ಒಂಟಿ ಮಹಿಳೆಯರ ಚಿನ್ನದ ಸರ ಅಪಹರಿಸುತ್ತಿದ್ದವರ ಸೆರೆ

KannadaprabhaNewsNetwork |  
Published : Oct 19, 2026, 01:15 AM IST
 | Kannada Prabha

ಸಾರಾಂಶ

ರಾಮನಗರ: ಅಂಗಡಿಯಲ್ಲಿದ್ದ ವೃದ್ಧೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ

ರಾಮನಗರ: ಅಂಗಡಿಯಲ್ಲಿದ್ದ ವೃದ್ಧೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಗೋರಿಪಾಳ್ಯದ ವಾಸಿ ತೌಸಿಫ್ ಪಾಷಾ ಮತ್ತು ಪಾದರಾಯನಪುರದ ಮುಬಾರಕ್ ಪಾಷಾ ಬಂಧಿತರು.

ಈ ಆರೋಪಿಗಳಿಂದ 12.80 ಲಕ್ಷ ಮೌಲ್ಯದ 105 ಗ್ರಾಂ 2 ಎರಡು ಚಿನ್ನದ ಸರ ವಶ ಪಡಿಹಿಕೊಂಡಿದ್ದಾರೆ. ತೌಸಿಫ್ ಪಾಷಾ ವೃತ್ತಿಯಲ್ಲಿ ಆಟೋ ಚಾಲಕ ಮತ್ತು ಮುಬಾರಕ್ ಪಾಷಾ ಬಟ್ಟೆ ವ್ಯಾಪಾರಿ. ಮುಸುಕುಧಾರಿಗಳಾಗಿ ಕಳೆದ ಅ.12ರಂದು ಬಸವನಪುರದಲ್ಲಿ ಜಯಲಕ್ಷ್ಮಮ್ಮ ಅವರಿಗೆ ಸೇರಿದ ಟೀ ಅಂಗಡಿ ಬಳಿ ಬಂದು ಸಿಗರೇಟು ತೆಗೆದುಕೊಂಡು, ಬಳಿಕ ಬಿಸ್ಕೆಟ್ ಕೇಳಿದ್ದು, ಜಯಲಕ್ಷಮ್ಮ ಬಿಸ್ಕೆಟ್ ಬಾಕ್ಸ್‌ನಿಂದ ತೆಗೆದುಕೊಳ್ಳವ ವೇಳೆ ಆರೋಪಿಗಳು ಹಗ್ಗದಿಂದ ವಯೋವೃದ್ಧೆ ಕುತ್ತಿಗೆ ಬಿಗಿದು ಎಳೆದು ಬೀಳಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಯರೇಹಳ್ಳಿ ಅಂಕನಹಳ್ಳಿ ರಸ್ತೆಯಲ್ಲಿ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಹೆಂಗಸಿನ ಕತ್ತಿನಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಂಡು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಮಾರಾಟ ಮಾಡುವುದಾಗಿ ವಿಚಾರಣಾ ಸಮಯದಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ದರೋಡೆ ಮಾಡಿದ್ದ ಸುಮಾರು 12.80 ಲಕ್ಷ ರುಪಾಯಿ ಮೌಲ್ಯದ 105 ಗ್ರಾಂ ಚಿನ್ನದ ಸರಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸಲು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ರಾಮನಗರ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಇನ್ಸ್ ಪೆಕ್ಟರ್ ಮುರಳಿ, ಸಬ್ ಇನ್ಸ್ ಪೆಕ್ಟರ್ ಮಹಮ್ಮದ್ ಅಲ್ಲಾವುದ್ದೀನ್, ಪೇದೆಗಳಾದ ಮಹೇಶ್, ಕೆ.ಸುಜಾತ, ಆಸೀಫ್, ನರೇಶ, ಮುನಿರಾಜ್ ನಾಯ್ಕ, ಸುನೀತಾ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯಲ್ಲಿ ಬೀದಿ ವ್ಯಾಪಾರದ ವಿಚಾರಕ್ಕೆ ಗಲಾಟೆ
ಗ್ಯಾರಂಟಿಗಾಗಿ ರೈತರ ಸಾಲಮನ್ನಾ, ಹಳೇ ಪಿಂಚಣಿ ಜಾರಿಯಿಲ್ಲ: ಬಿಕೆ ಹರಿಪ್ರಸಾದ್‌