ಜನರನ್ನು ವಂಚಿಸುತ್ತಿದ್ದ ನಕಲಿ ಪೋಲಿಸನ ಬಂಧನ

KannadaprabhaNewsNetwork |  
Published : Oct 03, 2026, 02:30 AM IST
ಅಳ್ನಾವರ ಪೋಲಿಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ವಾಹನಗಳು. | Kannada Prabha

ಸಾರಾಂಶ

ಪೊಲೀಸ್ ಅಧಿಕಾರಿಯಂತೆ ನಟಿಸಿ ಸಾರ್ವಜನಿಕರನ್ನು ಹೆದರಿಸಿ ಹಣ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಳ್ನಾವರ ಪೊಲೀಸರು ಬಂಧಿಸಿದ್ದಾರೆ.

ಅಳ್ನಾವರ:

ಪೊಲೀಸ್ ಅಧಿಕಾರಿಯಂತೆ ನಟಿಸಿ ಸಾರ್ವಜನಿಕರನ್ನು ಹೆದರಿಸಿ ಹಣ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಳ್ನಾವರ ಪೊಲೀಸರು ಬಂಧಿಸಿದ್ದಾರೆ.

ಬೈಲಹೊಂಗಲದ ದೇಶನೂರ ಚಾಳ ನಿವಾಸಿ, ಮಸಾಲೆ ವ್ಯಾಪಾರಿ ಅಬೀದ್ ಅಬ್ದುಲ್‌ಖಾದರ್ ಅಂಕಲೆ (41) ಬಂಧಿತ ಆರೋಪಿ. ಸೆ. 27ರಂದು ಸಂಜೆ ಕಿತ್ತೂರು ತಾಲೂಕಿನ ಕತ್ರಿಡಡ್ಡಿ ಗ್ರಾಮದ ತರಕಾರಿ ವ್ಯಾಪಾರಿ ಶೌಕತಲಿ ಅಲ್ಲಾಭಕ್ಷ ಮಕಾನದಾರ ಅವರು ಪತ್ನಿಯೊಂದಿಗೆ ಬೈಕ್‌ನಲ್ಲಿ ಅಳ್ನಾವರ-ಹಳಿಯಾಳ ರಸ್ತೆಯ ವಿದ್ಯಾನಗರದ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ಸಂಚರಿಸುವಾಗ ಸ್ಕೂಟಿಯಲ್ಲಿ ಬಂದ ಅಬೀದ್, ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಬೈಕ್ ನಿಲ್ಲಿಸಿದ್ದಾನೆ. ನಾವು ಪೊಲೀಸರು, ನಿಮ್ಮ ಚೀಲ ಹಾಗೂ ಪ್ಯಾಂಟ್ ಕಿಸೆ ಪರಿಶೀಲಿಸಬೇಕು ಎಂದು ಹೆದರಿಸಿ, ಪರಿಶೀಲನೆಯ ನೆಪದಲ್ಲಿ ಶೌಕತಲಿ ಅವರ ಕಿಸೆಯಲ್ಲಿದ್ದ ₹ 15,700 ನಗದು ಪಡೆದುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಅಳ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆಹಾಕಿ ಸೆ. ೨೯ರಂದು ಅಬೀದ್ ಅಬ್ದುಲಖಾದರ ಅಂಕಲೆಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹ 1.15 ಲಕ್ಷ ಮೌಲ್ಯದ ನಾಲ್ಕು ಬೈಕ್‌ ಹಾಗೂ ₹ 4,500 ನಗದು ಜಪ್ತಿ ಮಾಡಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋದ ಮುಕ್ತೇದಾರ ಹಾಗೂ ಗರಗ ವೃತ್ತದ ಸಿಪಿಐ ಎಂ.ಎಂ. ತಹಸೀಲ್ದಾರ್‌ ಅವರ ಮಾರ್ಗದರ್ಶನದಲ್ಲಿ ಅಳ್ನಾವರ ಪಿಎಸ್‌ಐ ಎಸ್.ಬಿ. ಜಾಂಬೋಟಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಪಿಎಸ್‌ಐ ಎಫ್.ಎಂ. ಮಂಟೂರ, ಎಎಸ್‌ಐ ಎ.ಬಿ. ಸೊರಟೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಂಡದ ಕಾರ್ಯವನ್ನು ಎಸ್ಪಿ ಗುಂಜನ್ ಆರ್ಯ ಶ್ಲಾಘಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದ್ರದ ಮೀನು ಹಳ್ಳದಲ್ಲಿ ಬೇಟೆ ಕೇಣಿಯಲ್ಲಿ ಕೊಕ್ಕರಾ ಮೀನುಗಳ ಸುಗ್ಗಿ
ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ