ಶಿಶಿಕ್ಷು ತರಬೇತಿಗೆ ಅರ್ಜಿ

KannadaprabhaNewsNetwork |  
Published : Aug 20, 2026, 04:00 AM IST
ದಿನಸ,ಕಮಮೂಡ್, ಚೌಹಾಣ್ ತಾಂಡ ಸೇರಿದಂತೆ ಮೂರ್ನಾಲ್ಕು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು. | Kannada Prabha

ಸಾರಾಂಶ

ಬಾಗಲಕೋಟೆ: ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನವರು ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್‌ ನಲ್ಲಿ ಪ್ರಾರಂಭವಾಗುವ ಒಂದು ವರ್ಷದ ಶಿಶಿಕ್ಷು ತರಬೇತಿಗಾಗಿ ಫಿಟ್ಟರ, ಟರ್ನರ್, ಮಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ, ಕೋಪಾ, ಕಾರ್ಪೆಂಟರ್, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಫೌಂಡ್ರಿಮನ್, ಟೂಲ್ ಮತ್ತು ಡೈ ಮೇಕರ್, ಸಿಎನ್ಸಿ ಪ್ರೋಗ್ರಾಮರ್ ಕಂ ಆಪರೇಟರ್, ಮೆಕ್ಯಾನಿಕ್ ಈ ಟ್ರೇಡುಗಳಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ತರಬೇತಿ ಅವಧಿಯಲ್ಲಿ ಸರ್ಕಾರದ ನಿಯಮಾನಸಾರ ಸ್ಟೈಫಂಡ್ ಮತ್ತು ಇತರೆ ಸೌಲಭ್ಯಗಳೂ ಲಭ್ಯವಿರುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಎನ್ಟಿಸಿ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರ, ಆಧಾರ ಕಾರ್ಡ ಮತ್ತು ಪಾನ್‌ ಕಾರ್ಡ ಹಾಗೂ ಅವುಗಳ ಝರಾಕ್ಸ್ ಪ್ರತಿ ಮತ್ತು ಒಂದು ಪಾಸ್ಪೋರ್ಟ ಸೈಜ್ ಫೋಟೊದೊಂದಿಗೆ ಆ.29ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂ.135, ನವನಗರ, ಬಾಗಲಕೋಟೆ ಇಲ್ಲಿ ಖುದ್ದಾಗಿ ಬಂದು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235337ಗೆ ಸಂಪರ್ಕಿಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರವಾಹ ಮುನ್ನೆಚ್ಚರಿಕೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ
ಮಕ್ಕಳಲ್ಲಿ ಫಿಟ್ಸ್ ಸಮಸ್ಯೆಯಿದ್ದರೆ ಗಾಬರಿಬೇಡ, ಅರಿವಿರಲಿ: ಡಾ.ಆಶಾ