ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಅರ್ಚಕ ಕೃಷ್ಣಭಟ್ ಚಾಲನೆ

KannadaprabhaNewsNetwork |  
Published : May 01, 2025, 12:51 AM IST
28ಕೆಎಂಎನ್ ಡಿ21 | Kannada Prabha

ಸಾರಾಂಶ

ದೇಶೀಯ ಕ್ರೀಡೆಗಳಲ್ಲಿ ಒಂದಾದ ಕಬಡ್ಡಿ ಆಟ ಪ್ರತಿಯೊಬ್ಬರ ಮನಸಿನಲ್ಲಿ ಅಚ್ಚಳಿಯದೆ ಉಳಿದಿರುವ ಕ್ರೀಡೆ. ದೇಶ ವಿದೇಶದಲ್ಲೂ ಸಹ ಈ ಕ್ರೀಡೆಗೆ ಮಹತ್ವ ನೀಡಲಾಗಿದೆ. ಕಬಡ್ಡಿ ಕ್ರೀಡೆಗೆ ಸರ್ಕಾರ ಇನ್ನಷ್ಟು ಉತ್ತೇಜನ ನೀಡಿ ಸ್ಥಳೀಯ ಕ್ರೀಡಾಪಟುಗಳನ್ನು ಬೆಳೆಸಿ ಕ್ರೀಡೆಯನ್ನು ಉಳಿಸಬೇಕಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿಂದೂ ಜಾಗರಣ ವೇದಿಕೆ ಮಾರ್ಗದರ್ಶನದಲ್ಲಿ ಪಟ್ಟಣ ಯುವ ಸ್ಟಾರ್ ಹಾಗೂ ಹನುಮ ಮಾಲಾಧಾರಿಗಳು ಆಯೋಜಿಸಿದ್ದ 18 ವರ್ಷದೊಳಗಿನ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಲಕ್ಷ್ಮೀದೇವಿ ದೇವಾಲಯದ ಅರ್ಚಕ ಕೃಷ್ಣಭಟ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ದೇಶೀಯ ಕ್ರೀಡೆಗಳಲ್ಲಿ ಒಂದಾದ ಕಬಡ್ಡಿ ಆಟ ಪ್ರತಿಯೊಬ್ಬರ ಮನಸಿನಲ್ಲಿ ಅಚ್ಚಳಿಯದೆ ಉಳಿದಿರುವ ಕ್ರೀಡೆ. ದೇಶ ವಿದೇಶದಲ್ಲೂ ಸಹ ಈ ಕ್ರೀಡೆಗೆ ಮಹತ್ವ ನೀಡಲಾಗಿದೆ. ಕಬಡ್ಡಿ ಕ್ರೀಡೆಗೆ ಸರ್ಕಾರ ಇನ್ನಷ್ಟು ಉತ್ತೇಜನ ನೀಡಿ ಸ್ಥಳೀಯ ಕ್ರೀಡಾಪಟುಗಳನ್ನು ಬೆಳೆಸಿ ಕ್ರೀಡೆಯನ್ನು ಉಳಿಸಬೇಕಿದೆ ಎಂದರು.

ಪಂದ್ಯಾವಳಿಯಲ್ಲಿ ಕೊಪ್ಪಳ , ಬೆಂಗಳೂರು , ಮಂಡ್ಯ , ಮೈಸೂರು ಸೇರಿದಂತೆ ಇತರ ಜಿಲ್ಲೆಗಳಿಂದ ಸುಮಾರು 26 ತಂಡಗಳು ಆಗಮಿಸಿದ್ದು, ಪ್ರತಿ ತಂಡಕ್ಕೂ ಊಟ, ವಸತಿ ಜೊತೆ ಪಾರಿತೋಷಕಗಳನ್ನು ನೀಡಲಾಯಿತು.

ಮೊದಲನೇ ಬಹುಮಾನವನ್ನು ಕಡತನಾಳು ತಂಡ 6 ಸಾವಿರ ರು., ಪಾರಿತೋಷಕ, 2ನೇ ಬಹುಮಾನ ಸಾಗರ್ ಬಾಯ್ಸ್ ಬಾಬುರಾಯನಕೊಪ್ಪಲು, ಮೂರನೇ ಬಹುಮಾನ ಚುಂಚನ ಬಾಯ್ಸ್ ಗೌಡಹಳ್ಳಿ ಹಾಗೂ 4ನೇ ಬಹುಮಾನ ಶ್ರೀರಂಗಪಟ್ಟಣ ಯುವ ಸ್ಟಾರ್ಸ್ ಪಡೆದುಕೊಂಡವು.

ಇದೇ ವೇಳೆ ತಾಲೂಕಿನ ಅಂತಾರಾಷ್ಟ್ರೀಯ ಪ್ಯಾರಾ ಒಲಂಪಿಕ್ ಆಟಗಾರ ಶಾಂತಿ ಕೊಪ್ಪಲು ರಾಘವೇಂದ್ರ, ಪಟ್ಟಣದ ಚೀಟಿ ಪ್ರಭ ಅವರ ಮೊಮ್ಮಗ ಹೊಸಹಳ್ಳಿ ಶಶಾಂಕ್ ಅವರನ್ನು ಅಭಿನಂದಿಸಲಾಯಿತು‌.

ಈ ವೇಳೆ ಹಿಂದೂ ಜಾಗರಣ ವೇದಿಕೆ ಸಂಚಾಲಕ ಚಂದನ್, ಕರವೇ ಅಧಕ್ಷ ಶಂಕರ್ ಚಂದಗಾಲು, ಪೌರ ಕಾರ್ಮಿಕ ಶ್ರೀನಿವಾಸ್, ನಾಗರಾಜು, ವಿಶ್ವನಾಥ್, ಕೆಂಚಪ್ಪ, ಪಿಎಸ್‌ಐ ದಳವಾಯಿ, ವಕೀಲ ಬಾಲರಾಜು, ಶ್ಯಾಂ ಸುಂದರ್, ಚಿನ್ನೇನಹಳ್ಳಿ ಸತೀಶ್, ಚಂದ್ರು, ಶಿವು, ಅಭಿ, ಶರತ್ ಸೇರಿದಂತೆ ಇತರರು ಇದ್ದರು.

ಇಂದು ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣರ ಜಯಂತಿ

ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯ ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟ್ ಡಾ.ಶಾಂತಾ ಮರಿಯಪ್ಪ ಸಭಾಂಗಣದಲ್ಲಿ ಮೇ1ರಂದು ಸಂಜೆ 4 ಗಂಟೆಗೆ ನೂತನ ಸಭಾಂಗಣದ ಉದ್ಘಾಟನೆಯೊಂದಿಗೆ ಕೀರ್ತಿಶೇಷರಾದ ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜಯಂತಿ ಹಮ್ಮಿಕೊಳ್ಳಲಾಗಿದೆ. ಸಂಸದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದೀಯ ಪಟು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ನುಡಿ ನಮನವನ್ನು ಸಲ್ಲಿಸಲಿದ್ದಾರೆ. ಶಾಸಕ ಕೆ.ಎಂ.ಉದಯ್, ಪುರಸಭಾಧ್ಯಕ್ಷೆ ಕೋಕಿಲ ಆರುಣ್ ಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಚಂದು ಭಾಗವಹಿಸಲಿದ್ದಾರೆ. ನಿವೃತ್ತರಾದ ಜಿ.ಎಸ್.ಶಂಕರೇಗೌಡ ಅವರಿಗೆ ಸಂಸ್ಥೆ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಸಂಸ್ಥೆ ಕಾರ್ಯದರ್ಶಿ ಶ್ರೀ ಸಿ.ಅಪೂರ್ವಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ