ಕನ್ನಡಪ್ರಭ ವಾರ್ತೆ ಪಾಂಡವಪುರ
ಬಳಿಕ ಮಾತನಾಡಿದ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಗ್ರಾಮಗಳಲ್ಲಿ ಅರಳಿಕಟ್ಟೆ ನಿರ್ಮಿಸುವುದು ಉತ್ತಮ ಕೆಲಸ. ಅರಳಿಮರ ಶುದ್ಧ ಆಮ್ಲಜನಕ ನೀಡುವ ಮತ್ತು ಮನಃಶಾಂತಿ ನೀಡುವ ದೈವ ವೃಕ್ಷವಾಗಿದೆ. ಅರಳಿ ಮರದ ಕೆಳಗೆ ಕುಳಿತು ಹಿರಿಯರು ಪಂಚಾಯ್ತಿ ಕಟ್ಟೆಯನ್ನಾಗಿ ಮಾಡಿಕೊಂಡಿದ್ದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದರು.
ಇದೇ ವೇಳೆ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಈ ವೇಳೆ ಗ್ರಾಪಂ ಅಧ್ಯಕ್ಷ ಗಿರೀಶ್ (ಜೆಸಿಪಿ), ಉಪಾಧ್ಯಕ್ಷ ಕೃಷ್ಣಶೆಟ್ಟಿ, ನಿದೇರ್ಶಕರಾದ ಡಿ.ವಿ.ಶಿವಣ್ಣ, ಡಿ.ಇ.ಕಲಿಗಣೇಶ್, ಡಿ.ಎಸ್.ಮಹೇಶ್, ಶಿವಲಿಂಗೇಗೌಡ, ಡಿ.ಎಂ.ಪುಟ್ಟೆಗೌಡ, ಡಿ.ಎಂ.ಇಂದ್ರೇಶ್, ಶ್ರೀನಿವಾಸ್‌ಯ್ಯ, ಪ್ರೇಮಮ್ಮ, ರಮದೇವಿ, ಡೈರಿ ಕಾರ್ಯದರ್ಶಿ ಡಿ.ಎಂ.ಶಿವಪ್ಪ, ಡೈರಿ ಸಿಬ್ಬಂದಿ ಡಿ.ಜಿ.ಕೇಶವಚಾರಿ, ಡಿ.ಎಸ್.ಈರಪ್ಪಾಜಿ, ಶೇಖರಪ್ಪ, ಮಾದಯ್ಯ, ಗ್ರಾ.ಪಂ. ಅಧ್ಯಕ್ಷ ನಂಜೇಗೌಡ, ಸೇರಿದಂತೆ ಗ್ರಾಮದ ಹಿರಿಯ ಮುಂಖಡರು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ ರಕ್ತನಿಧಿ ಕೇಂದ್ರ, ಡಿಆರ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ವರ್ಧಮಾನ್ ಜೈನ್ ನೇತ್ರಾಲಯ, ದಂತಲೋಕ ಸೂಪರ್ ಸ್ಪೆಷಾಲಿಟಿ ಡೆಂಟಲ್ ಆಸ್ಪತ್ರೆ ಹಾಗೂ ಖಾಸಗಿ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೆಲದನಿ ಬಳಗ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 28 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ, ಬಿ.ಪಿ,ಷುಗರ್ ರಕ್ತ ಪರೀಕ್ಷೆ, ರಕ್ತದ ಗ್ರೂಪಿಂಗ್ ಹಾಗೂ ದಂತ ತಪಾಸಣೆ ಕಣ್ಣಿನ ತಪಾಸಣೆ, ಮಹಿಳೆಯರಿಗೆ ಸ್ತ್ರೀರೋಗ ತಜ್ಞ ಮಹಿಳಾ ವೈದ್ಯರಿಂದ ಕ್ಯಾನ್ಸರ್ ತಪಾಸಣೆ ಮಾಡಿಸಲಾಯಿತು.