ಅರಭಾವಿ ಪಿಕೆಪಿಎಸ್‌ಗೆ ಲಕ್ಷ್ಮಣ ಅಧ್ಯಕ್ಷ, ಕೃಷ್ಣಾ ಉಪಾಧ್ಯಕ್ಷ

KannadaprabhaNewsNetwork |  
Published : Nov 29, 2024, 01:04 AM IST
26ಜಿಪಿಬಿ1 | Kannada Prabha

ಸಾರಾಂಶ

ಘಟಪ್ರಭಾ ಸಮೀಪದ ಅರಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಲಕ್ಷ್ಮಣ ಸದಾಶಿವ ಶಿಂಗೋಟಿ ಅಧ್ಯಕ್ಷರಾಗಿ ಹಾಗೂ ಕೃಷ್ಣಾ ಯಶವಂತ ಬಂಡಿವಡ್ಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಘಟಪ್ರಭಾ: ಸಮೀಪದ ಅರಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಲಕ್ಷ್ಮಣ ಸದಾಶಿವ ಶಿಂಗೋಟಿ ಅಧ್ಯಕ್ಷರಾಗಿ ಹಾಗೂ ಕೃಷ್ಣಾ ಯಶವಂತ ಬಂಡಿವಡ್ಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸಂಘದ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರಭಾವಿ, ದುರದುಂಡಿ, ಗಣೇಶವಾಡಿ, ಲೋಳಸೂರ ಮತ್ತು ಬಸಳಿಗುಂದಿ ಎಲ್ಲ ಗ್ರಾಮಗಳ ಗುರುಹಿರಿಯರು ಸಂಘದ ಸದಸ್ಯರು, ರೈತಬಾಂಧವರು ಹಾಗೂ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದಿಸಿದರು. ಆಡಳಿತ ಮಂಡಲಿಯ ಸದಸ್ಯರಾದ ಮುತ್ತೆಪ್ಪ ಸ.ದ.ಝಲ್ಲಿ, ಯಲ್ಲಪ್ಪ ಕೆಂ.ಸತ್ತಿಗೇರಿ, ಲಕ್ಷ್ಮಣ ಬ.ಜೋನಿ, ಲಗಮಪ್ಪಯ. ಪೂಜೇರಿ, ಉದ್ದಪ್ಪ ಗಿ. ದುರದುಂಡಿ, ಹಣಮಂತ ಬ.ಚಿಪ್ಪಲಕಟ್ಟಿ, ಲಕ್ಷ್ಮಣ.ಮ.ಮಾಳ್ಯಾಗೋಳ, ಹಣಮಂತ ಶಂ.ಪೂಜೇರಿ, ಬಾಗೀರಥಿದುಂ. ಚಿಗರಿತೋಟ, ಸಾಂವಕ್ಕ ಯ.ಅಂತರಗಟ್ಟಿ.ಡಿಸಿಸಿ ಬ್ಯಾಂಕ್‌ ಪ್ರತಿನಿಧಿಯವರಾದ ದುಂಡಪ್ಪ ಲ.ಅರಭಾವಿ, ಚುನಾವಣಾಧಿಕಾರಿಗಳಾದ ಸುರೇಶ ಬಿ.ಪಾಟೀಲ ಇದ್ದರು.

26ಜಿಪಿಬಿ1

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!