ವಿಚ್ಛೇದನ ನೀಡದೇ ನೋಹನ್ ಕಾಂತ್ ಎರಡನೇ ಮದುವೆ । ತನಗೆ ನ್ಯಾಯ ಕೊಡಿಸುವಂತೆ ಮೊದಲ ಪತ್ನಿ ಆಗ್ರಹ
ನೂರಾರು ಮಂದಿ ಸಂಬಂಧಿಕರು ನೆರೆದು ಸಡಗರ- ಸಂಭ್ರಮದಿಂದ ಮದುವೆ ಸಮಾರಂಭ ನಡೆಯುತ್ತಿತ್ತು. ಆದರೆ, ಅಲ್ಲಿಗೆ ಆಗಮಿಸಿದ ಮೊದಲನೇ ಪತ್ನಿ ಮತ್ತು ಆಕೆಯ ಸಹೋದರಿ ಹಾಗೂ ಸಂಬಂಧಿಕರರೊಂದಿಗೆ ಮದುವೆ ಮನೆಯಲ್ಲಿ ಗಲಾಟೆ ನಡೆಸಿದ್ದು, ಎರಡೂ ಕಡೆಯವರಿಂದ ಗಲಾಟೆ ನಡೆದು ಕೈ ಕೈ ಮಿಲಾಯಿಸಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ.
ಬುಧವಾರ ನಗರದ ಸಿಎಸ್‌ಐ ಚರ್ಚ್ ನಲ್ಲಿ ನಗರದ ನಿವಾಸಿಗಳಾದ ನೋಹನ್ ಕಾಂತ್ ಹಾಗೂ ಗ್ಲೋರಿ ಎಂಬಾಕೆಯ ವಿವಾಹ ನಡೆದಿತ್ತು. ಎಲ್ಲ ಸಂಬಂಧಿಕರು ಸಡಗರ ಸಂಭ್ರಮದಿಂದ ಮದುವೆಯಲ್ಲಿ ಭಾಗವಹಿಸಿ, ನೂತನ ವಧು ವರರಿಗೆ ಆಶೀರ್ವಾದ ಮಾಡಿ ಚರ್ಚ್ ನ ಫಾದರ್ ಸಮ್ಮುಖದಲ್ಲಿ ಅಂತಿಮ ಹಂತದ ಮದುವೆ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರು. ಅಷ್ಟರಲ್ಲೇ ಮದುವೆ ವಿಷಯ ತಿಳಿದ ಮೊದಲನೇ ಪತ್ನಿ ರಶ್ಮಿ ಮದುವೆ ಮನೆಗೆ ನುಗ್ಗಿ ರಂಪಾಟ ಮಾಡಿದರು. ಗಂಡ ನೋಹನ್ ಕಾಂತ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವೇಳೆ ಎರಡು ಕಡೆಯವರು ಪರಸ್ಪರ ತಳ್ಳಾಟ, ನೂಕಾಟ ನಡೆಸಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.ಮೊದಲ ಪತ್ನಿ ರಶ್ಮಿ ನನ್ನ ಗಂಡ ನನಗೆ ಡೈವೋರ್ಸ್ ಕೊಡದೆ ಎರಡನೇ ಮದುವೆಯಾಗುತ್ತಿದ್ದಾನೆ, ನನಗೆ ನನ್ನ ಮಗುವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದಳು.
ರಶ್ಮಿ ಹಾಗೂ ನೋಹನ್ ಕಾಂತ್ ಮದುವೆಯ ಚಿತ್ರ.