ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನಮ್ಮ ತಂದೆಯವರಾದ ಪಟೇಲ್ ಮಂಜುನಾಥ್ ಅವರ ಆಶಯದಂತೆ ಈ ದಿನ ನಮ್ಮ ಮನೆಯಲ್ಲಿ ಬಿಜೆಪಿ ಪಕ್ಷದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘವಾಗಿ ಚರ್ಚಿಸಿ, ನಮ್ಮ ತಂದೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟುವುದಾಗಿ ಘೋಷಣೆ ಮಾಡಿದರು. ನಮ್ಮ ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಮಹಿಳೆಯರಿಗೆ ಭಾರತ ದೇಶದ ಹ್ಯಾಟ್ರಿಕ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಯನ್ನು ತಿಳಿಸುವ ಜೊತೆಗೆ ಮಹಿಳೆಯರನ್ನು ಭಾರತೀಯ ಜನತಾ ಪಾರ್ಟಿಗೆ ಕರೆ ತರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ನಂಜುಂಡ ಮೈಮ್ ಮಾತನಾಡಿ ದಿವಂಗತ ಪಟೇಲ್ ಮಂಜುನಾಥ್ ಅವರು ಕಳೆದ ೩೫ ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು, ಇಂತಹ ನಿಷ್ಠಾವಂತ ನಾಯಕರ ಸುಪುತ್ರಿಯಾದ ಅರ್ಪಿತಾ ಪಟೇಲ್ ಅವರು ಭಾರತೀಯ ಜನತಾ ಪಾರ್ಟಿಯಲ್ಲಿ ಮಹಿಳಾ ಪದಾಧಿಕಾರಿಯಾಗಿ ನಿಯೋಜನೆಗೊಂಡು ಈ ಕ್ಷಣದಿಂದ ಮಹಿಳಾ ಘಟಕವನ್ನು ಸಕ್ರಿಯವಾಗಿ ಸಂಘಟಿಸಬೇಕೆಂದು ಸಲಹೆ ನೀಡಿದರು. ಮುಂಬರುವ ಚುನಾವಣೆಯ ಹಿತ ದೃಷ್ಟಿಯಿಂದ ಭೂತ್ ಮಟ್ಟದಿಂದ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸಬೇಕೆಂದು ಮನವಿ ಮಾಡಿದರು. ತಾಲೂಕು ಅಧ್ಯಕ್ಷ ಪರಮ ಗಂಗಾಧರ್ ಮಾತನಾಡಿ ನಮ್ಮ ಪಕ್ಷದ ಹಿರಿಯ ನಾಯಕರಾದ ಪಟೇಲ್ ಮಂಜುನಾಥ್ ಅವರ ಸುಪುತ್ರ ಅರ್ಪಿತಾ ಪಟೇಲ್ ರವರು ಈ ದಿನದಿಂದ ಭಾರತೀಯ ಜನತಾ ಪಕ್ಷದ ನಾಯಕಿಯಾಗಿ ನೇಮಕಗೊಂಡಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವನ್ನು ತಂದಿದೆ, ಇವರ ನೇತೃತ್ವದಲ್ಲಿ ಮಹಿಳಾ ಘಟಕವು ಸಕ್ರಿಯವಾಗಿ ಬಿಜೆಪಿ ಪಕ್ಷವನ್ನು ಬಲಪಡಿಸಲಿ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೋಕು ಅಧ್ಯಕ್ಷರಾದ ಪರಮ ಗಂಗಾಧರ್, ತಾಲೋಕು ಪ್ರಧಾನ ಕಾರ್ಯದರ್ಶಿಗಳಾದ ಗನ್ನಿ ವಿಶ್ವನಾಥ್, ತಾಲೋಕು ಉಪಾಧ್ಯಕ್ಷರಾದ ನಟರಾಜ್, ತಾಲೋಕು ಕಾರ್ಯದರ್ಶಿಯಾದ ಸಾತೇನಹಳ್ಳಿ ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿಯಾದ ತೂಬಿನಕೆರೆ ಗಿರೀಶ್, ಹಿರಿಯ ಬಿಜೆಪಿ ಮುಖಂಡರಾದ ವೆಂಕಟೇಶಚಾರ್, ಚೋಳೇನಹಳ್ಳಿ ಸಿ. ಜಿ. ಕುಮಾರ್, ಸುಂಡಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಬಿಜೆಪಿ ಯುವ ಮುಖಂಡರಾದ ಹೊಸಹಳ್ಳಿ ಸತೀಶ್ ಸೇರಿದಂತೆ ಇತರರು ಹಾಜರಿದ್ದರು.