ಸುಂದರ ಬದುಕಿಗೆ ಕಲೆ ಪೂರಕ: ಸಚ್ಚಿದಾನಂದ ಆಚಾರ್ಯ

KannadaprabhaNewsNetwork |  
Published : Apr 18, 2024, 02:18 AM IST
ಕಲೆ17 | Kannada Prabha

ಸಾರಾಂಶ

ಕಲಾವಿದ ಪಿ.ಎನ್. ಆಚಾರ್ಯ ಅಭಿಮಾನಿ ಬಳಗವು ಹಿರಿಯ ಕಲಾ ಅಧ್ಯಾಪಕ ಶಿರ್ವ ಸಚ್ಚಿದಾನಂದ ಆಚಾರ್ಯ ಅವರಿಗೆ ಶಿರ್ವದ ಅವರ ಮನೆಯಲ್ಲಿ ಸನ್ಮಾನ ಮಾಡಿತು.

ಕನ್ನಡಪ್ರಭ ವಾರ್ತೆ ಉಡುಪಿಕಲಾವಿದ ಪಿ.ಎನ್. ಆಚಾರ್ಯ ಅಭಿಮಾನಿ ಬಳಗವು ಹಿರಿಯ ಕಲಾ ಅಧ್ಯಾಪಕ ಶಿರ್ವ ಸಚ್ಚಿದಾನಂದ ಆಚಾರ್ಯ ಅವರಿಗೆ ಶಿರ್ವದ ಅವರ ಮನೆಯಲ್ಲಿ ಸನ್ಮಾನ ಮಾಡಿತು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು, ಸುಂದರ ಬದುಕಿಗೆ ಕಲೆ ಪೂರಕ. ಸಾವಿರಾರು ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣ ನೀಡಿದ್ದೇನೆ, ಕಲೆಯಿಂದಾಗಿಯೇ ಎಲ್ಲರೂ ನನ್ನನ್ನು ಗುರುತಿಸುವಂತಾಗಿದೆ. ಕಲೆಯಿಂದ ಸುಂದರ ಬದುಕು ಕಟ್ಟಿಕೊಂಡಿದ್ದೇನೆ. ಈ ಅಭಿಮಾನಕ್ಕೆ ಬಳಗಕ್ಕೆ ನಾನು ಋಣಿಯಾಗಿದ್ದೇನೆ ಎಂದರು.ಅಭಿಮಾನಿ ಬಳಗದ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಬಳಗದ ಸದಸ್ಯರೊಂದಿಗೆ ಶಾಲು, ಹಾರ, ಮೈಸೂರು ಪೇಟ, ಫಲ-ತಾಂಬೂಲ, ಸನ್ಮಾನ ಪತ್ರ ಹಾಗೂ ಸ್ಮರಣಿಕೆಯೊಂದಿಗೆ ೧೦,೦೦೦ ರು. ನಗದನ್ನು ನೀಡಿ ಸನ್ಮಾನಿಸಿದರು.

ಬಳಿಕ ಮಾತನಾಡಿ, ಕಲಾವಿದರು ನಮ್ಮ ಸಂಸ್ಕೃತಿಯ ರಾಯಭಾರಿಗಳು, ಅವರನ್ನು ಗೌರವಿಸಿದಾಗ ಸಂಸ್ಕೃತಿಯ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ವಿಶ್ವಕರ್ಮ ಕಲಾ ಪರಿಷತ್ ಹಮ್ಮಿಕೊಂಡ ಸಮರ್ಪಣಂ ಕಲೋತ್ಸವ-೨೦೨೪ರಲ್ಲಿ ೫ ಮಂದಿ ಯುವ ಕಲಾವಿದರನ್ನೂ ಅಭಿಮಾನಿ ಬಳಗ ಸನ್ಮಾನಿಸಿದೆ ಎಂದರು.

ಅಭಿಮಾನಿ ಬಳಗದ ಮಾರ್ಗದರ್ಶಕ ಕೆ.ಮಹಾಬಲೇಶ್ವರ ಆಚಾರ್ಯ ಅವರು ಪ್ರಸ್ತಾವನೆ ಮಾಡಿದರು. ಕೆ. ಜಯರಾಮ್ ಆಚಾರ್ಯ ಅಭಿನಂದನಾ ನುಡಿ ಆಡಿದರು.

ಪಿ.ಎನ್. ಆಚಾರ್ಯ ಅಭಿಮಾನಿ ಬಳಗದ ಸದಸ್ಯರಾದ ನಿವೃತ್ತ ತಹಸೀಲ್ದಾರ್ ಕೆ. ಮುರಳಿ, ಕಲಾವಿದೆ ರೂಪಾ ವಸುಂದರ ಪಡುಬಿದ್ರಿ, ಗಣೇಶ್ ಎನ್. ಪ್ರಸಾದ್, ಕಲಾವಿದ ಪಿ.ಎನ್. ಆಚಾರ್ಯ ಹಾಗೂ ಕಲಾ ಶಿಕ್ಷಕ ಸಚ್ಚಿದಾನಂದ ಆಚಾರ್ಯ ಮತ್ತು ರಾಜೇಶ್ ಆಚಾರ್ಯ, ಗಣೇಶ್ ಆಚಾರ್ಯ ಹಾಗೂ ಕುಟುಂಬದವರು, ಹಿತೈಷಿಗಳೆಲ್ಲರೂ ಈ ಪುರಸ್ಕಾರಕ್ಕೆ ಸಾಕ್ಷಿಯಾದರು. ಕೆ. ಜಯರಾಮ ಆಚಾರ್ಯರು ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌