ಬಂಗಾರಪೇಟೆ: ನಗರದಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ನಡೆಸುತ್ತಿದ್ದು, ಅವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಬೇಕೆಂದು ತ್ರಿಚಕ್ರ ವಾಹನ ಚಾಲಕರ ಮಾಲೀಕರ ಸಂಘ ಆಗ್ರಹಿಸಿದೆ.
ಕಾನೂನು ಬದ್ಧವಾಗಿ ಸಾರಿಗೆ ವ್ಯವಸ್ಥೆಯಲ್ಲಿ ಉಪಸಾರಿಗೆಯಾಗಿ ಆಟೋ ರಿಕ್ಷಾ ಕ್ಯಾಬ್ ಚಾಲನೆ ಮಾಡಲಾಗುತ್ತಿದೆ. ಆದರೆ ಇತ್ತೀಚಿಗೆ ಆಫ್ ಆಧಾರಿತ ಟ್ಯಾಕ್ಸಿಗಳು ಕಾನೂನು ಬಾಹಿರವಾಗಿ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದೆ ನಗರದಲ್ಲಿ ನೂರಾರು ಬೈಕ್ ಟ್ಯಾಕ್ಸಿ ಚಾಲ್ತಿಯಲ್ಲಿದೆ, ಇದರಿಂದ ಆಟೋ ನಂಬಿ ಜೀವನ ನಡೆಸುತ್ತಿರುವ ನಮಗೆ ತೊಂದರೆಯಾಗಿದ್ದು, ಆದ್ದರಿಂದ ತಾಲೂಕು ಆಡಳಿತ ಹಾಗೂ ಆಟಿಓ ಇಲಾಖೆ ಅನಧಿಕೃತವಾಗಿ ಕಾನೂನು ಬಾಹಿರವಾಗಿ ಚಾಲನೆ ಮಾಡುತ್ತಿರುವ ಬೈಕ್ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಸುಜಾತ ಅವರಿಗೆ ಮನವಿ ನೀಡಿದರು.
ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್, ತಾಲೂಕು ಅಧ್ಯಕ್ಷ ಮುನಿವೆಂಕಟಪ್ಪ, ಉಪಅಧ್ಯಕ್ಷ ಜಾನಿಪಾಷ, ಗೌರವ ಅಧ್ಯಕ್ಷಸಿ.ಸುರೇಶ್, ಖಜಾಂಚಿ ಶಿವಪ್ಪ ಟಿ., ಪ್ರಧಾನ ಕಾರ್ಯದರ್ಶಿ ವಿ.ಮಂಜುನಾಥ್, ಕಮಲ್, ವೆಂಕಟಗಿರಿಯಪ್ಪ, ಅಶೋಕ್ ಕುಮಾರ್ ಇದ್ದರು.