ದಲಿತರಿಗೆ ಭೂಮಿ ಮಂಜೂರು ಮಾಡಲು ತಹಸೀಲ್ದಾರ್ ಗೆ ಮನವಿ

KannadaprabhaNewsNetwork |  
Published : Mar 01, 2024, 02:15 AM IST
ನರಸಿಂಹರಾಜಪುರ ತಹಶೀಲ್ದಾರ್ ಅವರಿಗೆ ದಲಿತ ಸಂಘರ್ಷ ಸಮಿತಿಯಿಂದ ಭೂ ಹೀನ ದಲಿತರಿಗೆ ಭೂಮಿ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭೂ ಹೀನ ದಲಿತರಿಗೆ ತಾಲೂಕಿನ ಕಸಬಾ ಹೋಬಳಿ ರಾವೂರು ಗ್ರಾಮ, ಶಿರಗಳಲೆ ಗ್ರಾಮ, ನಾಗಲಾಪುರ ಗ್ರಾಮದಲ್ಲಿ ಭೂಮಿ ಮಂಜೂರು ಮಾಡಿಕೊಡಲು ಹಾಗೂ ವಸತಿ ಹೀನರಾದ ಬಾಳೆಹೊನ್ನೂರು ಹೋಬಳಿ ಎಂ.ವಿ.ಭವಾನಿ ಅವರಿಗೆ ಸರ್ಕಾರಿ ಗೋಮಾಳ ವಸತಿ ಪ್ರದೇಶದಲ್ಲಿ ನಿವೇಶನ ಮಂಜೂರಾತಿ ಮಾಡುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭೂ ಹೀನ ದಲಿತರಿಗೆ ತಾಲೂಕಿನ ಕಸಬಾ ಹೋಬಳಿ ರಾವೂರು ಗ್ರಾಮ, ಶಿರಗಳಲೆ ಗ್ರಾಮ, ನಾಗಲಾಪುರ ಗ್ರಾಮದಲ್ಲಿ ಭೂಮಿ ಮಂಜೂರು ಮಾಡಿಕೊಡಲು ಹಾಗೂ ವಸತಿ ಹೀನರಾದ ಬಾಳೆಹೊನ್ನೂರು ಹೋಬಳಿ ಎಂ.ವಿ.ಭವಾನಿ ಅವರಿಗೆ ಸರ್ಕಾರಿ ಗೋಮಾಳ ವಸತಿ ಪ್ರದೇಶದಲ್ಲಿ ನಿವೇಶನ ಮಂಜೂರಾತಿ ಮಾಡುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ರಾವೂರು ಗ್ರಾಮ ಸ.ನಂ. 157 ರಲ್ಲಿ 10 ಎಕರೆ ಜಾಗ , ರಾವೂರು ಗ್ರಾಮ ಸ.ನಂ.159 ರಲ್ಲಿ 15.5 ಎಕ್ರೆ, ಶಿರಗಳಲೆ ಗ್ರಾಮದ ಸ.ನಂ. 28 ರಲ್ಲಿ 70 ಎಕ್ರೆ ಜಮೀನನ್ನು ದಲಿತ ಸಂಘರ್ಷ ಸಮಿತಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಭೂ ಹೀನ ದಲಿತರಿಗೆ ಒಟ್ಟು 141.16. ಎಕರೆ ಜಮೀನನ್ನು ಭೂ ಹೀನ ದಲಿತರಿಗೆ ಸಾಗುವಳಿ ಪತ್ರ ನೀಡಲು ಕಡತ ತಯಾರಿಸಬೇಕು. ತಾಲೂಕಿನ ಕಸಬಾ ಹೋಬಳಿ ಕಡಹಿನಬೈಲು ಗ್ರಾಮ ಸ.ನಂ. 39 ಮತ್ತು ಸ.ನಂ.40 ರಲ್ಲಿ ಕಾಫಿ ತೋಟದ ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿರುವ ಹೆಚ್ಚುವರಿ ಭೂಮಿ ತೆರವುಗೊಳಿಸಲಾಗಿದೆ. ತೆರವುಗೊಳಿಸಿದ ಭೂಮಿಯಲ್ಲಿ ಅರಣ್ಯ ಇಲಾಖೆ ಭೂಮಿಯನ್ನು ಹೊರತುಪಡಿಸಿ ಉಳಿದ ಸರ್ಕಾರಿ ಜಮೀನನ್ನು ಭೂ ಹೀನ ದಲಿತರಿಗೆ ಮಂಜೂರು ಮಾಡಿಕೊಡಬೇಕು. ಬಾಳೆಹೊನ್ನೂರು ಹೋಬಳಿ ಬಿ.ಕಣಬೂರು ಗ್ರಾಮದ ಎಂ.ವಿ.ಭವಾನಿ ದಲಿತ ಪರ ಹೋರಾಟಗಾರರಾಗಿದ್ದು ಪ.ಪಂಗಡಕ್ಕೆ ಸೇರಿರುತ್ತಾರೆ. ಇವರು ವಸತಿ ಹೀನರಾಗಿದ್ದು ಬಿ.ಕಣಬೂರು ಗ್ರಾಮ ಸ.ನಂ. 213 ಹಾಗೂ 216 ರಲ್ಲಿ ಸರ್ಕಾರಿ ಗೋಮಾಳ, ವಸತಿ ಪ್ರದೇಶವಾಗಿರುವುದರಿಂದ ಇವರಿಗೆ ಮನೆ ನಿವೇಶನವನ್ನು ಮಂಜೂರು ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಪತ್ರವನ್ನು ತಹಸೀಲ್ದಾರ್ ಅವರ ಪರವಾಗಿ ಶಿರಸ್ತೇದಾರ್ ಇಫ್ತಿಕಾರ್ ಅವರಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಡಿಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ.ಎನ್.ವೆಂಕಟೇಶ್, ರಾಜ್ಯ ಡಿಎಸ್ ಎಸ್‌ ಮಹಿಳಾ ಘಟಕದ ಸಂಚಾಲಕಿ ಎಂ.ವಿ.ಭವಾನಿ, ಜಿಲ್ಲಾ ಸಂಚಾಲಕರಾದ ವಸಂತಕುಮಾರ್, ಅಬ್ದುಲ್ ರೆಹಮಾನ್, ಶೃಂಗೇರಿ ಕ್ಷೇತ್ರ ಸಂಚಾಲಕ ಪಿ.ಮಂಜುನಾಥ್, ಜಾರ್ಜ್, ಸಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳ ಪ್ರತಿಷ್ಠೆಯಿಂದ ಗ್ರಾಮಗಳು ಸೊರಗುತ್ತಿವೆ: ಶಾಸಕಿ ಶಾರದಾ ಪೂರ್ಯಾನಾಯ್ಕ್
ಬಿಜೆಪಿ ಮಹಿಳಾ ಮೋರ್ಚಾಗೆ ಸ್ತ್ರೀ ಕಾಳಜಿ ಇಲ್ಲ: ದಿನೇಶ್‌ ಶೆಟ್ಟಿ