ಸ್ನೇಹಿತರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ

KannadaprabhaNewsNetwork |  
Published : Sep 15, 2024, 01:48 AM IST
ಫೋಟೋ 14ಪಿವಿಡಿ3ಪಾವಗಡ,ಕ್ಲುಲಕ ಕಾರಣಕ್ಕಾಗಿ ಎರಡು ಗುಂಪುಗಳ ಮದ್ಯೆ ಗಲಾಟೆ,ಚಾಕುವಿನಿಂದ ಕತ್ತುಕೊಯ್ದ ಪರಿಣಾಮ ಬಾರ್ಗವ್‌ ಸ್ಥಿತಿ ಗಂಭೀರ ಜಿಲ್ಲಾಸ್ಪತ್ರೆಗೆ ದಾಖಲು,ಮೂರು ಮಂದಿ ಆರೋಪಿಗಳನ್ನು ಮಧುಗಿರಿ ಜೈಲಿಗೆ ಶಿಪ್ಟ್‌   | Kannada Prabha

ಸಾರಾಂಶ

ಸ್ನೇಹಿತರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ

ಕನ್ನಡಪ್ರಭ ವಾರ್ತೆ ಪಾವಗಡ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದು ಓರ್ವನಿಗೆ ಚಾಕುವಿನಿಂದ ಇರಿದ ಘಟನೆ ಪಟ್ಟಣದಪಟ್ಟಣದ ಆದರ್ಶ ನಗರದ ಮರಿಗಮ್ಮ ದೇವಿ ದೇವಸ್ಥಾನದ ಸಮೀಪದಲ್ಲಿ ಜರುಗಿದೆ. ಗಾಯಗೊಂಡವರನ್ನು ಭಾರ್ಗವ್‌ ಎಂದು ಗುರುತಿಸಲಾಗಿದೆ.

ಸ್ನೇಹಿತರಾದ ಭಾರ್ಗವ್‌, ನರಸಿಂಹ, ಹರಿಕುಮಾರ್ ಹಾಗೂ ನರಸಿಂಹಮೂರ್ತಿ ನಡುವೆ ಯಾವುದೋ ವಿಷಯಕ್ಕೆ ಮಾತಿನ ಚಕಮಕಿ ನಡೆದಿದೆ. ಆಗ ನರಸಿಂಹ, ಹರಿಕುಮಾರ್‌ ಮತ್ತು ನರಸಿಂಹಮೂರ್ತಿ ಸೇರಿ ಭಾರ್ಗವ್‌ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಭಾರ್ಗವ್‌ ಸಹಾಯಕ್ಕೆ ಕೂಗಿಕೊಂಡ ಪರಿಣಾಮ ಸ್ಥಳೀಯರು ಜಗಳ ಬಿಡಿಸಿ ಗಾಯಗೊಂಡಿದ್ದ ಭಾರ್ಗವ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ