ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ

KannadaprabhaNewsNetwork |  
Published : Oct 03, 2026, 02:15 AM IST
ಕಾರ್ಯಾಗಾರಕ್ಕೆ ಡಾ. ಬಸವರಾಜ ಬೊಮ್ಮನಹಳ್ಳಿ ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಜ್ಯಮಟ್ಟದ ಮೂತ್ರಾಂಗ ಶಸ್ತ್ರ ಚಿಕಿತ್ಸಕರ 31ನೇ ವಾರ್ಷಿಕ ಸಮ್ಮೇಳನ ನಡೆಯಿತು.

ಗದಗ: ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ವೈದ್ಯಕೀಯ ಕ್ಷೇತ್ರವಿಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ, ದೇಶಕ್ಕೆ ಮಾದರಿಯಾಗುವಂತಹ ಸಾಧನೆ ಮಾಡಿದೆ ಎಂದು ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಕರ್ನಾಟಕ ಯುರಾಲಜಿ ಅಸೋಸಿಯೇಷನ್‌ದ ರಾಜ್ಯಮಟ್ಟದ ಮೂತ್ರಾಂಗ ಶಸ್ತ್ರ ಚಿಕಿತ್ಸಕರ 31ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಟ್ರಾನ್ಸಪ್ಲಾಂಟ್ ಮತ್ತು ಯುರೋ- ಜೆನಿಟಲ್ ಸೊಸೈಟಿ ಹಾಗೂ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗ ರಚನಾಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ಮೂತ್ರಪಿಂಡ ಕಸಿ ಮತ್ತು ಡಯಾಲಿಸಿಸ್ ಪ್ರವೇಶ ಸಮ್ಮೇಳನ ಪೂರ್ವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನಲಾಗುವ ಶವದ ಮೇಲಿನ ಕಾರ್ಯಾಗಾರ ಏರ್ಪಡಿಸಿರುವುದು ಪ್ರಾಯೋಗಿಕ ಕಲಿಕೆಯ ಅನುಭವವಾಗಿ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಶಸ್ತ್ರಚಿಕಿತ್ಸಾ, ಅಂಗ ರಚನಾಶಾಸ್ತ್ರವನ್ನು ಪುನರಾವಲೋಕಿಸಲು, ಶಸ್ತ್ರಚಿಕಿತ್ಸಾ ತಂತ್ರಗಳನ್ನು ಪರಿಷ್ಕರಿಸಲು ಮತ್ತು ಅನುಭವಿ ಬೋಧಕರಿಂದ ನೇರವಾಗಿ ಕಲಿಯಲು ಅವಕಾಶವನ್ನು ಒದಗಿಸಿರುವುದು ವಿಶೇಷ ಎಂದರು.

ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಶರಣ್ ಆಲೂರ ಮಾತನಾಡಿ, ಮೂತ್ರಪಿಂಡ ಕಸಿ ಮತ್ತು ಡಯಾಲಿಸಿಸ್ ಪ್ರವೇಶದ ಮಾಸ್ಟರ್ ಕ್ಲಾಸ್, ಮೂತ್ರಶಾಸ್ತ್ರ ಕ್ಷೇತ್ರದ ಇತ್ತೀಚಿನ ಪ್ರಗತಿಗಳ ಕುರಿತು ಶೈಕ್ಷಣಿಕ ಉಪನ್ಯಾಸಗಳು, ಜತೆಗೆ ಆಧ್ಯಾತ್ಮಿಕ ಉಪನ್ಯಾಸ, ಪ್ರೇರಕ ಭಾಷಣಗಳನ್ನು ಏರ್ಪಡಿಸಲಾಗಿದೆ. ಅರ್ಥಪೂರ್ಣ ಸಂವಾದ, ಶಾಶ್ವತ ವೃತ್ತಿಪರ ನೆಟ್‌ವರ್ಕ್‌ಗಳು ಮತ್ತು ಪರಿಣಾಮಕಾರಿ ಪ್ರಗತಿಗಳಿಗೆ ಈ ಸಮ್ಮೇಳನ, ಕಾರ್ಯಾಗಾರ ಪ್ರಬುದ್ಧ ವೇದಿಕೆಯಾಗಲಿದೆ ಎಂದರು.

ಕರ್ನಾಟಕ ಯುರಾಲಜಿ ಅಸೋಸಿಯೇಷನ್‌ದ ರಾಜ್ಯ ಅಧ್ಯಕ್ಷ ಡಾ. ನವೀನ ಎಚ್.ಎನ್. ಹಾಗೂ ಗೌರವ ಕಾರ್ಯದರ್ಶಿ ಡಾ. ಸಚಿನ್ ಧಾರವಾಡ್ಕರ್ ಮಾತನಾಡಿದರು.

ಕಾರ್ಯಾಗಾರದಲ್ಲಿ ಡಾ. ಅಜಯ್ ಶರ್ಮಾ, ಡಾ. ಶಾಂತನು ಭಟ್ಟಾಚಾರ್ಯ, ಡಾ. ಸೋನಲ್ ಅಸ್ಥಾನಾ, ಡಾ. ಅರುಣ್ ಚಾವ್ಲಾ, ಡಾ. ಎಸ್.ಐ. ನೀಲಿ, ಡಾ. ಅಖಿಲಾ ರಾಜ್‌ಕುಮಾರ್, ಡಾ. ಮೇಘನಾ ಹಿಪ್ಪರಗಿ, ಡಾ. ಭರತ್ ಭೂಷಣ್ ವಿವಿಧ ವಿಷಯವಾಗಿ ಅಧ್ಯಯನ ಪೂರ್ಣ ವಿಷಯ ಮಂಡಿಸಿದರು.

ಡಾ. ಪವನ್‌ಕುಮಾರ್ ಕೋಳಿವಾಡ, ಡಾ. ಶ್ರೀಕಾಂತ್ ಮೆಹರವಾಡೆ, ಡಾ. ಭರತ್ ಕ್ಷತ್ರಿ, ಡಾ. ಭುವನೇಶ್ ಎನ್., ಡಾ. ಪ್ರದೀಪ್ ತೆಂಗಿನಕಾಯಿ, ಡಾ. ಪ್ರವೀಣ್ ಡಂಬಳ, ಡಾ. ದೀಪಕ್ ಕುರಹಟ್ಟಿ ಇದ್ದರು. ಸಂಘಟನಾ ಕಾರ್ಯದರ್ಶಿ ಡಾ. ಅವಿನಾಶ ಓದುಗೌಡರ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ
ಗಾಂಧೀಜಿ, ಶಾಸ್ತ್ರೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಿಸಿ ಶ್ರೀಧರ್‌