ, ಶಿವಪ್ಪ ಮರಡಿ, ಸೋಮರಡ್ಡಿ ಹಾದಿಮನಿ, ಮಲ್ಲಿಕಾರ್ಜುನ ಅಡಿವೆಪ್ಪನವರ, ಬಸಣ್ಣ ದೊಡ್ಡಕೊಪ್ಪದ, ಸಂಜೀವ ಬಾತಿ, ರಘು ಘೋರ್ಪಡೆ, ಯೋಗೇಶ ದೊಡ್ಡಗೌಡ್ರ, ಮಂಜಣ್ಣ ದೊಡ್ಡಗೌಡ್ರ, ಮಂಜಪ್ಪ ಗದಿಗೆಪ್ಪ, ಮಲ್ಲಿಕಾರ್ಜುನ ತೆಗ್ಗಿನ ಮತ್ತಿತರರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ