ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ

KannadaprabhaNewsNetwork | Published : Oct 20, 2023 1:00 AM

ಸಾರಾಂಶ

ದಾಬಸ್‌ಪೇಟೆ: ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ದಾಬಸ್‌ಪೇಟೆ: ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸೋಂಪುರ ಹೋಬಳಿಯ ಶಿವಾನಂದನಗರದ ಹರ್ಷ(19) ಬಂಧಿತ. ಈತ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಶಿವಗಂಗೆಯ ಶಾರದಾ ಕ್ರಾಸ್ ಬಳಿ ಗಾಂಜಾ ಮಾರುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಕುಮಾರಿ ಹಾಗು ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ನಂತರ ಆತನ ಬ್ಯಾಗ್‌ನ್ನು ಪರಿಶೀಲಿಸಿದಾಗ 2.1 ಕೆಜಿ ಒಣ ಗಾಂಜಾ ಪತ್ತೆಯಾಗಿದೆ. ಆತನ ಸ್ನೇಹಿತನೊಂದಿಗೆ ಸೇರಿ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ಉತ್ತರ ಭಾರತದ ರಾಜ್ಯಗಳ ಕಡೆಯಿಂದ ರೈಲುಗಳಲ್ಲಿ ಬರುವವರಿಂದ ಖರೀದಿಸಿ ತಂದು ಗುಡೆಮಾರನಹಳ್ಳಿ, ಕುದೂರು, ಬಾಣವಾಡಿ, ಶಿವಗಂಗೆ ಕಡೆಗಳಲ್ಲಿ ಹಾಗೂ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಲಾರಿ ಪಾರ್ಕಿಂಗ್‌ಗಳಲ್ಲಿ ಚಾಲಕರು ಕ್ಲೀನರ್‌ಗಳಿಗೆ ಫ್ಯಾಕ್ಟರಿಯ ಕಾರ್ಮಿಕರಿಗೆ ಮಾರುತ್ತಿದ್ದುದಾಗಿ ತಿಳಿಸಿದ್ದಾನೆ.

Share this article