ರೈತ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಕೊಡಲು ಮನವಿ

KannadaprabhaNewsNetwork |  
Published : Feb 18, 2026, 02:00 AM IST
16ಕೆಬಿಪಿಟಿ.1.ಬಂಗಾರಪೇಟೆ ಬೆಸ್ಕಾಂ ಎಇಇ ಸುಕುಮಾರ್‌ ಗೆ ಕರ್ನಾಕಟ ರೈತ ಸೇನೆ ಕಾರ್ಯಕರ್ತರು ಬೇಸಿಗೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮುಂಬರುವ ದಿನಗಳಲ್ಲಿ ಬೇಸಿಗೆಯ ವಾತವರಣ ನಿರ್ಮಾಣವಾಗುತ್ತಿರುವ ಕಾರಣ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು.

ಬಂಗಾರಪೇಟೆ: ಮುಂಬರುವ ದಿನಗಳಲ್ಲಿ ಬೇಸಿಗೆಯ ವಾತವರಣ ನಿರ್ಮಾಣವಾಗುತ್ತಿರುವ ಕಾರಣ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ರಾತ್ರಿ ವೇಳೆಯಲ್ಲಿ 4 ಗಂಟೆಗಳ ಕಾಲ ಹಾಗೂ ಹಗಲಿನ ವೇಳೆಯಲ್ಲಿ 3 ಗಂಟೆಗಳ ಕಾಲ ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರದ ಸುತ್ತೋಲೆಯಂತೆ ವಿದ್ಯುತ್ ಒದಗಿಸಬೇಕು ಎಂದು ರೈತ ಸೇನೆ ತಾಲೂಕು ಸಮಿತಿ ಒತ್ತಾಯಿಸಿದೆ.ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗ ಬೆಸ್ಕಾಂ ಎಇಇ ಸುಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್, ಇತ್ತೀಚಿನ ದಿನಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೆ ರೈತರು ಬೆಳೆದ ಬೆಳೆಗಳು ನಷ್ಟವಾಗುತ್ತಿದೆ. ಹುಲಿಬೆಲೆ ಫೀಡರ್ ಎಫ್8 ವಿದ್ಯುತ್ ಮಾರ್ಗದಲ್ಲಿ ಲೋಡ್ ಜಾಸ್ತಿಯಿರುವ ಕಾರಣದಿಂದ ಕೆಲವು ದಿನಗಳ ಹಿಂದೆ ವೈಪರೇಟ್ ಮಾಡಿರುತ್ತಾರೆ. ಇದರಿಂದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸಿಗುತ್ತದೆ ಎಂಬ ಆಶಾಭಾವನೆ ಮೂಡಿಸಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಸಕಾಲಕ್ಕೆ ತ್ರಿಫೇಸ್ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದೆ ರೈತರು ಕಂಗಾಲಕ್ಕೆ ಈಡಾಗಿದ್ದಾರೆ.

ಆದಕಾರಣ ಎಫ್8 ವಿದ್ಯುತ್ ಮಾರ್ಗದಲ್ಲಿರುವ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ ಇಂದಿನಿಂದಲೇ 7 ಗಂಟೆಗಳ ಕಾಲ ರೈತರ ಪಂಪ್‌ಸೆಟ್‌ಗಳಿಗೆ ಎಫ್8 ಹಾಗೂ ಇನ್ನುಳಿದ ಬಂಗಾರಪೇಟೆ ತಾಲೂಕಿನ ಎಲ್ಲಾ ಮಾರ್ಗದಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ಸಿಂಗಲ್‌ಫೇಸ್ ಹಾಗೂ ತ್ರಿಫೇಸ್ ವಿದ್ಯುತ್ ಸಮರ್ಪಕವಾಗಿ ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಚಾಲಕ ಚಿಕ್ಕಹೊಸಹಳ್ಳಿ ಲಿಂಗಮೂರ್ತಿ, ಗೌರವಾಧ್ಯಕ್ಷ ವೆಂಕಟೇಶಪ್ಪ, ಕಾರ್ಯಾಧ್ಯಕ್ಷ ತಿಮ್ಮಾಪುರ ನಾಗರಾಜ್, ವೇಣುಗೋಪಾಲ್‌ಪುರ ಆನಂದ್‌ಗೌಡ, ಟೊಮ್ಯಾಟೋ ನಾಗೇಶ್, ಗಗನ್, ಉಪೇಂದ್ರ ಕುಮಾರ್, ಮೇಡಟ್ಟಿ ಮುನಿರಾಜು, ಆಟೋ ಚಂದ್ರಪ್ಪ, ನಂಜಪ್ಪ, ಚೌಡಪ್ಪ ಮುಖಂಡರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು: ಶಾಸಕ ಕೆ.ಎಸ್.ಆನಂದ್
ದೇಶ ಉಳಿಯಲು ಹಿಂದೂ ಧರ್ಮ ಉಳಿಯಬೇಕು