ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ಪ್ರತಿ ಬ್ಲಾಕ್‌ನಿಂದ 3 ರಿಂದ 5 ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ವೀಕ್ಷಕರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಇದರಲ್ಲಿ ಯಾವುದೇ ಗುಂಪುಗಾರಿಕೆ ಅಥವಾ ಭಿನ್ನಾಭಿಪ್ರಾಯಗಳಿಗೆ ಯಾವುದೇ ಅವಕಾಶವನ್ನು ಕೊಡುವುದು ಬೇಡ. ಎಐಸಿಸಿಯಿಂದ ಈ ಹಿಂದಿನ ಬ್ಲಾಕ್ ಅಧ್ಯಕ್ಷರ ಅವಧಿಯೂ ಐದು ವರ್ಷ ಸೇವೆ ಸಲ್ಲಿಸಿದ್ದರೆ, ಅವರ ಸ್ಥಾನಕ್ಕೆ ನಾವು ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡುತ್ತೇವೆ. ಇದು ಪಕ್ಷದ ನೇಮಕಾತಿಯ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಎಲ್ಲ ಕಾರ್ಯಕರ್ತರೂ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ರೇಷ್ಮೆ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ ರಫೀಕ ಟಫಾಲ್ ವೀಕ್ಷಕರಾಗಿ ಆಗಮಿಸಿದ್ದರು.ಈ ಸಂದರ್ಭದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಸದ್ಯದ ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ, ಮುಖಂಡರಾದ ವೈ.ಆರ್.ಹೆಬ್ಬಳ್ಳಿ, ರಮೇಶ ಬೂದಿಹಾಳ, ಪ್ರಕಾಶ ಮುರಗೋಡ, ಲೆಂಕೆಪ್ಪ ಹಿರೇಕುರುಬರ, ಮೂಕಪ್ಪ ಹುನ್ನೂರ, ಬಿ.ಎಮ್.ಸಂಕನೂರ, ರಜಾಕ ಕುದರಿ, ಸಲೀಂ ಅಹ್ಮದ ಖಾಜಿ, ಫಕೀರಪ್ಪ ತಳವಾರ, ರಂಗನಾಥ ಮೊಖಾಶಿ, ಶಿವಾನಂದ ಮಳ್ಳಿಮಠ, ಚಿದಾನಂದ ಕಾಟವಾ, ಸಿದ್ದು ಕೊಣ್ಣೂರ, ರಾಜು ಸಂಗಮ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಈಗಾಗಲೇ ಐದು ವರ್ಷ ಕಾರ್ಯನಿರ್ವಹಿಸಿದವರನ್ನು ಆ ಸ್ಥಾನದಿಂದ ಬದಲಾವಣೆ ಮಾಡಿ, ಹೊಸಬರಿಗೆ ಅವಕಾಶ ಕೊಡುವುದು ಕಾಂಗ್ರೆಸ್ ಪಕ್ಷದ ನಿಯಮ. ಹೀಗಾಗಿ, ಆ ಪ್ರಕಾರ 40 ರಿಂದ 60ವರ್ಷದೊಳಗಿನವರನ್ನು ಹೊಸದಾಗಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ ಮಾಡಲು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಎಐಸಿಸಿ ಇದೊಂದು ಅವಕಾಶವನ್ನು ಕೊಟ್ಟಿದೆ. ಬ್ಲಾಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಶಾಸಕರು, ಪಕ್ಷದ ಮುಖಂಡರು ನನಗೆ ಇಲ್ಲಿಯವರೆಗೆ ಅವಕಾಶ ಕೊಟ್ಟಿದ್ದರು. ನಾನು ನನ್ನ ಅವಧಿಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಪಕ್ಕಕ್ಕಾಗಿ ಕೆಲಸ ಮಾಡಿದ್ದೇನೆ.