ಬದುಕಿನಲ್ಲಿ ವಿಜ್ಞಾನ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Mar 05, 2025, 12:34 AM IST
೪ಕೆಎಲ್‌ಆರ್-೨ವಿಜ್ಞಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿ?ತ್ ಕೋಲಾರ, ರೋಟರಿ ಕ್ಲಬ್ ಕೋಲಾರ,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಸ್ಥೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಕೋಲಾರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಧು ಮಾಲತಿ ಪಡುವಣೆ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸರ್‌ ಸಿ.ವಿ.ರಾಮನ್‌ ನಂತರ ದೇಶದ ಮತ್ತೊಬ್ಬ ಯಾವ ವಿಜ್ಞಾನಿಯೂ ನೋಬಲ್‌ ಪಾರಿತೋಷಕ ಗಳಿಸಲು ಸಾಧ್ಯವಾಗಿಲ್ಲ. ಅದನ್ನು ಸಾಧಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಅದಕ್ಕೆ ಶ್ರದ್ಧೆ ಪ್ರೀತಿಯಿಂದ ಸಂಶೋಧನಾ ಕಾರ್ಯದಲ್ಲಿ ತೊಡಗಬೇಕು. ಜೀವನದಲ್ಲಿ ಮೌಢ್ಯಗಳಿಗೆ ಜೋತುಬೀಳದೆ ವೈಜ್ಞಾನಿಕವಾಗಿ ಆಲೋಚಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರವಿಜ್ಞಾನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ವಿಜೇತರಾಗಲು ಸಾಧ್ಯವಿಲ್ಲ. ಸೋಲು ಗೆಲುವಿನ ಮೆಟ್ಟಿಲಾಗಬೇಕು, ಎಲ್ಲಿ ನಾವು ಸ್ಪರ್ಧೆಯಲ್ಲಿ ಎಡವಿದ್ದೇವೆ ಎಂದು ಆಲೋಚಿಸಿ ಮುಂದಿನ ಸ್ಪರ್ಧೆಗೆ ತಯಾರಿ ನಡೆಸಿಕೊಳ್ಳಬೇಕು ಎಂದು ಕೋಲಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಧು ಮಾಲತಿ ಪಡುವಣೆ ತಿಳಿಸಿದರು.ವಿಜ್ಞಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೋಲಾರ, ರೋಟರಿ ಕ್ಲಬ್ ಕೋಲಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಸ್ಥೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉತ್ತರ ಬರೆಯಲು ಸಿದ್ಧತೆ ಅಗತ್ಯ

ಪರೀಕ್ಷೆಯಲ್ಲಿಯೂ ಉತ್ತರಗಳನ್ನು ಬರೆಯುವಾಗಲೂ ಸರಿಯಾದ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬೇಕು. ಸೋತವರು ಎಂದಿಗೂ ಬೇಜಾರು ಮಾಡಿಕೊಳ್ಳಬಾರದು ಎಂದರು. ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಸರ್ ಸಿ.ವಿ.ರಾಮನ್‌ ಸಾಧನೆ ಮತ್ತು ನೋಬಲ್‌ ಪಾರಿತೋಷಕ ಪಡೆಯುವ ಹಿಂದಿನ ಶ್ರಮ ಶ್ರದ್ಧೆ ಬಗ್ಗೆ ಉದಾಹರಣೆ ಸಹಿತ ವಿವರಿಸಿದ ಅವರು, ರಾಮನ್‌ ನಂತರ ಮತ್ತೊಬ್ಬ ವಿಜ್ಞಾನಿಗೆ ನೋಬಲ್‌ ಪಾರಿತೋಷಕ ಗಳಿಸಲು ಸಾಧ್ಯವಾಗಿಲ್ಲ. ಅದನ್ನು ನೀವು ಮಕ್ಕಳು ಸಾಧಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅದಕ್ಕೆ ಶ್ರದ್ಧೆ ಪ್ರೀತಿಯಿಂದ ಸಂಶೋಧನಾ ಕಾರ್ಯದಲ್ಲಿ ತೊಡಗಬೇಕೆಂದರು.ನಿವೃತ್ತ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಶೈಕ್ಷಣಿಕ ಸಂಯೋಜಕ ಬಿ.ಶಿವಕುಮಾರ್, ಕೋಲಾರ ಕಾರ್ಯದರ್ಶಿ ಎಸ್.ಎಂ.ಚಂದ್ರಶೇಖರ್ ಪರ್ಯವರಣ ಸಂರಕ್ಷಣಾ ಗತಿವಿಧಿ ಸಂಸ್ಥೆಯ ಮಹೇಶ್ ರಾವ್ ಕದಂ, ಗಮನ ಮಹಿಳಾ ಸಮೂಹದ ರಾಜಕುಮಾರ್, ಸಮಾಜ ಸೇವಕ ಬೈರೆಡ್ಡಿ, ಚಾಲಕರ ಸಂಘದ ಅಧ್ಯಕ್ಷ ಶ್ರೀಧರ್, ವಿಜಯ ಉನ್ನತಿ ಟ್ರಸ್ಟ್ ಮುರಳಿ, ಸುಪ್ರೀಂ ಸೇವಾ ಸಂಸ್ಥೆಯ ಸುಪ್ರೀಂ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌