ಬಿಸಿಲಿನ ದಾಹ ನೀಗಿಸಲು ನೆರವಾಗಲಿರುವ ಅರವಟ್ಟಿಗೆ ಕೇಂದ್ರ

KannadaprabhaNewsNetwork | Published : Mar 16, 2025 1:47 AM

ಸಾರಾಂಶ

ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ಅಂಗಾಂಗಗಳ ದಾನ ಸೇರಿದಂತೆ ಇನ್ನಿತರ ದಾನಗಳಂತೆ ಜೀವಜಲವೂ ಕೂಡ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ಉಚಿತ ತಂಪು ನೀರಿನ ಅರವಟ್ಟಿಗೆ ಅಥಣಿ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಸಿಲಿನ ದಾಹ ನೀಗಿಸಲು ನೆರವಾಗಲಿದೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ಅಂಗಾಂಗಗಳ ದಾನ ಸೇರಿದಂತೆ ಇನ್ನಿತರ ದಾನಗಳಂತೆ ಜೀವಜಲವೂ ಕೂಡ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ಉಚಿತ ತಂಪು ನೀರಿನ ಅರವಟ್ಟಿಗೆ ಅಥಣಿ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಸಿಲಿನ ದಾಹ ನೀಗಿಸಲು ನೆರವಾಗಲಿದೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಹೇಳಿದರು.

ಪಟ್ಟಣದ ಶಿವಯೋಗಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ), ಅಥಣಿ ತಾಲೂಕು ಘಟಕದ ವತಿಯಿಂದ ಆರಂಭಿಸಲಾದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮಧ್ಯಾಹ್ನದ ಬಿಸಿಲಲ್ಲಿ ನಾಲ್ಕೈದು ಹೆಜ್ಜೆ ನಡೆಯುವಷ್ಟರಲ್ಲಿ ಜನ ದಾಹದಿಂದ ಬಸವಳಿಯುತ್ತಿದ್ದಾರೆ. ಕರವೇ ಘಟಕದಿಂದ ಆರಂಭಿಸಲಾದ ಈ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಕೇಂದ್ರದಿಂದ ಅಥಣಿ ಪಟ್ಟಣಕ್ಕೆ ದಿನನಿತ್ಯ ಬರುವ ಗ್ರಾಮೀಣ ಪ್ರದೇಶದ ಜನರಿಗೆ, ಪರೀಕ್ಷಾ ಸಂದರ್ಭದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಸಿಲಿನ ದಾಹವನ್ನು ನಿಗಿಸಲು ನೆರವಾಗುತ್ತದೆ ಎಂದು ತಿಳಿಸಿದರು.ಚಿಕ್ಕೋಡಿ ವಿಭಾಗೀಯ ಕರವೇ ಅಧ್ಯಕ್ಷ , ನ್ಯಾಯವಾದಿ ವಿನಯ ಪಾಟೀಲ ಮಾತನಾಡಿ, ಜೀವ ಜಲ ಅಮೂಲ್ಯವಾದದ್ದು, ಪ್ರತಿಯೊಂದು ಪ್ರಾಣಿ-ಪಕ್ಷಿಗಳ ಬದುಕಿಗೆ ಆಧಾರವಾಗಿರುವ ಜೀವ ಜಲವನ್ನು ನಾವು ಹಿತಮಿತವಾಗಿ ಬಳಸಬೇಕು. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಅಥಣಿ ಕಾರ್ಯಕರ್ತರು ಅರವಟ್ಟಿಗೆ ಕೇಂದ್ರವನ್ನು ಆರಂಭಿಸುವ ಮೂಲಕ ಉತ್ತಮವಾದ ಕಾರ್ಯ ಮಾಡಿದ್ದಾರೆ. ಕುಡಿಯುವ ನೀರು ಕೂಡ ಮಾರಾಟವಾಗುತ್ತಿರುವ ಇಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರು ಅನೇಕ ಕನ್ನಡ ಸೇವೆಯೊಂದಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಸೇವೆ ಮಾಡುತ್ತಿರುವುದು ಕಾರ್ಯ ಶ್ಲಾಘನೀಯ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ಅಧ್ಯಕ್ಷ ಉದಯ ಮಾಕಾಣಿ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಎಲ್ಲಾ ಕಾರ್ಯಕರ್ತರು ಕಳೆದ 20 ವರ್ಷಗಳಿಂದ ಅನೇಕ ಜನಪರ ಹೋರಾಟ ಮತ್ತು ಕಾರ್ಯಕ್ರಮಗಳನ್ನು, ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದೆ. ಪಟ್ಟಣದ ಶಿವಯೋಗಿ ವೃತ್ತದಲ್ಲಿ ನಮ್ಮ ಘಟಕದಿಂದ ಉಚಿತವಾಗಿ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಕೇಂದ್ರ ಬಿಸಿಲಿನ ತಾಪದಿಂದ ತತ್ತರಿಸಿದ ಜನರಿಗೆ ಸಹಕಾರಿಯಾಗಲಿದೆ. ವಿವಿಧ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಪಟ್ಟಣದ ಇನ್ನಿತರ ಸ್ಥಳಗಳಲ್ಲಿ ಇಂತಹ ಅರವಟ್ಟಿಗೆ ಸೇವೆಗಳನ್ನು ಆರಂಭಿಸಿ ಜನರ ದಾಹ ನೀಗಿಸುವಲ್ಲಿ ನೆರವಾಗಬೇಕೆನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದರು. ಈ ಸಂದರ್ಭದಲ್ಲಿ ಅಥಣಿ ಗ್ರಾಮೀಣ ಪಂಚಾಯತಿ ಸದಸ್ಯ ಪರಶುರಾಮ ಸೊಂದಕರ, ಕರವೇ ಪದಾಧಿಕಾರಿಗಳಾದ ಸಿದ್ದು ಹಂಡಗಿ, ಜಗನ್ನಾಥ ಬಾಮನೆ, ಕುಮಾರ ಬಡಿಗೇರ, ಅನಿಲ ಭಜಂತ್ರಿ, ರಾಜು ತಂಗಡಿ, ಗಿರೀಶ್ ಬಾಮನೆ, ಶಂಕರ ಮಗದುಮ್ಮ, ಸಿದ್ದು ಮಾಳಿ, ರಾಜು ವಾಘಮಾರೆ, ಪರಶುರಾಮ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article