ಸದ್ದು ಮಾಡುತ್ತಿರುವ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಪ್ರೈ. ಲಿ.

KannadaprabhaNewsNetwork |  
Published : Sep 19, 2025, 01:01 AM IST
ಧಾರವಾಡ ಕೃಷಿಮೇಳದಲ್ಲಿ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಪ್ರೈ. ಲಿ.ನ ಮಳಿಗೆ. | Kannada Prabha

ಸಾರಾಂಶ

ಆರ್ಕಿಯೋದ ಮಾತೃಸಂಸ್ಥೆ ಟ್ಯಾಗ್ರೋಜ್‌. ಈಗಾಗಲೇ ಈ ಕಂಪನಿಯು ಅಮೇರಿಕಾ, ಅರ್ಜೆಂಟಿನಾ, ಯುರೋಪ ಸೇರಿದಂತೆ 90ಕ್ಕೂ ಅಧಿಕ ದೇಶಗಳಲ್ಲಿ ಹಾಗೂ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ, ಉತ್ತರಾಖಂಡ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ 15ಕ್ಕೂ ಅಧಿಕ ರಾಜ್ಯಗಳಲ್ಲಿ ಟ್ಯಾಗ್ರೋಜ್‌ ತನ್ನ ಅಂಗಸಂಸ್ಥೆಯಾಗಿರುವ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಪ್ರೈ. ಲಿ. ಮೂಲಕ ಭಾರತೀಯ ರೈತರಿಗಾಗಿ ಅದೇ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಿದೆ.

ಹುಬ್ಬಳ್ಳಿ: ಕೀಟನಾಶಕ ನಿಯಂತ್ರಣ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ ಇಂದಿನ ದಿನಗಳಲ್ಲಿ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಪ್ರೈವೇಟ್‌ ಲಿಮಿಟೆಡ್‌ 91 ಉತ್ಪನ್ನಗಳನ್ನು ಕೊಡುಗೆಯಾಗಿ ನೀಡಿದ್ದು, ದೇಶಾದ್ಯಂತ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆರ್ಕಿಯೋದ ಮಾತೃಸಂಸ್ಥೆ ಟ್ಯಾಗ್ರೋಜ್‌. ಈಗಾಗಲೇ ಈ ಕಂಪನಿಯು ಅಮೇರಿಕಾ, ಅರ್ಜೆಂಟಿನಾ, ಯುರೋಪ ಸೇರಿದಂತೆ 90ಕ್ಕೂ ಅಧಿಕ ದೇಶಗಳಲ್ಲಿ ಹಾಗೂ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ, ಉತ್ತರಾಖಂಡ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ 15ಕ್ಕೂ ಅಧಿಕ ರಾಜ್ಯಗಳಲ್ಲಿ ಟ್ಯಾಗ್ರೋಜ್‌ ತನ್ನ ಅಂಗಸಂಸ್ಥೆಯಾಗಿರುವ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಪ್ರೈ. ಲಿ. ಮೂಲಕ ಭಾರತೀಯ ರೈತರಿಗಾಗಿ ಅದೇ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಿದೆ.

ಕಡಲೆ, ತೊಗರಿ, ಕಬ್ಬು, ದ್ರಾಕ್ಷಿ, ಭತ್ತ, ಮೆಣಸಿನಕಾಯಿ, ಟೊಮ್ಯಾಟೋ, ದಾಳಿಂಬೆ, ಸೋಯಾಬಿನ್‌ ಹಾಗೂ ಕಾಯಿಪಲ್ಲೆ ಬೆಳೆಗಳಲ್ಲಿ ಬರುವ ಮುಖ್ಯವಾದ ಕೀಟ, ರೋಗ ಮತ್ತು ಕಳೆಗಳನ್ನು ನಿಯಂತ್ರಿಸುವುದಕ್ಕಾಗಿ ಸುಮಾರು 91 ಉತ್ಪನ್ನಗಳನ್ನು ಬಿಡುಗಡೆಗೊ‍ಳಿಸಿದೆ.

ಹಲವು ಉತ್ಪನ್ನಗಳ ಪರಿಚಯ: ಮುಖ್ಯವಾಗಿ ವಿವಿಧ ಬೆಳೆಗಳಲ್ಲಿ ಕೀಡಿ(ಕಾಯಿಕೊರಕ) ಅಥವಾ ಹಸಿರುಹುಳ ನಿಯಂತ್ರಣ ಮಾಡಲು ಇಂಪೀಡ್, ರ್ಯಾಲಿಪ್ರೋ, ಇನ್‌ಫೀಡ್‌ ಸೂಪರ್‌, ರ್ಯಾಲಿಪ್ರೋ ಎಕ್ಸಟ್ರಾ, ಕೆನಲಿಸ್‌ ಸೇರಿದಂತೆ ಅನೇಕ ಉತ್ಪನ್ನಗ‍ಳನ್ನು ಪರಿಚಯಿಸಿದೆ. ರಸಹೀರುವ ಹುಳು(ಟ್ರಿಪ್ಸ್, ಹಸಿರುಜಿಗಿ, ಕರಿಹೇನು, ಬಿಳಿನೊಣ) ನಿಯಂತ್ರಣಕ್ಕಾಗಿ ಕಾವಲ್‌ ತೈಯರಾ, ತೈಯರಾ ಸೂಪರ್, ಬಂಡಿತ್, ಬಂಡಿತ್‌ ಆ್ಯಂಡ್ ಎಸಿಪಲ್‌. ನುಸಿ(ಮೈಟ್ಸ್) ನಿಯಂತ್ರಣಕ್ಕಾಗಿ ಸ್ಪೈರೋಮ್ಯಾಟ್, ಅಭಾಮೆಕ್ಸ್‌. ಅದೇ ರೀತಿ ದ್ರಾಕ್ಷಿ, ಟ್ಯಾಮೆಟೋ, ಮೆಣಸಿನಕಾಯಿ, ದಾಳಿಂಬೆ ಮತ್ತು ತರಕಾರಿ ಬೆಳೆಗಳಲ್ಲಿ ವಿವಿಧ ರೋಗ ನಾಶಕ ಡೈನಿಮಿಲ್ಡೀವ್‌ಗೆ ಪ್ರೊಟೆಕ್ಟ್ರಾ, ಸೆಲ್ಟಿವಾ ಮತ್ತು ತಡವಾಗಿ ಬರುವ ಅಂಗಮಾರಿ(ಅಂತ್ಯದ ಅಂಗಮಾರಿ) ರೋಗಗಳನ್ನು ಪ್ರೊಟೆಕ್ಟ್ರಾ, ಸೆಲ್ಟಿವಾ, ಆರ್ಮಿಲ್‌. ಎಲೆಚುಕ್ಕೆ, ಬೂದಿರೋಗ ನಿಯಂತ್ರಣಕ್ಕೆ ಅಮಿಕೋರ್, ಪ್ರೊವಿಟಾ, ಸೆಂಟ್ರಿ, ಕ್ರೆಟರ್ ಉತ್ಪನ್ನಗಳನ್ನು ಪರಿಚಯಿಸಿದೆ.

ಇಲ್ಲಿಗೆ ಸಂಪರ್ಕಿಸಿ: ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ರೈತರು ಸಚಿನ್‌ ಬಿ.ಕೆ.- (ಮೊ: 9513771143), ವಿಜಯಪುರ, ಬಾಗಲಕೋಟ ಜಿಲ್ಲೆಯ ರೈತರು ವಿಜಯಕುಮಾರ (ಮೊ: 8925998399) ಹಾಗೂ ಬೆಳಗಾವಿ ಜಿಲ್ಲೆಯ ರೈತರು ಸಿದ್ದಪ್ಪ ಅಂಗಡಿ(ಮೊ: 8971740117) ಇವರನ್ನು ಸಂಪರ್ಕಿಸಿ.

ಚನ್ನೈನಲ್ಲಿ ಮುಖ್ಯ ಕಚೇರಿ ಹೊಂದಿದ ಭಾರತೀಯ ಬಹುರಾಷ್ಟ್ರೀಯ ಕಂಪನಿ ಟ್ಯಾಗ್ರೋಸ್‌ ಕಳೆದ 34 ವರ್ಷಗಳಿಂದ ಜಗತ್ತಿನ 90ಕ್ಕೂ ಅಧಿಕ ದೇಶಗಳಲ್ಲಿ ಉತ್ಪನ್ನಗಳನ್ನು ವ್ಯಾಪಾರ ಮಾಡುತ್ತಿದೆ. ಈ ವರ್ಷ ಭಾರತೀಯ ರೈತರಿಗೆ ಆರ್ಕಿವೋ ಕ್ರಾಪ್‌ ಸೊಲ್ಯೂಶನ್‌ ಅಂಗಸಂಸ್ಥೆಯ ಮೂಲಕ ಭಾರತದಲ್ಲಿ 91 ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸ್ಥೆಯ ಭಾರತದ ಸೇಲ್ಸ್‌ ಮತ್ತು ಮಾರ್ಕೇಟಿಂಗ್‌ನ ಉಪಾಧ್ಯಕ್ಷ ಮಲಕಾಜಪ್ಪ ಸಾರವಾಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ