ಕಾರ್ಕಳ ನ್ಯಾಯಾಲಯ ನ್ಯಾಯಾಧೀಶರ ಮುಂದೆ ಹಾಜರಾಗಿರುವ ನಕ್ಸಲೀಯರು ಕಾರ್ಕಳ ಪೋಲೀಸರು ಕಸ್ಟಡಿ

KannadaprabhaNewsNetwork | Updated : Feb 27 2025, 04:49 AM IST

ಸಾರಾಂಶ

ಮಂಗಳವಾರ ಕಾರ್ಕಳ ನ್ಯಾಯಾಲಯ ನ್ಯಾಯಾಧೀಶರ ಮುಂದೆ ಹಾಜರಾಗಿರುವ ನಕ್ಸಲೀಯರನ್ನು ನ್ಯಾಯಾಲಯದ ಮೂಲಕ ಕಾರ್ಕಳ ಪೋಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ 15 ಪ್ರಕರಣ ವಿಚಾರಣೆಗೆ ಇವರನ್ನು ಕರೆತರಲಾಗಿದೆ

 ಕಾರ್ಕಳ : ಮಂಗಳವಾರ ಕಾರ್ಕಳ ನ್ಯಾಯಾಲಯ ನ್ಯಾಯಾಧೀಶರ ಮುಂದೆ ಹಾಜರಾಗಿರುವ ನಕ್ಸಲೀಯರನ್ನು ನ್ಯಾಯಾಲಯದ ಮೂಲಕ ಕಾರ್ಕಳ ಪೋಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ 15 ಪ್ರಕರಣ ವಿಚಾರಣೆಗೆ ಇವರನ್ನು ಕರೆತರಲಾಗಿದೆ. ಬುಧವಾರ ನಕ್ಸಲರನ್ನು ಕರೆದೊಯ್ದು ಕಬ್ಬಿನಾಲೆ, ನಾಡ್ಪಾಲು ಭಾಗಗಳಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸ್ಥಳ ಮಹಜರು ಮಾಡಲಾಗಿದೆ

ಪೊಲೀಸ್ ಮಾಹಿತಿದಾರ ಎಂದು ಸದಾಶಿವ ಗೌಡನನ್ನ ಡಿ. 20, 2011 ರಂದು ವಿಕ್ರಂ ಗೌಡ, ಮುಂಡಗಾರು ಲತಾ ಇದ್ದ ನಕ್ಸಲರ ತಂಡ ಸದಾಶಿವ ಗೌಡ ಕೊಲೆ ಮಾಡಿತ್ತು. ಕಸ್ಟಡಿಗೆ ಪಡೆದ ನಾಲ್ವರು ನಕ್ಸಲರಲ್ಲಿ ಎಂ. ವನಜಾಕ್ಷಿ ಯಾನೆ ಜ್ಯೋತಿ ಯಾನೆ ಕಲ್ಪನ (58) ಮೇಲೆ ಕಾರ್ಕಳ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ 3 ಪ್ರಕರಣ

ಸುಂದರಿ ಯಾನೆ ಗೀತಾ ಯಾನೆ ಜಿನ್ನಿ (40)‌ ವಿರುದ್ಧ ಕಾರ್ಕಳ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಪ್ರಕರಣ, ಲತಾ ಯಾನೆ ಮುಂಡಗಾರು ಲತಾ ಯಾನೆ ಲೋಕಮ್ಮ ಯಾನೆ ಶ್ಯಾಮಲ (45) ವಿರುದ್ಧ ಕಾರ್ಕಳ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಪ್ರಕರಣ, ಜಾನ್ ಯಾನೆ ಜಯಣ್ಣ ಯಾನೆ ಮಹೇಶ್ ಯಾನೆ ಮಾರಪ್ಪ (49) ವಿರುದ್ಧ ಕಾರ್ಕಳ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಒಟ್ಟು 3 ಪ್ರಕರಣಗಳಿವೆ.

ಪಾಡ್ದನ ಸಿರಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀ ಶೇರಿಗಾರ್‌ ನಿಧನ:

ಹಿರಿಯ ಪಾಡ್ದನ ಹಾಡುಗಾರ್ತಿ ಹಾಗೂ ಕೃಷಿಕ ಮಹಿಳೆ ಪಡುಅಲೆವೂರು ಪೆರುಪಾದೆಯ ದಿ.ಶೀನ ಶೇರಿಗಾರ್ ಅವರ ಪತ್ನಿ ಲಕ್ಷ್ಮೀ ಶೇರಿಗಾರ್ (98) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಏಳು ಗಂಡು, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಗದ್ದೆ ನಾಟಿ ಸಂದರ್ಭದಲ್ಲಿ, ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಸಂಧಿ, ಪಾಡ್ದನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದರು. ಪಂಜುರ್ಲಿ, ಕೋಟಿ ಚೆನ್ನಯ, ಸಿರಿ ಪಾಡ್ದನಗಳನ್ನು ಇತ್ತೀಚಿನವರೆಗೆ ನಿರರ್ಗಳವಾಗಿ ಹಾಡುತ್ತಿದ್ದರು. ಪಾಡ್ದನ ಕ್ಷೇತ್ರದ ಅಪಾರ ಅನುಭವ ಸಾಧನೆಯನ್ನು ಗುರುತಿಸಿ ಇವರಿಗೆ ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಪೌಂಡೇಶನ್ ವತಿಯಿಂದ ಕೊಲ್ಲು ಶೆಡ್ತಿ ಸ್ಮರಣಾರ್ಥ ‘ಪಾಡ್ದನ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Share this article