ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ನೀಟ್ ಅಕಾಡೆಮಿಯ ವತಿಯಿಂದ ನಡೆಸಲ್ಪಡುವ ನೀಟ್ ರಿಪೀಟರ್ಸ್‌ ಬ್ಯಾಚ್ ಗೆ ದಾಖಲಾತಿ ಆರಂಭಗೊಂಡಿದೆ.

ದ್ವಿತೀಯ ಪಿಯು ಪೂರೈಸಿ ನೀಟ್ ಪರೀಕ್ಷೆಯನ್ನೂ ಎದುರಿಸಿ ಉತ್ತಮ ಅಂಕ ಗಳಿಸುವಲ್ಲಿ ಎಡವಿದ ವಿದ್ಯಾರ್ಥಿಗಳಿಗಾಗಿಯೇ ಅಂಬಿಕಾ ನೀಟ್ ಅಕಾಡೆಮಿಯು ಕಳೆದ ಮೂರು ವರ್ಷಗಳಿಂದ ‘ನೀಟ್ ರಿಪೀಟರ್ಸ್‌ ಬ್ಯಾಚ್’ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ‘ಅಂಬಿಕಾ’ ನೀಟ್ ಪರೀಕ್ಷೆಗೆ ಅತ್ಯುತ್ಕೃಷ್ಟ ತರಬೇತಿ ನೀಡುತ್ತಿದ್ದು ಪ್ರತಿ ವರ್ಷವೂ ಈ ಸಂಸ್ಥೆಯಿಂದ ಹಲವಾರು ಮಂದಿ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಹೊಂದುತ್ತಿದ್ದಾರೆ. ಪ್ರಸ್ತುತ ವರ್ಷ ಪರೀಕ್ಷೆ ಎದುರಿಸಿದ ಶೇ.65 ಮಂದಿ ವೈದ್ಯಕೀಯ ಅರ್ಹತೆ ಪಡೆದಿರುವುದು ಸಂಸ್ಥೆಯ ಗುಣಮಟ್ಟವನ್ನು ಖಾತ್ರಿಪಡಿಸಿದೆ.

ಪ್ರತಿದಿನ ಪ್ರಾಯೋಗಿಕ ಅನುಭವ, ವಾರಕ್ಕೊಮ್ಮೆ ಪರೀಕ್ಷೆಗಳನ್ನು ಈ ನೀಟ್ ರಿಪೀಟರ್ಸ್‌ ತರಗತಿಗಳಲ್ಲಿ ನಡೆಸಲಾಗುತ್ತದೆ.

ವಿಶೇಷ ಶುಲ್ಕ ರಿಯಾಯಿತಿ: ಪ್ರಸ್ತುತ ಪ್ರಕಟಗೊಂಡಿರುವ ನೀಟ್ ಫಲಿತಾಂಶದಲ್ಲಿ 450ಕ್ಕೂ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಶೇಕಡಾ 75ರಷ್ಟು ಶುಲ್ಕ ವಿನಾಯಿತಿ ದೊರಕಲಿದೆ. ಹಾಗೆಯೇ 400ಕ್ಕಿಂತ ಅಧಿಕ ಪಡೆದವರಿಗೆ ಶೇಕಡಾ 50, 350 ಕ್ಕಿಂತ ಅಧಿಕ ಪಡೆದವರಿಗೆ ಶೇಕಡಾ 25 ಹಾಗೂ 300ಕ್ಕಿಂತ ಅಧಿಕ ಪಡೆದವರಿಗೆ ಶೇಕಡಾ 10ರಷ್ಟು ಶುಲ್ಕ ವಿನಾಯಿತಿ ಘೋಷಿಸಲಾಗಿದೆ. ಆಸಕ್ತರು ತಕ್ಷಣ ದಾಖಲಾತಿ ಮಾಡಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ: 9448835488/9482822800.