ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವೃದ್ಧರ ದಿನ

KannadaprabhaNewsNetwork |  
Published : Oct 02, 2024, 01:19 AM IST
1ಎಚ್ಎಸ್ಎನ್3 : ಹೊಳೆನರಸೀಪುರದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಅಂತರಾಷ್ಟ್ರೀಯ ವೃದ್ಧರ ದಿನ-೨೦೨೪ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ದೇವ್ ಆನಂದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಭಾರತದಲ್ಲಿ ಒಟ್ಟು ಕುಟುಂಬ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೀಗಾಗಿದೆ. ನಮ್ಮ ಏಳಿಗೆಗೆ ಶ್ರಮಿಸಿದ ಹಿರಿಯರ ಬಗ್ಗೆ ನಾವುಗಳು ಹೆಚ್ಚಿನ ಕಾಳಜಿ ತೋರಲೇಬೇಕಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್‌ ದೇವ್ ಆನಂದ್ ಸಲಹೆ ನೀಡಿದರು. ಹೊಳೆನರಸೀಪುರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೃದ್ಧರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕಿದೆ: ದೇವ್ ಆನಂದ್

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಜೀವನ ಸಂಧ್ಯವೆಂಬ ಒಂದು ಹಿರಿಯರನ್ನು (ವೃದ್ಧರು) ನೋಡಿಕೊಳ್ಳುವ ವೃದ್ಧಾಶ್ರಮವನ್ನು ಚಿಕ್ಕಮಗಳೂರಿನ ರೋಟರಿ ಸಂಸ್ಥೆಯವರು ಸ್ಥಾಪಿಸಿದ್ದಾರೆ. ಹೊರದೇಶಕ್ಕೆ ಕರ್ತವ್ಯಕ್ಕೆ ತೆರಳುವ ಸಲುವಾಗಿ ಅನಿವಾರ್ಯದಿಂದ ವೃದ್ಧಾಶ್ರಮದ ವ್ಯವಸ್ಥೆ ಬಂದಿದೆ ಮತ್ತು ನಮ್ಮ ಭಾರತದಲ್ಲಿ ಒಟ್ಟು ಕುಟುಂಬ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೀಗಾಗಿದೆ. ನಮ್ಮ ಏಳಿಗೆಗೆ ಶ್ರಮಿಸಿದ ಹಿರಿಯರ ಬಗ್ಗೆ ನಾವುಗಳು ಹೆಚ್ಚಿನ ಕಾಳಜಿ ತೋರಲೇಬೇಕಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್‌ ದೇವ್ ಆನಂದ್ ಸಲಹೆ ನೀಡಿದರು.ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಅಂತಾರಾಷ್ಟ್ರೀಯ ವೃದ್ಧರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲೂ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು, ಕೈಗಾರಿಕೆಗಳು ಹಾಗೂ ಹಲವಾರು ಅವಕಾಶಗಳು ಇದ್ದು, ಇಂತಹ ಸಂದರ್ಭದಲ್ಲಿ ಹೊರದೇಶದ ವ್ಯಾಮೋಹ ಬಿಟ್ಟು ನಮ್ಮ ಯುವಕರು ಇಲ್ಲೇ ಕರ್ತವ್ಯ ನಿರ್ವಹಿಸಿದರೇ ಆರ್ಥಿಕವಾಗಿ ನಮ್ಮ ದೇಶ ಪ್ರಗತಿ ಹೊಂದುವ ಜತೆಗೆ ತಂದೆ-ತಾಯಿ ಹಾಗೂ ಹಿರಿಯರನ್ನು ನೋಡಿಕೊಳ್ಳುವ ಅವಕಾಶವೂ ದೊರೆಯುತ್ತದೆ ಎಂದು ಸಲಹೆ ನೀಡಿದರು.ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್‌ ಅವರು ೬೦ ವರ್ಷ ದಾಟಿದವರನ್ನು ವೃದ್ಧರು ಎಂದು ಕರೆದು ಅವರ ಆತ್ಮವಿಶ್ವಾಸವನ್ನು ಕುಂಠಿತಗೊಳಿಸದೇ ಹಿರಿಯರು ಎಂದು ಕರೆಯುವುದು ಸೂಕ್ತವೆಂದರು.

ವರ್ಷಿಣಿ ಪ್ರಾರ್ಥಿಸಿದರು, ಅನುಶ್ರೀ ಹಾಗೂ ರೋಜ ನಿರೂಪಿಸಿದರು. ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಯು.ಎಚ್ , ರೋಟರಿ ಕ್ಲಬ್ ವಲಯ ಲೆಫ್ಟಿನೆಂಟ್ ಲೋಕೇಶ್, ಜಿಲ್ಲಾ ಸಹಾ. ಗವರ್ನರ್‌ ನಿರ್ಮಲ್ ಕುಮಾರ್ ಜೈನ್, ಅಧ್ಯಕ್ಷ ಸಂತೋಷ್, ಎನ್‌ಎಸ್‌ಎಸ್ ಕೋ ಆರ್ಡಿನೇಟರ್‌ ಫರೀಕಮ್ಮ ಪಿ.ಮುರಗೊಡ್, ಉಪನ್ಯಾಸಕರಾದ ಡಾ. ಗಣೇಶ್, ಶ್ವೇತನಾಯಕ್, ಜಯಚಂದ್ರ ಇತರರು ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ