ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ ಆರೋಪಿಗಳ ಬಂಧನ

KannadaprabhaNewsNetwork |  
Published : Nov 04, 2024, 12:33 AM IST
3ಕೆೆಕೆಡಿಯು2. | Kannada Prabha

ಸಾರಾಂಶ

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರಸ್ವತಿಪುರದ ಗೇಟಿನ ಬಳಿ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನಾಭರಣ ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಮಾಲಿನ ಸಮೇತ ಕಡೂರು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕಡೂರು

ಪೊಲೀಸ್ ಠಾಣಾ ವ್ಯಾಪ್ತಿಯ ಸರಸ್ವತಿಪುರದ ಗೇಟಿನ ಬಳಿ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನಾಭರಣ ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಮಾಲಿನ ಸಮೇತ ಕಡೂರು ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದ ಶಹಬಾಜ್ ಅಹ್ಮದ್ ಬಿನ್ ತಾಜುದ್ದೀನ್ ಮತ್ತು ಭದ್ರಾವತಿ ತಾಲೂಕಿನ ಸಿದ್ದಾಪುರ ತಾಂಡ್ಯದ ಹನುಮಾನಾಯ್ಕ ಬಂಧಿತ ಆರೋಪಿಗಳು.

ಕಳೆದ ಅ. 26ರಂದು ಸರಸ್ವತಿಪುರ ಗೇಟಿನ ಬಳಿ ಘಟನೆ ನಡೆದಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ.ರಫೀಕ್ ನೇತೃತ್ವದಲ್ಲಿ ಕಡೂರು ಜನತೆಯಲ್ಲಿ ಆತಂಕ ಮೂಡಿಸಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಿಎಸ್ಐ ಹಾಗೂ ಸಿಬ್ಬಂದಿ ಆರೋಪಿಗಳ ಮಾಹಿತಿ ಕಲೆಹಾಕಿ ಭದ್ರಾವತಿ ಹೊಸೂರು ಸಿದ್ದಾಪುರ ಗ್ರಾಮದ ಶಹಬಾಜ್ ಮತ್ತು ಸಿದ್ದಾಪುರ ತಾಂಡ್ಯದ ಹನುಮಾನಾಯ್ಕ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ 85,000 ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 40,000 ಮೌಲ್ಯದ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಧಿಕಾರಿ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ. ಆರೋಪಿಗಳ ಪತ್ತೆ ತಂಡದಲ್ಲಿ ಪಿಎಸ್ಐಗಳಾದ ಪವನ್ ಕುಮಾರ್ ಸಿ.ಸಿ, ಅಜರುದ್ದೀನ್ ಎಂ. ಎಸ್, ಧನಂಜಯ ಡಿ.ಎಚ್. ಲೀಲಾವತಿ ಹಾಗೂ ಸಿಬ್ಬಂದಿ ವೇದಮೂರ್ತಿ, ಮೊಹಮ್ಮದ್ ರಜಾಕ್, ಧನಪಾಲ್ ನಾಯ್ಕ, ಸ್ವಾಮಿ, ದೇವರಾಜ್, ಬೀರೇಶ್, ಪರಮೇಶ್ ನಾಯ್ಕ, ಮಧು, ಹರೀಶ್, ಮಂಜುನಾಥ ಸ್ವಾಮಿ ಕುಚೇಲ, ಕಿಶೋರ್, ರೇಣುಕಾ ಪ್ರಸಾದ್, ತಾಂತ್ರಿಕ ವಿಭಾಗದ ಅಂಜುಮ್, ಅಬ್ದುಲ್ ರಬ್ಬಾನಿ ಇದ್ದರು.3 ಕೆಕೆಡಿಯು2. ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನಾಭರಣಗಳೊಂದಿಗೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು.

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ