ಪಹಣಿ, ವಂಶವೃಕ್ಷ ದಾಖಲೆಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿ

KannadaprabhaNewsNetwork |  
Published : Jan 09, 2025, 12:47 AM IST
ತರೀಕೆರೆಯಲ್ಲಿ ಭೂಸುರಕ್ಷಾ ಯೋಜನೆ ಕಾರ್ಯಕ್ರಮ ಉದ್ಗಾಟನೆ | Kannada Prabha

ಸಾರಾಂಶ

Apply online for land registry, family tree records

ಕನ್ನಡಪ್ರಭ ವಾರ್ತೆ ತರೀಕೆರೆ

ಸಾರ್ವಜನಿಕರು ಎಲ್ಲಾ ಅರ್ಜಿಗಳನ್ನು ಆನ್‌ಲೈನ್‌ ನಲ್ಲಿ ಸಲ್ಲಿಸಬೇಕೆಂದು ಶಾಸಕ ಜಿ.ಹೆಚ್.ಶ್ರೀನಿವಾಸ್ ಹೇಳಿದ್ದಾರೆ.

ಅವರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಭೂಸುರಕ್ಷಾ ಯೋಜನೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕಂದಾಯ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಎಲ್ಲಾ ಅರ್ಜಿಗಳನ್ನು ದಾಖಲಿಸಲಾಗುತ್ತಿದೆ, ವಂಶವೃಕ್ಷ, ಪಹಣಿ ಇತ್ಯಾದಿ ಎಲ್ಲಾ ದಾಖಲೆಗಳು ದೊರಕುತ್ತದೆ.

ಬಗರ್ ಹುಕುಂ ಸಾಗುವಳಿ, ಪಹಣಿ, ರಸ್ತೆ ಆಗುತ್ತಿದೆ, ಗ್ರೇಡ್ ತಹಸೀಲ್ದಾರ್‌ ನೂರುಲ್ಲಾ ಅವರು ಭೂಸುರಕ್ಷಾ ಯೋಜನೆಗಾಗಿ ಶ್ರಮವಹಿಸಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.

ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ, ಭೂಸುರಕ್ಷಾ ಯೋಜನೆಯು ಸರ್ಕಾರದ ಮಹತ್ವದ ಯೋಜನೆಯಾಗಿದೆ, ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ, ಶಾಶ್ವತ ದಾಖಲೆಗಳು, 30 ವರ್ಷಗಳ ದಾಖಲೆಗಳು ಹೀಗೆ ಎ.ಬಿ.ಸಿ.ಡಿ ವಿಭಾಗ ಮಾಡಿ ಕಡತಗಳು ಇನ್ನು ಮುಂದೆ ನಶಿಸಿ ಹೋಗುವುದಿಲ್ಲ, ಗ್ರ್ಯಾಂಟ್ ರೆಕಾರ್ಡ್ಸ್, ವಂಶವೃಕ್ಷ ಇತ್ಯಾದಿ ದಾಖಲೆಗಳು ಮತ್ತು ಕಡತಗಳು ತಕ್ಷಣ ದೊರೆಯುತ್ತದೆ ಎಂದು ಅವರು ಹೇಳಿದರು.

ಗ್ರೇಡ್-2 ತಹಸೀಲ್ದಾರ್‌ ನೂರುಲ್ಲಾ ಅವರು ಮಾತನಾಡಿ, ಅಧಿಕಾರಿಗಳು, ಗ್ರಾಮ ಸಹಾಯಕರು ಎಲ್ಲರೂ ತಂಡದಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.

ಬಗರ್ ಹುಕುಂ ಸಮಿತಿ ಸದಸ್ಯರಾದ ಜಗದೀಶ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಉಪತಹಸೀಲ್ದಾರ್‌, ಕೃಷ್ಣಮೂರ್ತಿ, ವಾಣಿಶ್ರೀ, ಭೂಮಾಪನ ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.

----------------

ಫೋಟೋ....

ತರೀಕೆರೆಯಲ್ಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಭೂಸುರಕ್ಷಾ ಯೋಜನೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು, ಬಗರ್ ಹುಕುಂ ಸಮಿತಿ ಸದಸ್ಯರಾದ ಜಗದೀಶ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಉಪತಹಸೀಲ್ದಾರ್‌ ಕೃಷ್ಣಮೂರ್ತಿ, ವಾಣಿಶ್ರೀ, ಭೂಮಾಪನ ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.

8ಕೆಟಿಆರ್.ಕೆ.15ಃ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!