ಅರಸೀಕೆರೆ ಗಂಡಸಿ ಶಾಲೆಯಲ್ಲಿ ಗುರುವಂದನೆ, ಸ್ನೇಹ ಸಂಭ್ರಮ

KannadaprabhaNewsNetwork |  
Published : Mar 19, 2024, 12:51 AM IST
ಶ್ರೀ ಶಂಭುಲಿಂಗೇಶ್ವರ ವಿದ್ಯಾ ಸಂಸ್ಥೆ, ಗಂಡಸಿ ಪ್ರೌಢ ಶಾಲೆಯಲ್ಲಿ ಓದಿದಂತಹ 2000-2001 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಅರಸೀಕೆರೆ ಹಳ್ಳಿಮನೆ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಶ್ರೀ ಶಂಭುಲಿಂಗೇಶ್ವರ ವಿದ್ಯಾ ಸಂಸ್ಥೆ, ಗಂಡಸಿ ಪ್ರೌಢ ಶಾಲೆಯ 2000-2001 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಅರಸೀಕೆರೆ ಹಳ್ಳಿಮನೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಗಂಡಸಿ ಪ್ರೌಢ ಶಾಲೆಯ 2000-2001ನೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅರಸೀಕೆರೆ

ಶ್ರೀ ಶಂಭುಲಿಂಗೇಶ್ವರ ವಿದ್ಯಾ ಸಂಸ್ಥೆ, ಗಂಡಸಿ ಪ್ರೌಢ ಶಾಲೆಯ 2000-2001 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಅರಸೀಕೆರೆ ಹಳ್ಳಿಮನೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸುದೀರ್ಘ 24 ವರ್ಷಗಳ ಶಾಲೆಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸುಮಾರು 25000 ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದಂತಹ ಗುರುಗಳಿಗೆ ಸನ್ಮಾನಿಸಲಾಯಿತು. ಗುರುಗಳಾದ ಎಚ್.ಎನ್ ಗುಂಡುರಾವ್, ಜೆ.ಎಚ್. ಕೃಷ್ಣೇಗೌಡ, ವೈ.ಟಿ. ಬೆಟ್ಟಾಚಾರ್, ಡಿ.ಎನ್.ಜಡೇಗೌಡ, ಎಚ್.ವಿ.ಗೀತಾಬಾಲಿ, ಎಮ್.ಎನ್‌.ಜಯರಾಮ್, ಟಿ.ಎನ್.ದೇವರಾಜ್, ಜಿ.ಎನ್‌.ಮಮತಾ, ದಿವಂಗತ ಸದಾಶಿವಯ್ಯನವರ ಧರ್ಮಪತ್ನಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಗುರುಗಳಿಗೆ ಗೌರವ ವಂದನೆ ಸಲ್ಲಿಸುವ ಕಾರ್ಯದಿಂದ ಶಿಷ್ಯರು ಗುರುಗಳ ಮೇಲೆ ಇಟ್ಟಿರುವ ಭಕ್ತಿ ಭಾವವನ್ನು ತೋರಿಸುತ್ತದೆ. 24 ವರ್ಷಗಳ ನಂತರ ಎಸ್.ಎಸ್.ಎಲ್.ಸಿ ಸ್ನೇಹಿತರೆಲ್ಲರೂ ಸೇರಿ ಹಮ್ಮಿಕೊಂಡಿರುವ ಔಚಿತ್ಯಪೂರ್ಣ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನಿತ ಗುರುಗಳಾದ ಎಚ್.ಎನ್.ಗುಂಡುರಾವ್ ಮಾತನಾಡಿ, ದೇಶ ನನಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸದೆ, ದೇಶಕ್ಕಾಗಿ ನನ್ನ ಕೊಡುಗೆ ಏನಿದೆ ಎಂದು ಪ್ರತಿಯೊಬ್ಬ ನಾಗರಿಕನು ಆರ್ಥಮಾಡಿಕೊಳ್ಳಬೇಕು, ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವಂತಹ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ನಾವು ಬಲಿಷ್ಠ ದೇಶವನ್ನು, ಉತ್ತಮ ಸಮಾಜವನ್ನು ಕಟ್ಟಲು ಸಾದ್ಯ ಎಂದರು.

24 ವರ್ಷಗಳ ನಂತರ ಸೇರಿರುವ ಹಳೆಯ ವಿದ್ಯಾರ್ಥಿಗಳೆಲ್ಲರೂ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಆರ್ಥಪೂರ್ಣವಾಗಿ ಆಚರಿಸಿದರು. ಕಸ್ತೂರಬಾ ಆಶ್ರಮಕ್ಕೆ ವೈಟ್ ಬೋರ್ಡನ್ನು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮವನ್ನು ಪ್ರಭಾಕರ್ ಜಿ.ಎನ್. ನಿರೂಪಿಸಿದರು.ಶ್ರೀ ಶಂಭುಲಿಂಗೇಶ್ವರ ವಿದ್ಯಾ ಸಂಸ್ಥೆ, ಗಂಡಸಿ ಪ್ರೌಢ ಶಾಲೆಯಲ್ಲಿ ಓದಿದಂತಹ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮವನ್ನು ಅರಸೀಕೆರೆ ಹಳ್ಳಿಮನೆ ಸಭಾಂಗಣದಲ್ಲಿ ಆಯೋಜಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ