ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳ ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ, ಚಿತ್ರಕಲೆ ಎಲ್ಲವೂ ವಾಣಿಜ್ಯೀಕರಣವಾದ ಈ ಕಾಲಘಟ್ಟದಲ್ಲಿ ಲಾಭ, ನಷ್ಟವಿಲ್ಲದ ಶಿಬಿರವೊಂದು ಮಕ್ಕಳ ಭಾವನೆಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದೆ.ನಗರದ ಗನ್ ಹೌಸ್ ವೃತ್ತ ಸಮೀಪದ ಜೆಎಸ್ಎಸ್ ಬಾಲಜಗತ್‌ನಲ್ಲಿ ಆಯೋಜಿಸಿರುವ ಚಿತ್ರಕಲಾ ಶಿಬಿರವು ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತಿದೆ. ಸುಮಾರು 22 ದಿನಗಳ ಈ ಬೇಸಿಗೆ ಶಿಬಿರವು ಹೊಸ ಬಗೆಯ ಕಲಾವಿದರನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ.ಕಲಾವಿದರಾಗಬೇಕು ಎಂಬ ಬಯಕೆಯನ್ನೊತ್ತ ಅನೇಕ ಮಕ್ಕಳ ಜೀವನಕ್ಕೆ ಹೊಸ ರೂಪ ಕೊಡುವ ಈ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಬೇಸಿಗೆ ಶಿಬಿರಗಳೆಂದರೆ ಯೋಗ, ಸಮರ ಕಲೆ, ಚಿತ್ರಕಲೆ, ಜಾನಪದ, ರಂಗಕಲೆ ಹೀಗೆ ಎಲ್ಲವನ್ನೂ ಮಕ್ಕಳಿಗೆ ಹೇಳಿ ಕೊಡುವ ಶಿಬಿರಗಳಿವೆ. ಆದರೆ ಚಿತ್ರಕಲೆಗಾಗಿಯೇ ಮೀಸಲಿರುವ ಶಿಬಿರ ಇದೊಂದೆ.ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಶಿಬಿರ ನಡೆಯುತ್ತಿದೆ. ಮಕ್ಕಳಿಗೆ 11 ಗಂಟೆ ಸುಮಾರಿಗೆ ಸ್ನ್ಯಾಕ್ಸ್ನೀಡಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಹಿಂದಿರುಗುತ್ತಾರೆ. ವಯೋಮಾನದ ಆಧಾರದ ಮೇಲೆ ನಾಲ್ಕೈದು ಗುಂಪುಗಳಲ್ಲಿ ಚಿತ್ರ ಬಿಡಿಸುವುದನ್ನು ಕಲಿಸಲಾಗುತ್ತದೆ.ಪ್ರಮುಖವಾಗಿ ಸ್ಮರಣ ಚಿತ್ರಕಲೆ, ನಿಸರ್ಗ ಚಿತ್ರಕಲೆ, ವಸ್ತು ಚಿತ್ರಕಲೆ, ಡಿಜಾಯಿನ್ ಕಲೆ, ಎಂಬೋಜಿಂಗ್ಪೇಟಿಂಗ್, ಕ್ಯಾನ್ವಾಸ್ಪೇಟಿಂಗ್, ಪ್ರೀ ಹ್ಯಾಂಡ್ಡ್ರಾಯಿಂಗ್, ಗ್ಲಾಸ್ ಪೇಟಿಂಗ್ ಮತ್ತು ಪೇಪರ್ಕ್ರಾಫ್ಟ್ ಹೇಳಿ ಕೊಡಲಾಗುತ್ತದೆ.ಶಿಬಿರದಲ್ಲಿ ಒಂದು ದಿನ ಹೊರಗೆ ಕರೆದೊಯ್ದು ಪ್ರಕೃತಿ ಚಿತ್ರಗಳನ್ನು ಬಿಡಿಸುವುದು ಕಲಿಸಲಾಗುತ್ತದೆ. ಬಳಿಕ ಸುತ್ತೂರಿಗೆ ಭೇಟಿ ನೀಡಿ ವಾಪಸ್ಮೈಸೂರಿಗೆ ಕರೆ ತರಲಾಗುತ್ತದೆ. ಸಮಾರೋಪದ ವೇಳೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜೇತರಿಗೆ ನಗದು ಬಹುಮಾನ ಹಾಗೂ ಉತ್ತಮ ಚಿತ್ರಗಳ ಪ್ರದರ್ಶನವನ್ನೂ ಆಯೋಜಿಸಲಾಗುತ್ತದೆ.-- ಬಾಕ್ಸ್--
- ಬಿ. ಲಿಖಿತಾ.---ನಾನು ನಾಲ್ಕು ವರ್ಷದಿಂದ ಶಿಬಿರಕ್ಕೆ ಬರುತ್ತಿದ್ದೇನೆ. ಚಿತ್ರ ಬರೆಯುವವರಿಗೆ ಉತ್ತಮ ಪ್ರೋತ್ಸಾಹ ಕೊಡುತ್ತಾರೆ. ಚೆನ್ನಾಗಿ ಹೇಳಿ ಕೊಡುತ್ತಾರೆ. ಆದ್ದರಿಂದ ಪ್ರತಿ ವರ್ಷ ಶಿಬಿರಕ್ಕೆ ಬರುತ್ತೇನೆ.
- ಪಿ.ಕೆ. ಮೋನಿಷಾ.