ಬಾಳೆ ಗ್ರಾಮದ ಜಮೀನಿನ ಖಾತೆಗೆ ಒತ್ತಾಯಿಸಿ ತಹಸೀಲ್ದಾರ್ ಗೆ ಮನವಿ

KannadaprabhaNewsNetwork |  
Published : Oct 05, 2025, 01:00 AM IST
 ನರಸಿಂಹರಾಜಪುರ ಪಟ್ಟಣದ ಪೌರ ಕಾರ್ಮಿಕರ ಬೀದಿಯ ಪ.ಜಾತಿಗೆ ಸೇರಿದ 6 ಕುಟುಂಭದ ಸದಸ್ಯರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ತಹಶೀಲ್ದಾರ್ ಅವರಿಗೆ ಶನಿವಾರ ಮನವಿ ಪತ್ರ ಅರ್ಪಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಪಟ್ಟಣದ ಪೌರ ಕಾರ್ಮಿಕರ ಬೀದಿಯ ಪ.ಜಾತಿಗೆ ಸೇರಿದ 6 ಕುಟುಂಭದವರಿಗೆ ಬಾಳೆ ಗ್ರಾಮದ ಸರ್ವೆ ನಂ.19 ರಲ್ಲಿ ಮಂಜೂರಾಗಿದ್ದ 12 ಎಕರೆ ಜಮೀನಿಗೆ ಖಾತೆ, ಪಹಣಿ, ಸರ್ವೆ ಮಾಡಿ ಕಲ್ಲು ಬಾಂದು ಹಾಕಿಸಿ ಜಮೀನನ್ನು ನಮ್ಮ ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಪ.ಜಾತಿಗೆ ಸೇರಿದ 6 ಕುಟುಂಬದವರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಶನಿವಾರ ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಕಸಬಾ ಹೋಬಳಿ ಬಾಳೆಕೊಪ್ಪದ ಸರ್ವೆ ನಂ.19 ರಲ್ಲಿ 2 ಎಕರೆ ಭೂಮಿ ಮಂಜೂರು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ಪೌರ ಕಾರ್ಮಿಕರ ಬೀದಿಯ ಪ.ಜಾತಿಗೆ ಸೇರಿದ 6 ಕುಟುಂಭದವರಿಗೆ ಬಾಳೆ ಗ್ರಾಮದ ಸರ್ವೆ ನಂ.19 ರಲ್ಲಿ ಮಂಜೂರಾಗಿದ್ದ 12 ಎಕರೆ ಜಮೀನಿಗೆ ಖಾತೆ, ಪಹಣಿ, ಸರ್ವೆ ಮಾಡಿ ಕಲ್ಲು ಬಾಂದು ಹಾಕಿಸಿ ಜಮೀನನ್ನು ನಮ್ಮ ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಪ.ಜಾತಿಗೆ ಸೇರಿದ 6 ಕುಟುಂಬದವರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಶನಿವಾರ ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಿದರು.

ಮನವಿಯಲ್ಲಿ ಕಸಬಾ ಹೋಬಳಿ ಬಾಳೆಕೊಪ್ಪದ ಸರ್ವೆ ನಂ.19 ರಲ್ಲಿ 1984-85 ರಲ್ಲಿ ದರಕಾಸ್ತು ಮೂಲಕ ತಲಾ 2 ಎಕ್ರೆ ಯಂತೆ ಒಟ್ಟು 12 ಎಕ್ರೆ ಮಂಜೂರಾಗಿದೆ. ಮಂಜೂರಾದ ಅವಧಿಯಿಂದ ಇಲ್ಲಿವರೆಗೂ ಖಾತೆ, ಪಹಣಿ ಹಾಗೂ ಚೆಕ್ ಬಂಧಿ, ಕಲ್ಲು ಬಾಂದು ಹಾಕಿರುವುದಿಲ್ಲ. ಮರ ಮಾಲ್ಕಿ ಮಾಡಿರುವುದಿಲ್ಲ ಎಂದು ಆರೋಪಿಸಿದರು.

ಈ ಜಮೀನು ಪರಿಶಿಷ್ಟ ಜಾತಿಯವರಿಗೆ ಮಂಜೂರು ಮಾಡಲಾಗಿದೆ. ಆದರೆ, ಕೆಲವರು ಈ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಪ.ಜಾತಿಯವರಿಗೆ ಮಂಜೂರಾದ ಜಮೀನನ್ನು ಬೇರೆಯವರಿಗೆ ಮತ್ತೆ ಮಂಜೂರು ಮಾಡಿದರೆ ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಈ ಕಾಯ್ದೆ ಉಲ್ಲಂಘನೆ ಮಾಡಿದರೆ ಅಧಿಕಾರಿಗಳು,ನೌಕರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಒತ್ತುವರಿ ಮಾಡಿದ ಜಮೀನನ್ನು ಖುಲ್ಲಾ ಪಡಿಸಿ ಪ.ಜಾತಿಯವರಿಗೆ ಈ 12 ಎಕ್ರೆ ಜಮೀನನ್ನು ನೀ ಡಬೇಕು. ಇಲ್ಲದಿದ್ದಲ್ಲಿ ಅ.15 ರ ನಂತರ ಅಮರಣಾಂತ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.

ಮನವಿ ನೀಡುವ ಸಂದರ್ಭದಲ್ಲಿ ಪ.ಜಾತಿಗೆ ಸೇರಿದ 6 ಕುಟುಂಬಗಳ ಸದಸ್ಯರು, ದಲಿತ ಸಂಘರ್ಷ ಸಮಿತಿ ಮುಖಂಡರಾದ ತರೀಕೆರೆ ವೆಂಕಟೇಶ್, ಎನ್.ಆರ್.ಪುರದ ರಾಜೇಶ್, ರೆಹಮಾನ್, ಬಾಳೆಹೊನ್ನೂರು ಭವಾನಿ ಮತ್ತಿತರರು ಇದ್ದರು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’