ಕನ್ನಡಪ್ರಭ ವಾರ್ತೆ ಮಂಡ್ಯ
ಶಿವಪುರ ಹಾಗೂ ಕಂಬದಹಳ್ಳಿ ಗ್ರಾಪಂ ಆಡಳಿತಾಧಿಕಾರಿಯನ್ನಾಗಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು. ಚಂದಗಾಲು, ಬಸರಾಳು ಗ್ರಾಪಂಗೆ ಪಂಚಾಯತ್‌ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು. ಮುತ್ತೇಗೆರೆ, ಜಿ.ಮಲ್ಲಿಗೆರೆ ಗ್ರಾಪಂಗೆ ಶಿಶು ಅಭಿವೃದ್ಧಿ ಯೋಜನಾಕಾರಿ. ಬೇಬಿ, ಹಲ್ಲೇಗೆರೆ ಗ್ರಾಪಂಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ದೊಡ್ಡಗರುಡನಹಳ್ಳಿ, ಕೆರಗೋಡು ಗ್ರಾಪಂಗೆ ಮಂಡ್ಯ ತಾಲೂಕು ಸಹಾಯಕ ಕೃಷಿ ಅಧಿಕಾರಿ. ಉಪ್ಪರಕನಹಳ್ಳಿ, ಮುದಗಂದೂರು ಗ್ರಾಪಂಗೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ನೇಮಕ ಮಾಡಲಾಗಿದೆ.
ಬೇವುಕಲ್ಲು, ದುದ್ದ ಗ್ರಾಪಂಗೆ ಎಚ್‌ಎಲ್‌ಬಿಸಿ ದುದ್ದ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು. ಬಿ.ಹೊಸೂರು, ಹೊಡಾಘಟ್ಟ ಗ್ರಾಪಂಗೆ ದಕ್ಷಿಣ ವಲಯ ಬಿಇಒ, ಮಾರಗೌಡನಹಳ್ಳಿ, ಆಲಕೆರೆ ಗ್ರಾಪಂಗಳಿಗೆ ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೀಲಾರ, ಹುಲಿವಾನ ಗ್ರಾಪಂಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು. ಎಚ್.ಮಲ್ಲಿಗೆರೆ, ಶಿವಳ್ಳಿ ಗ್ರಾಪಂಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಹುಳ್ಳೇನಹಳ್ಳಿ, ಗೋಪಾಲಪುರ ಗ್ರಾಪಂಗೆ ಕಾವೇರಿ ನೀರಾವರಿ ನಿಗಮದ ವಿ.ಸಿ.2 ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು. ಗಾಣದಾಳು, ಹೊಳಲು ಗ್ರಾಪಂಗೆ ಸಹಾಯಕ ಕೃಷಿ ನಿರ್ದೇಶರು, ಸಾತನೂರು ಉಮ್ಮಡಹಳ್ಳಿ ಗ್ರಾಪಂಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂಡ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ನೇಮಕ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ.ಹನಕೆರೆ, ಕನ್ನಲಿ ಗ್ರಾಪಂಗೆ ಪಿಎಂ.ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕರು. ಬಿ.ಗೌಡಗೆರೆ, ಬೇವಿನಹಳ್ಳಿ ಗ್ರಾಪಂಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು. ಮಂಡ್ಯ ಗ್ರಾಮಾಂತರ, ಚಂದಗಾಲು (ದುದ್ದ) ಗ್ರಾಪಂಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ. ಮಾರಚಾಕನಹಳ್ಳಿ, ತೂಬಿನಕೆರೆ ಗ್ರಾಪಂಗೆ ಸಹಾಯಕ ತೋಟಗಾರಿಕೆ ಅಧಿಕಾರಿ. ಇಂಡುವಾಳು, ಬೇಲೂರು ಗ್ರಾಪಂಗೆ ತಾಲೂಕು ಯೋಜನಾಧಿಕಾರಿ. ಯಲಿಯೂರು, ಸೂನಗಹಳ್ಳಿ ಗ್ರಾಪಂಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು. ತಗ್ಗಹಳ್ಳಿ, ಹಳುವಾಡಿ ಗ್ರಾಪಂಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ. ಸಂತೆಕಸಲಗೆರೆ, ಬೂದನೂರು ಪಂಚಾಯ್ತಿಗೆ ದುದ್ದ ಯೋಜನೆ ಶಿಶು ಅಭಿವೃದ್ಧಿ ಯೋಜನಾಕಾರಿ. ಕೊತ್ತತ್ತಿ, ಮಂಗಲ ಗ್ರಾಪಂಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಡಾ.ಕುಮಾರ ತಿಳಿಸಿದ್ದಾರೆ.