ಕನ್ನಡಪ್ರಭ ವಾರ್ತೆ ಮಾಲೂರು
ಕರ್ತವ್ಯ ನಿರತ ಆಸ್ವತ್ರೆಯ ಡಿ ಗ್ರೂಪ್ ನೌಕರರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ 2 ಗಂಟೆಗಳ ಕಾಲ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಗುರುವಾರ ರಾತ್ರಿ ಎರಡು ದ್ವಿಚಕ್ರ ವಾಹನ ಅಪಘಾತದಿಂದ ಗಾಯಗೊಂಡಿರುವ ಸವಾರರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ಈ ವೇಳೆ ಚಿಕ್ಕಕಲ್ಲಹಳ್ಳಿ ಗ್ರಾಮದ ಯಶವಂತ್, ಭರತ್, ಗೋಪಿ ಒಂದೇ ವಾಹನದಲ್ಲಿ ಹೋಗುವುದಿಲ್ಲ, ಮತ್ತೊಂದು ಆ್ಯಂಬುಲೆನ್ಸ್ ಕರೆಸುವಂತೆ ಡಿ ಗ್ರೂಪ್ ನೌಕರರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಹಲ್ಲೆ ನಡೆಸಿದ ಚಿಕ್ಕ ಕಲ್ಲಹಳ್ಳಿಯ ಯಶವಂತ್, ಭರತ್, ಗೋಪಿ, ಅವರನ್ನು ಠಾಣೆಗೆ ಕರೆದೊಯ್ತು ಮನೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಆವರಣದಲ್ಲಿ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವೈದ್ಯರು, ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿದ್ದಾರೆ.ಸ್ಥಳಕ್ಕೆ ಶಾಸಕ ಕೆ.ವೈ.ನಂಜೇಗೌಡ, ಪೊಲೀಸ್ ಇನ್ಸ್‌ಪೆಕ್ಟರ್ ವಸಂತ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕರ್ತವ್ಯನಿರತ ವೈದ್ಯರು, ಸಿಬ್ಬಂದಿಯ ಪರವಾಗಿ ತಾಲೂಕು ಆಡಳಿತ ಇದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಯಾವುದೇ ರೀತಿಯ ತೊಂದರೆಯಾಗದಂತೆ ಬೆಳಗ್ಗೆ, ಸಂಜೆ ಪೊಲೀಸರ ಗಸ್ತು ಹಾಕಲಾಗುವುದು ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಡಾ. ವಸಂತ್, ಡಾ ಶ್ರೀನಿವಾಸ್, ಡಾ. ಚನ್ನಕೇಶವ, ಡಾ. ರಾಮರಾಜೇಶ್, ಡಾ. ಗಾಯಿತ್ರಿ, ಡಾ.ಸಂಗೀತ, ಹರೀಶ್, ಮಧುಸೂದನ್, ವೆಂಕಟರೆಡ್ಡಿ, ಶುಶ್ರುಕಿಯರಾದ ಸರಸ್ವತಮ್ಮ, ಪ್ರಿಯದರ್ಶಿನಿ, ಸ್ವಪ್ನ, ಶಿಲ್ಪ, ವಾಸಂತಿ, ವಿಜಯಮ್ಮ, ಸೌಮ್ಯ, ಪ್ರತಿಭಾ, ಡಿ ಗ್ರೂಪ್ ನೌಕರರಾದ ಮಂಜುನಾಥ್, ಸುಭಾಷ್, ಕೃಷ್ಣಕುಮಾರ್, ಮೂರ್ತಿ, ಶಿವಣ್ಣ, ಜಗದೀಶ್, ಹೇಮಂತ್, ಪ್ರಕಾಶ್, ರಘು, ಕೃಷ್ಣಪ್ಪ, ಸುಧಾರಾಣಿ, ಸರೋಜಮ್ಮ, ಅರುಣ, ಅಂಬರೀಷ್, ಲಕ್ಷ್ಮಿ ಹಾಜರಿದ್ದರು.