- ವಿವಿಧ ಜಿಲ್ಲೆಗಳ ಮನೆ, ದೇವಸ್ಥಾನಗಳಲ್ಲಿ ಕಳವು ನಡೆಸಿದ್ದ ಆರೋಪಿಗಳು- - - ಕನ್ನಡಪ್ರಭ ವಾರ್ತೆ ದಾವಣಗೆರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆ, ದೇವಸ್ಥಾನಗಳಲ್ಲಿ ಕಳವು ಕೃತ್ಯ ನಡೆಸಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಪೊಲೀಸರು, ₹12.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕು ಬಸವಾಪಟ್ಟಣ ಗ್ರಾಮದ ಸಂಜಯ್ ಅಲಿಯಾಸ್ ಹನುಮಂತ ಅಲಿಯಾಸ್ ಅದ್ಧೂರಿ ಹನುಮಂತ ಹಾಗೂ ಮಂಜುನಾಥ ಅಲಿಯಾಸ್ ಎಲೆಮಾರಿ ಮಂಜ ಬಂಧಿತ ಆರೋಪಿಗಳು.ಚನ್ನಗಿರಿ ತಾಲೂಕು ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ, ಹರೋಸಾಗರ, ಕೋಟೆಹಾಳ್ ಗ್ರಾಮದಲ್ಲಿ ಹಗಲು ಮನೆಗಳ್ಳತನ ಕುರಿತು ಪ್ರಕರಣ ದಾಖಲಾಗಿತ್ತು. ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ವಿಜಯ ಕುಮಾರ್ ಎಂ. ಸಂತೋಷ, ಜಿ.ಮಂಜುನಾಥ, ಚನ್ನಗಿರಿ ಡಿವೈಎಸ್‌ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸ್‌ಐಗಳಾದ ವೀಣಾ, ಭಾರತಿ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿ, ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಲಾಗಿತ್ತು.
ಆರೋಪಿಗಳು ಬಸವಾಪಟ್ಟಣ ಠಾಣೆಯಲ್ಲಿ 3, ಸಂತೆಬೆನ್ನೂರು ಠಾಣೆಯ 2, ಹೊನ್ನಾಳಿ ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ₹10 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ, ಕೃತ್ಯಕ್ಕೆ ಬಳಸಿದ್ದ ₹2.50 ಲಕ್ಷ ಮೌಲ್ಯದ ಮೋಟಾರ್ ಬೈಕ್ ಸೇರಿದಂತೆ ಒಟ್ಟು ₹12.50 ಲಕ್ಷ ಬೆಲೆಯ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.- - -
ಬಾಕ್ಸ್ * 23ಕ್ಕೂ ಅಧಿಕ ಪ್ರಕರಣಆರೋಪಿಗಳು ಈ ಹಿಂದೆ ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ 23ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎರಡು ಪ್ರಕರಣಗಳಲ್ಲಿ ಈಗಾಗಲೇ ಜೈಲುವಾಸ ಅನುಭವಿಸಿದ್ದಾರೆ.- - - -1ಕೆಡಿವಿಜಿ47ಃ:
ದಾವಣಗೆರೆ ಜಿಲ್ಲೆ ವಿವಿಧೆಡೆ ಕಳವು ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ₹12.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡರು.