ರೈತರಿಗೆ ಸಹಕಾರಿಯಾಗಿರುವ ಅರವಟಗಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ

KannadaprabhaNewsNetwork |  
Published : Sep 28, 2026, 02:00 AM IST
ಕಚೇರಿ ಫೋಟೋ | Kannada Prabha

ಸಾರಾಂಶ

ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘವು ೨೦೧೧ರಲ್ಲಿ ಎಫ್,ಟಿ.ಓ ದೊಂದಿಗೆ ಸಹಯೋಗವನ್ನು ಹೊಂದಿದ್ದು

ಅಳ್ನಾವರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಈ ಭಾಗದ ರೈತರ ಪ್ರಗತಿಗಾಗಿ ತನ್ನದೆಯಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ ಇಲ್ಲಿನ ಡೋರಿ ಗ್ರಾಮದಲ್ಲಿರುವ ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘ.ಈ ಸಂಘವು ೧೯೪೭ರಲ್ಲಿ ಕೇವಲ ೫೦ ಸದಸ್ಯರೊಂದಿಗೆ ರು.೫೦೦ ಶೇರು ಸಂಗ್ರದ ಮೂಲಕ ಪ್ರಾರಂಭವಾದ ಸಂಘವು ಇಂದು ೧೬೪೯ ಸದಸ್ಯರನ್ನೊಳಗೊಂಡ ರು.೮೫.೮೨.೨೭೦ ಶೇರು ಬಂಡವಾಳಗಳ ಮೂಲಕ ಹೆಮ್ಮರವಾಗಿ ಬೆಳೆದು ನಿಂತಿದೆ. ಬೆಣಚಿ, ಬಾಲಗೇರಿ, ಹಿಂಡಸಗೇರಿ, ಡೋರಿ, ಅಂಬೋಳ್ಳಿ, ಅರವಟಗಿ, ಕಂಬಾರಗಣವಿ, ಕುಂಬಾರಕೊಪ್ಪ, ಕೋಗಿಲಗೇರಿ ಗ್ರಾಮದ ರೈತ ಸದಸ್ಯರನ್ನೊಳಗೊಂಡ ಈ ಸಂಘವು ಸದಾ ಮಣ್ಣಿನ ಮಗನ ಸೇವೆಗಾಗಿ ಕಂಕಣ ತೊಟ್ಟು ನಿಂತಿದ್ದು ಬೀಜ, ರಸಗೊಬ್ಬರ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೊಜನೆ ಮಾಡುವ ಮೂಲಕ ಸದಸ್ಯ ರೈತರ ಕೃಷಿಯನ್ನು ಇನ್ನಷ್ಟು ಆಧುನಿಕಗೊಳಿಸುತ್ತದೆ. ಅಷ್ಟೇ ಅಲ್ಲದೆ ೬೩೨ ಜನರಿಗೆ ಐದು ಕೋಟಿಗೂ ಅಧಿಕ ಬೆಳೆಸಾಲ, ೨೮ ಜನರಿಗೆ ರು.೮೨ ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್‌ ಸಾಲ, ೯ ಜನರಿಗೆ ರು.೨೧ ಲಕ್ಷಕ್ಕೂ ಅಧಿಕ ಕುರಿ ಸಾಕಾಣಿಕೆ ಸಾಲಗಳ್ನು ಕೊಡುವ ಮೂಲಕ ರೈತರ ಬದುಕನ್ನು ನಾವಿನ್ಯತೆಯ ಕಡೆಗೆ ಕೊಂಡೊಯ್ಯುತ್ತಿದೆ ಮತ್ತು ಇಲ್ಲಿಂದ ಸಾಲ ಪಡೆದು ಅಭಿವೃದ್ದಿ ಹೊಂದುತ್ತಿರುವ ರೈತರು ಸಹ ಸಮಯಕ್ಕೆ ಸರಿಯಾಗಿ ಸಾಲವನ್ನು ಹಿಂತಿರುಗಿಸಿ ಸಹಕಾರಿಯ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘವು ೨೦೧೧ರಲ್ಲಿ ಎಫ್,ಟಿ.ಓ ದೊಂದಿಗೆ ಸಹಯೋಗವನ್ನು ಹೊಂದಿದ್ದು ಅದರಿಂದ ಬರುವ ಹಣದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾವಯುವ ಕೃಷಿಯಲ್ಲಿ ರೈತರ ಒಲವು ಮೂಡಿಸಲು ಮತ್ತು ಕೃಷಿಯಲ್ಲಿ ಹೊಸ ಬಗೆಯ ಬೆಳೆಗಳನ್ನು ಬೆಳೆಗಳನ್ನು ಬೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಷ್ಟೆಯಲ್ಲದೆ ರೈತರ ಉಪಯೋಗಕ್ಕಾಗಿ ಅರವಟಗಿ ಕುಂಬಾರಕೋಪ್ಪ ಮತ್ತು ಡೋರಿ ಗ್ರಾಮದಲ್ಲಿ ಗೋದಾಮುಗಳು ಇವೆ.

ಈ ಸಹಕಾರಿ ಸಂಘವು ಕೇವಲ ತನ್ನ ಸದಸ್ಯರಿಗಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಈ ಭಾಗದಲ್ಲಿ ಕಬ್ಬಿನ ಬೆಳೆ ಅಧಿಕವಾಗಿದ್ದು ಅವುಗಳ ಕಟಾವಿಗೆ ಬರುವ ವಲಸೆ ಕಾರ್ಮಿಕರಿಗೆ ಮೂಲಭೂತ ವಸ್ತುಗಳ ವಿತರಣೆ, ಮತ್ತು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸೋಲಾರ ಲೈಟ್‌ಗಳ ಅಳವಡಿಕೆ ಹಾಗೂ ಶಾಲಾ ಮಕ್ಕಳಿಗೆ ಪ್ರತಿವರ್ಷ ನೋಟ್‌ಬುಕ್ ಸೇರಿದಂತೆ ಶೈಕ್ಷಣಿಕ ಸಲಕರಣೆಗಳು,

ಸಾರ್ವಜನಿಕ ಸ್ಥಳಗಳು, ದೇವಸ್ಥಾನಗಳಿಗೆ ಸೋಲಾರ ಲೈಟ್‌ಗಳ ವಿತರಣೆ ಮಾಡಲಾಗಿದೆ ಹಾಗೂ ಕೋರೋನಾ ಸಂಧರ್ಭದಲ್ಲಿ ಸಹಕಾರಿ ಸದಸ್ಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಲ್ತ್‌ ಕಿಟ್‌ಗಳನ್ನು ನೀಡಲಾಗಿದ್ದು ಸಾಮಾಜಿಕವಾಗಿ ಉತ್ತಮವಾದ ಕಾರ್ಯ ಮಾಡಲಾಗಿದೆ ಅದರ ಜೊತೆಗೆ ಉಚಿತವಾಗಿ ಒಂದು ಸಾವಿರ ರೈತರಿಗೆ ಜೀವಾಮೃತ ತಯಾರಿಸಲು ವ್ಯಾಟಲ್‌ಗಳನ್ನು ನೀಡುವ ಮೂಲಕ ಸಾವಯುವ ಕೃಷಿಯಲ್ಲಿ ರೈತರನ್ನು ತೊಡಗಿಸಲಾಗುತ್ತಿದೆ. ಈ ಭಾಗದ ರೈತರು ಸಹ ಸಹಕಾರಿಯನ್ನು ಉತ್ತಮವಾಗಿ ಬೆಳೆಸಲು ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಾಹಕ ವಿಜಯ ಧಾರವಾಡ.ಇದೀಗ ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಿವಾನಂದ ಹಿರೇಮಠ, ಉಪಾಧ್ಯಕ್ಷರಾಗಿ ಸುರೇಶ ಕೋಲಕಾರ, ನಿರ್ದೇಶಕರಾಗಿ ಚನ್ನಬಸಯ್ಯ ಹಿರೇಮಠ, ವಾಸುದೇವ ಕಲ್ಲಾಪೂರ, ಗಂಗಯ್ಯ ಚಿಕ್ಕಮಠ, ಗಂಗಾಧರ ಬುಡರಕಟ್ಟಿ, ಅಶೋಕ ಜೋಡಟ್ಟಿಯವರ, ಸಯ್ಯದ ತೇಗೂರ, ಮಂಜುನಾಥ ಪಾಟೀಲ, ರೇಣುಕಾ ಬೋಕನೆಕರ, ಸರಸ್ವತಿ ದಾಸ್ತಿಕೊಪ್ಪ, ರತ್ನವ್ವಾ ಹರಿಜನ, ಬಸಪ್ಪ ಹೊಸಮನಿ ಇದ್ದಾರೆ. ನಮ್ಮ ಸಹಕಾರಿ ಸಂಘದಿಂದ ಈ ಭಾಗದ ಸದಸ್ಯ ರೈತರಿಗೆ ಅನುಕೂಲವಾಗುವಂತೆ ಸಹಾಯ ಸಹಕಾರ ನೀಡಲಾಗುತ್ತಿದೆ ಅದೇ ರೀತಿ ನಮ್ಮ ರೈತಬಾಂದವರು ಸಹ ಸಂಘದ ಏಳಿಗೆಗೆ ಶ್ರಮಿಸುತ್ತಾರೆ ಇದೀಗ ಸಹಕಾರಿ ಸಂಘವು ಪ್ರತಿವರ್ಷ ಲಾಭದತ್ತ ಸಾಗುತ್ತಿದೆ ಎಂದು ಡೋರಿ ಅರವಟಗಿ ವಿವಿದೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಹಿರೇಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರಿಗೆ ನೆಲೆಗಟ್ಟು ಕಲ್ಪಿಸಿದ ಶರಣರ ಕಾಯಕ ತತ್ವ
ಕಲ್ಯಾಣ ಕರ್ನಾಟಕ ಪ್ರತಿಭಾವಂತ ಕಲಾದವಿದರು