ಕನ್ನಡಪ್ರಭ ವಾರ್ತೆ ಅರಕಲಗೂಡು
ನೂತನವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಟಿ. ಸೋಮಶೇಖರ್ ಮತ್ತು ರಾಜೇಗೌಡ ಅವರನ್ನು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹರ್ಷೋದ್ಘಾರಗಳೊಂದಿಗೆ ಬರಮಾಡಿಕೊಂಡರು. ಅನಕೃ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು. ಸೋಮಶೇಖರ್ ಹಾಗೂ ರಾಜೇಗೌಡ ಮಾತನಾಡಿ, ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಜಯಗಳಿಸುವಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಪಪಂ ಉಪಾಧ್ಯಕ್ಷ ಸುಬಾನ್ ಷರೀಫ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಐಎನ್‌ಟಿಯುಸಿ ಅಧ್ಯಕ್ಷ ಎ. ಎಸ್. ರಂಗನಾಥ್, ಬಗರ್‌ಹುಕುಂ ಸಮಿತಿ ಸದಸ್ಯರಾದ ಎಸ್. ಎಲ್. ಗಣಪತಿ, ಪುಟ್ಟಯ್ಯ, ಕೆಡಿಪಿ ಸದಸ್ಯ ಸುರೇಶ್, ಮುಖಂಡರಾದ ದಶರಥ, ನಿಂಗರಾಜ್, ಸತ್ಯರಾಜ್, ಸಲೀಮ್ ಭಾಗವಹಿಸಿದ್ದರು.