ವಿದ್ಯಾರ್ಥಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿ

KannadaprabhaNewsNetwork |  
Published : Jul 05, 2024, 12:46 AM IST
ಸಸಸ | Kannada Prabha

ಸಾರಾಂಶ

ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆಯ ವರದಿ ನೀಡಿದ ಕ್ಷೇತ್ರ ಶೀಕ್ಷಣಾಧಿಕಾರಿ, ಸಿಬ್ಬಂದಿಗಳ ಕೊರತೆ ಇದೆ. ಅದನ್ನು ಪೂರೈಸಲು ಪ್ರಸ್ತಾವನೆ ಕಳುಹಿಸಿದ್ದೇನೆ. ಇನ್ನು ಕೆಲವು ಶಾಲೆಗಳಲ್ಲಿ ಶೌಚಾಲಯ, ತರಬೇತಿ ಕೋಣೆಯ ಅವಶ್ಯಕವಿವೆ. ಅದನ್ನು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವಣೆ ನೀಡುತ್ತೇನೆ. ಹಲವು ಕೊಠಡಿಯ ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ ಎಂದು ವಿವರಿಸಿದರು. ಇದಕ್ಕೆ ಶಾಸಕರು ಈಗಾಗಲೇ ಶಾಲೆಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದ ಹಾಗೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಅನುದಾನ ಸದುಪಯೋಗ ಮಾಡಿಕೊಳ್ಳಿ:

ಸರ್ಕಾರದ ಪ್ರತಿ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಮಾಡುವ ಮೂಲಕ ಕ್ಷೇತ್ರ ಅಭಿವೃದ್ಧಿ ಪಡೆಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಶಾಸಕರ ಅನುದಾನವನ್ನು ಸರಿಯಾಗಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಎಲ್ಲ ಅಧಿಕಾರಿಗಳು ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಒಂದು ವೇಳೆ ನಿಮಗಾಗದೇ ಹೋದ ಪಕ್ಷದಲ್ಲಿ ನನ್ನ ಗಮನಕ್ಕೆ ತೆಗೆದುಕೊಂಡು ಬರಬೇಕು ಎಂದು ಸೂಚಿಸಿದರು.

ಬಾಕಿ ಕಾಮಗಾರಿ ಈ ತಿಂಗಳು ಪೂರ್ಣ:

ಹಿಂದುಳಿದ ವರ್ಗಗಳ ಅಡಿಯಲ್ಲಿ ೧೯ ಗಂಗಾ ಕಲ್ಯಾಣ ಕಾಮಗಾರಿ ಪ್ರಗತಿ ನೋಂದಣಿಯಾಗಿವೆ. ಇದರಲ್ಲಿ ಈಗಾಗಲೇ ೧೦ ಪೂರ್ಣಗೊಂಡಿವೆ. ೯ ಕಾಮಗಾರಿ ಬಾಕಿಯಿದ್ದು, ಈ ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ್ ತಿಳಿಸಿದರು. ೨೦೨೩-೨೪ ನೆಯ ಸಾಲಿನಲ್ಲಿ ೧೭೮೨ ಅಕ್ರಮ ಸಕ್ರಮ ಯೋಜನೆಗಳು ನೋಂದಣಿಯಾಗಿದ್ದು, ೭೨೦ ಪಲಾನುಭವಿಗಳ ಸಂಖ್ಯೆ ಅನುಮೋದನೆಯಾಗಿವೆ. ೫೪೦ ಕಾಮಗಾರಿ ಪೂರ್ಣಗೊಂಡಿವೆ. ೧೮೦ಕಾಮಗಾರಿ ಪ್ರಗತಿ ಹಂತದಲ್ಲಿವೆ. ೧೦೬೨ ಕಾಮಗಾರಿ ಬಾಕಿ ಇವೆ ಅವುಗಳು ಅನುಮತಿ ತೆಗೆದುಕೊಂಡು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

31 ವಿವೇಕ ಶಾಲಾ ಕೊಠಡಿ ಕಾಮಗಾರಿ:

೨೦೨೨-೨೩ನೇ ಸಾಲಿನ ವಿವೇಕ ಶಾಲಾ ಕೊಠಡಿಗಳ ಒಟ್ಟು ಕಾಮಗಾರಿ ಸಂಖ್ಯೆ ೩೧, ಪ್ರಾರಂಭಿಕ ಹಂತದಲ್ಲಿ ೨, ಪ್ರಗತಿ ಹಂತದಲ್ಲಿ ೧೩, ಪೂರ್ಣಗೊಂಡಿರುವ ಕಾಮಗಾರಿ ೧೬ ಮತ್ತು ಸ್ಥಳ ಸಮಸ್ಯೆ ೨ ಇರುತ್ತವೆ ಎಂದು ತಿಳಿಸಿದರು. ೨೦೨೩-೨೪ರ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳು ಆರೋಗ್ಯ ಇಲಾಖೆ ಕಟ್ಟಡ ನಿರ್ವಹಣೆ ಪೂರ್ಣಗೊಂಡಿರುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ವಹಣೆ ಸಿಂದಗಿ ೨, ಆಲಮೇಲ ೧, ಅಂಗನವಾಡಿ ಕಟ್ಟಡ ನಿರ್ವಹಣೆ ಸಿಂದಗಿ ೪, ಆಲಮೇಲ ೧, ಕೃಷಿ ಇಲಾಖೆ ಕಟ್ಟಡ ನಿರ್ವಹಣೆ ಸಿಂದಗಿ ೨, ತೋಟಗಾರಿಕೆ ಕಟ್ಟಡ ನಿರ್ವಹಣೆ ಸಿಂದಗಿ ೧ ಮತ್ತು ಪಶು ಸಂಗೋಪನೆ ಕಟ್ಟಡ ನಿರ್ವಹಣೆ ಸಿಂದಗಿ ೨ ಪೂರ್ಣಗೊಂಡಿವೆ ಎಂದು ಪಿಆರ್‌ಇಡಿ ಎಇಇ ಜಿ.ವಾಯ್.ಮುರಾಳ ತಮ್ಮ ಇಲಾಖೆ ಪ್ರಗತಿ ಮಂಡಿಸಿದರು.

ಈ ವೇಳೆ ವಿವಿಧ ಇಲಾಖೆಗಳ ಮಾಹಿತಿಯನ್ನು ಪಡೆದುಕೊಂಡು ಅವುಗಳನ್ನು ಪೂರ್ಣಗೊಳಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿಪಂ ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ವಿಜಯ್ ಅಜೂರ, ಸಿಂದಗಿ ತಾಪಂ ಇಒ ರಾಮು ಅಗ್ನಿ, ಆಲಮೇಲ ತಾಪಂ ಇಒ ಪರಿದಾ ಪಠಾಣ, ನಬಿಲಾಲ್ ಗಬಸವಳಗಿ, ಸಹಾಯಕ ಯೋಜನಾಧಿಕಾರಿ ಅರುಣ ಕುಮಾರ ದಳವಾಯಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಎ.ಎ.ದುರ್ಗದ, ಸಿದ್ದು ಅಂಕಲಗಿ, ಜಿ.ವಾಯ್.ಮುರಾಳ, ರಾಜಶೇಖರ್ ಜೊತಗೊಂಡ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

--

ಬಾಕ್ಸ್‌

ಶೀಘ್ರ ಕಾಮಗಾರಿ ಮುಗಿಸಿ

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯ ಜೆಜೆಎಂ ಕಾಮಗಾರಿ ಒಟ್ಟು೮೬ ಇದ್ದು, ಇದರಲ್ಲಿ ಎಡಿಎಂಯಿಂದ ಅನುಮೋದನೆಯಾಗಿದೆ. ೩೮ ಪ್ರಗತಿ ಹಂತದಲ್ಲಿ ಇವೆ. ೧೦ ಪೂರ್ಣಗೊಂಡಿವೆ. ೧೦ ಟೆಂಡರ್ ಕರೆಯಲಾಗಿದೆ. ೫ ವರ್ಕ್ಆರ್ಡರ್ ಸಮಸ್ಯೆಯಾಗಿರುತ್ತವೆ ಎಂದು ಆರ್‌ಡಬ್ಲ್ಯುಎಸ್ ಎಇಇ ತಾರಾನಾಥ್ ರಾಠೋಡ ತಮ್ಮ ಇಲಾಖೆಯ ಪ್ರಗತಿ ಮಂದಿಸಿದರು. ಇದಕ್ಕೆ ಶಾಸಕರು ಬೇಗ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ಸಮರ್ಪಕವಾಗಿ ನೀರು ನಲ್ಲಿಯಲ್ಲಿ ಬರುವಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ