ಪಾಂಡವಪುರ: ತಾಲೂಕಿನ ಕೆಂಚನಹಳ್ಳಿಯಲ್ಲಿ ನಡೆದಿರುವ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ತಕ್ಷಣ ಬಂಧಿಸಿ ಸಂತ್ರಸ್ತ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಆಗ್ರಹಿಸಿದರು.
ಜಮೀನು ವಿಚಾರವಾಗಿ ಸವರ್ಣಿಯರಾದ ಚೆಲುವೇಗೌಡ, ಯೇಗೇಶ್, ಲೋಕೇಶ್, ಬೆಟ್ಟೇಗೌಡ, ಪ್ರಸನ್ನಕುಮಾರ್, ಚಂದ್ರು ಅದೇ ಗ್ರಾಮದ ಪರಿಶಿಷ್ಟ ಜನಾಂಗದ ಶಂಕರ, ಸಾವಿತ್ರಿ, ತ್ರಿವೇಣಿ, ಧನಲಕ್ಷ್ಮೀ, ಸಣ್ಣಮ್ಮ, ಐಶ್ವರ್ಯ ಎಂಬುವವರ ಮೇಲೆ ಜುಲೈ 27ರಂದು ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಗೃಹಸಚಿವರಿಗೆ ದೂರು:ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿ ಸಮುದಾಯದವರಿಗೆ ಹಾಕಿರುವ ಬೆದರಿಕೆ ಮತ್ತು ಜಾತಿ ನಿಂದನೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ರೀರಂಗಪಟ್ಟಣ ಉಪವಿಭಾಗದ ಡಿವೈಎಸ್ಪಿ ಮುರುಳಿ ಅವರನ್ನು ಪ್ರಶ್ನಿಸಿದರೆ ಕಾನೂನು ರೀತ್ಯಾ ಅಪರಾಧ ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಬಂಧಿಸುವುದಾಗಿ ಉದ್ದಟತನದ ಮಾತುಗಳನ್ನಾಡುತ್ತಾರೆ ಎಂದು ಕಿಡಿಕಾರಿದರು.
ದಲಿತ ಮುಖಂಡರಾದ ನಲ್ಲಹಳ್ಳಿ ಸುರೇಶ್, ಬೊಮ್ಮರಾಜು, ಟಿ.ಎಸ್.ಛತ್ರ ಜವರಪ್ಪ, ವಡ್ಡರಹಳ್ಳಿ ಕೆಂಪರಾಜು, ಅರಳಕುಪ್ಪೆ ಪ್ರಶಾಂತ್, ಛಲವಾದಿ ಸಂಘಟನೆ ಜಿಲ್ಲಾ ಮುಖಂಡ ಸುರೇಶ್, ಬಿಜೆಪಿ ಎಸ್‌ಸ್ಸಿ ಮೋರ್ಚಾದ ಪರಮಾನಂದ, ಮಾಚಹಳ್ಳಿ ಮಹೇಶ್, ನವೀನ್ ಮೌರ್ಯ ಇತರರು ಇದ್ದರು.