ಅರೆಕಾಡು ಐದ್ರೋಡಮ್ಮ ದೀಪಾವಳಿ ಉತ್ಸವ ಸಂಪನ್ನ

KannadaprabhaNewsNetwork |  
Published : Oct 27, 2025, 12:30 AM IST
ಸಂಪನ್ನ | Kannada Prabha

ಸಾರಾಂಶ

17ನೇ ವರ್ಷದ ದೀಪಾವಳಿ ಹಬ್ಬದ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅರೆಕಾಡು ಬಳಂಜಿಗೆರೆಯ ಐದ್ರೋಡಮ್ಮ (ಚಾಮುಂಡೇಶ್ವರಿ) ದೇವಾಲಯದ 17ನೇ ವರ್ಷದ ದೀಪಾವಳಿ ಹಬ್ಬದ ವಾರ್ಷಿಕೋತ್ಸವ ಅ. 20 21 ರ ಸೋಮವಾರ ಮತ್ತು ಮಂಗಳವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಸೋಮವಾರ ಸಂಜೆ 5 ಗಂಟೆಗೆ ಪೂಜಾ ಕಾರ್ಯಗಳು ಪ್ರಾರಂಭಗೊಂಡು, 7 ಗಂಟೆಗೆ ಮಹಾಪೂಜೆ ಪ್ರಸದಾ ವಿತರಣೆ ನಡೆಯಿತು. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಿಸಲಾಯಿತು.

ಸಿದ್ದಾಪುರ ನೆಲ್ಯಹುದಿಕೇರಿ ಅರೆಕಾಡು ಮರಗೋಡು ಒಂಟಿಯಂಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತಾವು ಹರಕೆಯೊತ್ತ ಕಾಣಿಕೆಗಳನ್ನು ನೀಡಿ ದೇವರ ದರ್ಶನ ಪಡೆದರು.ಈ ಸಂದರ್ಭ ಮಾತನಾಡಿದ ದೇವಾಲಯದ ಪೂಜಾರಿ ರಾಜನ್ 17 ವರ್ಷಗಳ ಹಿಂದೆ ಸಣ್ಣದಾಗಿ ನಡೆಯುತ್ತಿದ್ದ ದೇವಿಯ ಉತ್ಸವಕ್ಕೆ ಇಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಈ ವರ್ಷ ಸುಮಾರು 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿಗೆ ಆಗಮಿಸಿ ದೇವಿಯಲ್ಲಿ ಪ್ರಾರ್ಥಿಸಿದರೆ ಭಕ್ತರ ಇಚ್ಛೆಗಳು ಈಡೇರುತ್ತವೆ ಎಂದರು. ಆಡಳಿತ ಮಂಡಳಿ ವತಿಯಿಂದ ಉತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ದೇವರ ಪ್ರಸಾದ ಮತ್ತು ಆಡು ಮತ್ತು ಕೋಳಿ ಮಾಂಸ ಖಾದ್ಯದ ಅನ್ನ ಸಂತರ್ಪಣೆ ವಿತರಿಸಲಾಯಿತು.ಈ ಸಂದರ್ಭ ದೇವಾಲಯದ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಜಯಣ್ಣ, ಕಚ್ಚಣ್ಣ, ಅಪ್ರು ರವೀಂದ್ರ ವಿನು , ವೆಂಕಟೇಶ್ ದೇವಾಲಯದ ಅರ್ಚಕ ರಾಕೇಶ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು